ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಜಾಗೃತಿ ಹಾಗೂ ರಕ್ಷಣಾ ಕಾರ್ಯಚರಣೆ; ಒಬ್ಬ ಕಿಶೋರ ಕಾರ್ಮಿಕ ಪತ್ತೆ
ಹುಬ್ಬಳ್ಳಿ 12: ಇಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ಯಾನ ಇಂಡಿಯಾ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿ ಆಂದೋಲನದ ಅಂಗವಾಗಿ ಕಾರ್ಮಿಕ ಆಯುಕ್ತರ ಹಾಗೂ ಸಹಾಯಕ ಕಾರ್ಮಿಕರ ಆಯುಕ್ತರ ನಿರ್ದೇಶನದ ಮೇರೆಗೆ ಹುಬ್ಬಳ್ಳಿಯ ದುರ್ಗದಬೈಲ್, ಬಟರ ಮಾರ್ಕೆಟ್, ಸಿಬಿಟಿ, ಸುತ್ತಲಿನ ವ್ಯಾಪ್ತಿಯಲ್ಲಿ ಬರುವ ಅಂಗಡಿ, ಹೋಟೆಲ್, ಬಾರ್ ್ಘ ರೆಸ್ಟೋರೆಂಟ, ಬೇಕರಿ, ಗ್ಯಾರೆಜ, ಮುಂತಾದ ವಾಣಿಜ್ಯ ಸಂಸ್ಥೆಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಕುರಿತು ಜಾಗೃತಿ ಹಾಗೂ ತಪಾಸಣೆಯನ್ನು ಜಿಲ್ಲಾ ಆಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದುರ್ಗದಬೈಲ್, ಬಟರ ಮಾರ್ಕೆಟ್, ಸಿಬಿಟಿ, ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹಾಗೂ ವ್ಯಾಪ್ತಿಯಲ್ಲಿ ಬರುವ ಅಂಗಡಿ, ಹೋಟೆಲ್, ಬಾರ್ ್ಘ ರೆಸ್ಟೋರೆಂಟ, ಬೇಕರಿ, ಗ್ಯಾರೆಜ, ಮುಂತಾದ ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಬಾಲಕಾರ್ಮಿಕ ಅಥವಾ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲೀಕರಿಗೆ ಕಾಯ್ದೆಯಡಿ ರೂ 20 ರಿಂದ 50 ಸಾವಿರ ವರೆಗೆ ದಂಡ ಇಲ್ಲವೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾಯ್ದೆಗೆ ಪ್ರಾವಿದಾನವಿದೆ ಎಂದು ಜಾಗೃತಿಯನ್ನು ಮೂಡಿಸಲಾಯಿತು, ಈ ಸಂದರ್ಭದಲ್ಲಿ ಮನಿಷಾ ನಾವೆಲ್ಟಿ, ಪಾನ ಬಜಾರ್ ಇಲ್ಲಿ ಒಬ್ಬ ಕಿಶೋರ ಕಾರ್ಮಿಕರನ್ನು ಗುರುತಿಸಿ ಮಗುವನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪಾಲಕರ ವಶಕ್ಕೆ ಒಪ್ಪಿಸಲಾಗಿದೆ. ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ. ಕರಪತ್ರ ಮತ್ತು ಸ್ಟಿಕರ್‌ಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಸಾರ್ವಜನಿಕ ಸ್ಥಳ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಅಂಟಿಸಲಾಯಿತು. ಈ ತಪಾಸಣಾ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಬಸವರಾಜ ಪಂಚಾಕ್ಷರಿಮಠ., ಹಿರಿಯ ಕಾರ್ಮಿಕ ನೀರೀಕ್ಷಕರಾದ ಅಶೋಕ ಒಡೆಯರ್, ಸಂಗೀತಾ ಬೆನಕೊಪ್ಪ, ರಜನಿ ಹಿರೇಮಠ, ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮುತ್ತು ವಡ್ಡರ್, ಪೊಲೀಸ್ ಇಲಾಖೆಯ ಸಹಾಯಕ ಆರಕ್ಷಕ ನೀರೀಕ್ಷಕರಾದ ವಾಯ್. ಎಸ್. ಗೌರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೆಲ್ವೀಚಾರಕಾರದ ರೇಖಾ ಸೊರಕೊಪ್ಪ ಉಪಸ್ಥಿತರಿದ್ದರು.