ವಾ.ಕ.ರ.ಸಾ.ಸಂಸ್ಥೆಯ ಮಹಿಳಾ ಸಿಬ್ಬಂದಿಗಳಿಗೆ ಕ್ಯಾನ್ಸರ್ ಖಾಯಿಲೆಯ ತಿಳುವಳಿಕೆ ಹಾಗೂ ಬೃಹತ್ ಉಚಿತ
ಹುಬ್ಬಳ್ಳಿ 07 : ದಿನಾಂಕ:07-02-2025 ರಂದು ಬೆಳಿಗ್ಗೆ 10:00 ಗಂಟೆಗೆ ನಾನಕಿ ಕನ್ವೆನ್ಷನ್ ಹಾಲ್, ಗೋಕುಲ ರಸ್ತೆ ಹುಬ್ಬಳ್ಳಿ (ಪ್ರಾದೇಶಿಕ ತರಬೇತಿ ಕೇಂದ್ರದ ಎದುರುಗಡೆ)ಯಲ್ಲಿ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ್ಘ ಸಂಶೋಧನಾ ಸಂಸ್ಥೆ ಹುಬ್ಬಳ್ಳಿ, ಕರ್ನಾಟಕ ಕ್ಯಾನ್ಸರ್ ಥೆರೆಪಿ ್ಘ ರಿಸರ್ಚ್ ಇನ್ಸ್ಟಿಟ್ಯೂಟ್ ನವನಗರ, ಹುಬ್ಬಳ್ಳಿ ಹಾಗೂ ಅಸೋಶಿಯೇಶನ್ ಆಪ್ ಸರ್ಜನ್ಸ್ ಆಪ್ ಇಂಡಿಯಾ ಧಾರವಾಡ ರವರ ಸಹಯೋಗದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಹಿಳಾ ಸಿಬ್ಬಂದಿಗಳಿಗೆ ಕ್ಯಾನ್ಸರ್ ಖಾಯಿಲೆಯ ತಿಳುವಳಿಕೆ ಹಾಗೂ ಬೃಹತ್ ಉಚಿತ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ್ಘ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್.ಎಫ್.ಕಮ್ಮಾರ ನೆರವೇರಿಸಿ ಮಾತನಾಡಿ ಬಹಳಷ್ಟು ಜನರಿಗೆ ಕ್ಯಾನ್ಸರ್ ಎಂದರೆ ಭಯ ಇದೆ, ಆದರೆ ಕ್ಯಾನ್ಸರ್ ಸಹ ಇತರ ಸಾಮಾನ್ಯ ಕಾಯಿಲೆಗಳಂತೆಯೆ ಒಂದು. ಆರಂಭಿಕ ಹಂತದಲ್ಲಿಯೇ ತಪಾಸಣೆಗೆ ಒಳಗಾದರೆ ಗುಣಪಡಿಸಬಹುದಾಗಿದೆ. ಎಲ್ಲ ಸಿಬ್ಬಂದಿಗಳು ಈ ಮೂರು ದಿನಗಳ ಶಿಬಿರದಲ್ಲಿ ಎಲ್ಲರೂ ತಪಾಸಣೆ ಮಾಡಿಸಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ವಾ.ಕ.ರ.ಸಾ.ಸಂಸ್ಥಯು ಇಂತಹ ಒಂದು ಬೃಹತ್ ಶಿಬಿರವನ್ನು ಹಮ್ಮಿಕೊಂಡಿದ್ದು ಅತ್ಯಂತ ಶ್ಲಾಘನೀಯವಾದುದು ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ, ಭಾ.ಆ.ಸೇ ರವರು ಮಾತನಾಡಿ ಮಹಿಳಾ ದಿನಾಚರಣೆಯನ್ನು ಒಂದು ದಿನ ಆಚರಿಸಿ ಸಂಭ್ರಮಿಸುವದಕ್ಕಿಂತ, ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಸಂಸ್ಥೆಯ ಎಲ್ಲ ಮಹಿಳಾ ಸಿಬ್ಬಂದಿಗಳಿಗೆ ಕ್ಯಾನ್ಸರ್ ಖಾಯಿಲೆ ಬಗ್ಗೆ ತಿಳುವಳಿಕೆ ಹಾಗೂ ತಪಾಸಣಾ ಶಿಬಿರವನ್ನು ಸಂಸ್ಥೆಯ ಎಲ್ಲ 09 ವಿಭಾಗಗಳಲ್ಲಿ ಆಯೋಜಿಸಲಾಗುತ್ತಿದ್ದು ಎಲ್ಲರೂ ಕಡ್ಡಾಯವಾಗಿ ತಪಾಸಣೆಗೆ ಒಳಾಗಬೇಕು ಎಂದು ತಿಳಿಸಿದರು. ಮಹಿಳಾ ಸಿಬ್ಬಂದಿಗಳು ತಮ್ಮ ಆರೋಗ್ಯದ ಕಡೆ ಗಮನ ಕೊಡದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೀವು ಆರೋಗ್ಯದಿಂದ ಇದ್ದಾಗ ಮಾತ್ರ ನಿಮ್ಮ ಕುಟುಂಬವನ್ನು ನೋಡಿಕೊಳ್ಳಲು ಹಾಗೂ ಆರೋಗ್ಯಪೂರ್ಣವಾದ ಕರ್ತವ್ಯ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಸಂಸ್ಥೆಯ ಎಲ್ಲಾ ಮಹಿಳಾ ಸಿಬ್ಬಂದಿಗಳು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ಬಿ.ಆರ್.