ಕೊಪ್ಪಳ27: ಕೊಪ್ಪಳ ನಗರದ ನಿಮರ್ಿತಿ ಕೇಂದ್ರದಲ್ಲಿ ನಗರಸಭೆ ಕೊಪ್ಪಳ ಹಾಗೂ ಸಮೃದ್ಧಿ ಸಂಸ್ಥೆ ಸಿಂಧನೂರ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಸಂಸ್ಥೆಗಳ ಸಂಯೋಗದಲ್ಲಿ ಸ್ವಚ್ಚ ಭಾರತ ಮೀಷನ್ ಯೋಜನೆ ಅಡಿಯಲ್ಲಿ ಸ್ವಚ್ಚತೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ, ವಾರ್ಡ ಮಟ್ಟದ ಐಇಸಿ ಕಾರ್ಯಕ್ರಮವನ್ನು ಅಶೋಕ ನೈರ್ಮಲ್ಯ ನಿರೀಕ್ಷಕ ನಗರಸಭೆ ಕೊಪ್ಪಳರವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ವಚ್ಚ ಭಾರತ ಮೀಷನ್ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ, ಶೌಚಾಲಯ ಬಳಕೆ, ಕರಗುವ ಕಸ ಮತ್ತು ಕರಗದೆ ಇರುವ ಕಸವನ್ನು ಬೇರ್ಪಡಿಸಿ ನಗರ ಸಭೆಯಿಂದ ಡಬ್ಬಿಗಳನ್ನು ವಿತರಣೆ ಮಾಡಲಾಗುವುದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಿಡಿಪಿಓ ಸಿಂಧು ಡಿ ಎಲಿಗಾರರವರು ಮಾತನಾಡುತ್ತಾ ಮಹಿಳೆಯರಿಗೆ ಶೌಚಾಲಯದಿಂದ ಆಗುವ ಅನುಕೂಲಗಳು ಮತ್ತು ಆರೋಗ್ಯ, ಸ್ವಾಭಿಮಾನದ ಪ್ರಶ್ನೇ, ಗಭರ್ೀಣಿ ಬಾಣಂತಿಯರಿಗೆ ಶೌಚಾಲಯ ಇಲ್ಲದ ಮಹಿಳೆಯರು, ಸೂರ್ಯ ಹುಟ್ಟುವ ಮುನ್ನ ಹಾಗೂ ಸೂರ್ಯ ಮುಳಗುವ ನಂತರ ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಹುಟ್ಟುವ ಮಕ್ಕಳ ಆರೋಗ್ಯ ಪರಿಪೂರ್ಣರಾಗಿರುವುದಿಲ್ಲ ಆದ್ದರಿಂದ ಶೌಚಾಲಯದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.
ನಂತರ ಜಯಶೀಲ ಆರೋಗ್ಯ ನಿರೀಕ್ಷಕರು ನಗರಸಭೆ ಕೊಪ್ಪಳ ರವರು ಮಾತನಾಡುತ್ತಾ ನಗರಸಭೆಯ ವ್ಯಾಪ್ತಿಯಲ್ಲಿ ಇರುವ ಚರಂಡಿಗಳಿಗೆ ಪ್ಲಾಸ್ಟಿಕ್ ಎಸೆಯದಂತೆ ಮನವಿ ಮಾಡಿದರು ಹಾಗೂ ಪ್ಲಾಸ್ಟೀಕ್ ಆರೋಗ್ಯಕ್ಕೆ ಹಾನಿಕಾರ, ಪ್ಲಾಸ್ಟೀಕ್ ಬಳಕೆ ದುಷ್ಟಪರಿಣಾಮಗಳು, ನಗರಸಭೆ ನೀಡುವ ಶೌಚಾಲಯದ ಪ್ರೋತ್ಸಾಹಧನವನ್ನು ಪಡೆಯಲು ತಿಳಿಸಿದರು.
ನಂತರ ಮಲ್ಲಯ್ಯ ಗೊರಕಲ್ಲ ಮಾತನಾಡಿ ಶ್ರಮಜೀವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮಾತನಾಡಿ ಪ್ರತಿಯೊಬ್ಬರು ಶೌಚಾಲಯವನ್ನು ಕಟ್ಟಿಕೊಳ್ಳುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಚಭಾರತದ ಕನಸು ನನಸಾಗಲು ಶೌಚಾಲಯ ಕಟ್ಟಿ ಉಪಯೋಗಿಸಿ ದೇಶದ ಹೆಜ್ಜೆ ಸ್ವಚ್ಚತೆಯ ಕಡೆ ನಡೆಯಲು ಸಾಧ್ಯ ಎಂದು ತಿಳಿಸಿದರು.
ಮೈಸೂರಿನ ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಸಂಸ್ಥೆ ಜಿಲ್ಲಾ ವಿಕೇಂದ್ರಿಕೃತ ತರಬೇತಿ ಸಂಯೋಜಕ ಹೆಚ್.ಎಸ್ ಹೊನ್ನೂಂಚಿ ರವರು ಮಾತನಾಡುತ್ತಾ ಮನಗೆ ದೇವರ ಕೋಣೆ ಎಷ್ಟು ಮುಖ್ಯವು ಶೌಚಾಲಯ ಅಷ್ಠೇ ಮುಖ್ಯ ಎಂದು ತಿಳಿಸಿ ಹಲವಾರು ನಿರ್ಮಲ ಕನರ್ಾಟಕ =, ನಿರ್ಮಲ ಭಾರತ ಅಭಿಯಾನ ಮತ್ತು ಸ್ವಚ್ಛ ಭಾರತ ಅಭಿಯಾನ, ಸ್ವಚ್ಚ ಭಾರತ ಪರಿಕಲ್ಪನೆಯ ಬಗ್ಗೆ ಹಾಗೂ ವಾರ್ಡ ಮಟ್ಟದ ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ವಿವಿಧ ಅಧಿಕಾರಿಗಳಿಗೆ ತರಬೇತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಶಿವಲಿಂಗಪ್ಪ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ರಡ್ಡೇರ, ಸಂಸ್ಥೆಯ ಸದಸ್ಯ ರಾಜಾಸಾಬ, ಅಂಗನವಾಡಿ ಕಾರ್ಯಕತರ್ೆ, ಆಶಾ ಕಾರ್ಯಕತರ್ೆಯರು, ಸಾರ್ವಜನಿಕರು, ಸ್ತ್ರೀ ಶಕ್ತಿ ಸಂಘದವರು, ಗಭರ್ೀಣಿ ಬಾಣಂತಿಯರು, ಕಟ್ಟಡ ಕಾಮರ್ಿಕರು ಇತರರು ಉಪಸ್ಥಿತರಿದ್ದರು