ಪಾಟೀಲ ಅಧ್ಯಕ್ಷರು, ಕರ್ನಾಟಕ ಕ್ಯಾನ್ಸರ್ ಥೆರೆಫಿ ್ಘ ರಿಸರ್ಚ್ ಇನ್ಸ್ಟಿಟ್ಯೂಟ್ ನವನಗರ, ಹುಬ್ಬಳ್ಳಿ.ರವರು ಮಾತನಾಡಿ ಕ್ಯಾನ್ಸರ್ ಎಂದರೇನು? ಮಹಿಳೆಯರಿಗೆ ಬರಬಹುದಾದ ಕ್ಯಾನ್ಸರ್ ಪ್ರಕಾರಗಳು ಯಾವುವು? ಮಹಿಳೆಯರ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಕುರಿತು ವಿಡಿಯೋ ಪ್ರದರ್ಶನ ಮೂಲಕ ಸವಿಸ್ತಾರವಾಗಿ ತಿಳಿಸಿದರು. ಸ್ತನ ಕ್ಯಾನ್ಸರ್ ಬಗ್ಗೆ ತಿಳಿಸುತ್ತಾ ಎಲ್ಲ ಮಹಿಳೆಯರು ಸ್ವತಃ ತಪಾಸಣೆ ಮಾಡಿಕೊಳ್ಳಬೇಕು. ಸ್ವತಃ ತಪಾಸಣೆಯನ್ನು ಹೇಗೆ ಮಾಡಿಕೊಳ್ಳಬೇಕು ಮತ್ತು ಯಾವ ಸಮಯದಲ್ಲಿ ವೈದ್ಯರ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಿದರು. ಕ್ಯಾನ್ಸರ್ ಇದ್ದರೇ ಭಯ ಪಡಬೇಡಿ, ಆರಂಭಿಕ ಹಂತದಲ್ಲಿಯೇ ತಪಾಸಣೆಗೆ ಒಳಗಾದಲ್ಲಿ ಆಧುನಿಕ ತಂತ್ರಜ್ಞಾನಗಳ ಮೂಲಕ ಗುಣಪಡಿಸಬಹುದಾಗಿದೆ. ನಂತರ ಗರ್ಭಕೋಶದ ಕ್ಯಾನ್ಸರ್ ಕುರಿತು ಸಹ ಸವಿಸ್ತಾರವಾಗಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ನಿರ್ವಾಹಕ ಸಿಬ್ಬಂದಿಯೊರ್ವರು ಮಾತನಾಡಿ ತಮಗೆ ಬಂದಿದ್ದ ಕ್ಯಾನ್ಸರ್ ಕಾಯಿಲೆ ಬಗ್ಗೆ ಸ್ವಂತ ಅನುಭವಗಳನ್ನು ಹಂಚಿಕೊಂಡು ಕ್ಯಾನ್ಸರ್ ಗುಣವಾಗಲು ಆರ್ಥಿಕವಾಗಿ/ನೈತಿಕವಾಗಿ ಸಹಕರಿಸಿದ ಸಂಸ್ಥೆಗೆ, ಸಹೊದ್ಯೋಗಿಗಳಿಗೆ ಧನ್ಯವಾದ ತಿಳಿಸಿದರು. ಡಾ.ಶಿಲ್ಪಾ ಹುಚ್ಚಣ್ಣವರ ಅಧ್ಯಕ್ಷರು, ಂಖಋ ಧಾರವಾಡ ಜಿಲ್ಲೆ,ರವರು ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಸಿಬ್ಬಂದಿಗಳ ಬಗೆಗೆ ಇರುವ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಪಿ.ವೈ.ನಾಯಕ, ಬಿ.ಬೋರಯ್ಯ, ಶ್ರೀಮತಿ ಜಗದಂಬಾ ಕೋಪರ್ಡೆ, ಜಿ.ಶ್ರೀನಾಥ, ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಚ್.ರಾಮನಗೌಡರ್, ಅಧಿಕಾರಿಗಳಾದ ರವಿ ಅಂಚಗಾವಿ, ಪಿ.ಆರಿ್ಕರಣಗಿ, ತಸ್ವಿನಾಭಾನು ಪಟವೇಗಾರ ಹಾಗೂ ಡಾ. ಉಮೇಶ ಹಳ್ಳಿಕೇರಿ, ಒಆ ಕಚಿಣಠಠಣ, ಹುಬ್ಬಳ್ಳಿ, ಕೆನರಾ ಬ್ಯಾಂಕಿನ ಅಧಿಕಾರಿ/ಸಿಬ್ಬಂದಿಗಳು, ಸಂಸ್ಥೆಯ ಗೌರವ ವೈದ್ಯಾಧಿಕಾರಿಗಳಾದ ಡಾ.ರಾಯಜಿ, ಕಾರ್ಮಿಕ ಮುಖಂಡರಾದ ಆರ್.ಎಫ್.ಕವಳಿಕಾಯಿ ಹಾಗೂ ಸಂಸ್ಥೆಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿಗಳಾದ ಪಿ.ವೈ.ನಾಯಕ.ರವರು ಸ್ವಾಗತಿಸಿದರು. ಸುನೀಲ ಪತ್ರಿ.ರವರು ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ನವೀನಕುಮಾರ ತಿಪ್ಪಾ.ರವರು ವಂದಿಸಿದರು. ಕೆನರಾ ಬ್ಯಾಂಕ ನವರು ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ಸಿಹಿ ಹಂಚಿದರು. ಸದರಿ ಶಿಬಿರದಲ್ಲಿ ತಪಾಸಣೆಗೆ ಒಳಗಾದ ಸಿಬ್ಬಂದಿಗಳಿಗೆ ರೋಟರಿ ಕ್ಲಬ್ ಹುಬ್ಬಳ್ಳಿ ಎಲೈಟ್ ರವರು ಜ್ಯೂಸ್ ವಿತರಿಸಿದರು.