ಲೋಕದರ್ಶನ ವರದಿ
ಬೆಳಗಾವಿ:31:- ಪ್ರಶಸ್ತಿಗಳು ಕಲಾವಿದರ ಆತ್ನ ವಿಶ್ವಾಸವನ್ನು ಹೆಚ್ಚಿಸುತ್ತವೆ. ಮತ್ತು ಇನ್ನಷ್ಟು ಸಕ್ರೀಯವಾಗಿ ರಂಗ ಸೇವೆಯಲ್ಲಿ ನಮ್ಮಲ್ಲಿ ತೊಡಗಿಸಿಕೊಳ್ಳಲು ಸ್ಪೂತರ್ಿ ನೀಡುತ್ತವೆ. ಎಂದು ಉಮೇಶ ತೇಲಿ ಹೇಳಿದರು.
ಅವರು 2019ರ ಮಾರ್ಚ 27 ರಂದು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗಸಂಪದ ಬೆಳಗಾವಿ ಹಾಗೂ ಕನರ್ಾಟಕ ನಾಟಕ ಅಕ್ಯಾಡಮಿ,ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಲೋಕಮಾನ್ಯ ರಂಗ ಮಂದಿರಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಂಗ ಸಂಪದ ನೀಡುವ 2019ರ " ರಂಗ ಸಖ " ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು
ಇಂದಿನ ದಿನಮಾನಗಳಲ್ಲಿ ಪ್ರತಿಭಾವಂತರನ್ನು ಗುತರ್ಿಸಿ ಗೌರವಿಸುವ ಸೌಂಸ್ಕ್ರತಿ ಕಡಿಮೆಯಾಗುತ್ತಿದ್ದು, ಇದರಿಂದಾಗಿ ನಿಜವಾಗಿ ಪ್ರತಿಬೆ ಇರುವ ಪ್ರತಿಭಾವಂತರೂ ಅವಕಾಶವಂಚಿತರಾಗುತ್ತಿರುವದು ವಿಶಾಧನೀಯ ಸಂಗತಿ ಎಂದು ಹೇಳಿದ ಅವರು ಆದರೆ ರಂಗ ಸಂಪದ ಪಾರದರ್ಶಕವಾಗಿ ಆಯ್ಕೆ ಮಾಡಿ ನನಗೆ ಪ್ರಶಸ್ತಿಯನ್ನು ನೀಡಿರುವದು ಸಂತೋಶ ತಂದಿದೆ ಎಂದರು.
"ರಂಗ ಸಖ" ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ರಂಗ ಭೂಮಿಯಲ್ಲಿ ಇನ್ನಷ್ಟು ಬದ್ಧತೆಯಿಂದ ಕೆಲಸ ಮಾಡಲು ಸ್ಪೂತರ್ಿ ನೀಡಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಸರಜೂ ಕಾಟ್ಕರ ಮಾತನಾಡಿದರು. ರಂಗ ಸಂಪದದ ಗೌರವಾಧ್ಯಕ್ಷ ಶ್ರೀಪತಿ ಮಂಜನಬೈಲ ಇವರು ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶ ವಾಚನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಹಿರೀಯ ರಂಗ ನಟ ಎನ್.ಕೆ.ದೇಶಪಾಂಡೆ ,ಗಾಯಕಿ, ನಟಿ ನಿರ್ಮಲಾ ಪ್ರಕಾಶ ,ಖ್ಯಾತ ತಬಲಾವಾದಕ ಜಿ.ಎ..ಕುಲಕಣರ್ಿ(ಬಂಡೂ ಮಾಸ್ತರ) ಇವರನ್ನು ಸತ್ಕರಿಸಲಾಯಿತು. ಸನ್ಮಾನಿತರ ಕುರಿತು ಶೀರಿಷ ಜೋಶಿ ಅಭಿನಂದನಾಪರ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ರಂಗ ಸಂಪದದಗುರುನಾಥ ಕುಲಕಣರ್ಿ, ಜಯಶ್ರೀ ಕ್ಷೀರಸಾಗರ, ಕಟ್ಟಿ. ಪ್ರಸಾದ ಕಾರಜೋಳ ರಮೇಶ ಅನಗಳ ಇತರರು ಉಪಸ್ಥಿತರಿದ್ದರು.
ಸಮಾರಂಭದ ನಂತರ ಅನನ್ಯ ತಂಡ ಬೆಂಗಳೂರು ಇವರು ಅಭಿನಯಿಸಿದಎಸ್.ಎನ್.ಸೇತುರಾಮ ಬರೆದು ನಿದರ್ೇಶಿಸಿರುವ "ಗತಿ" ನಾಟಕ ಪ್ರದರ್ಶಗೊಂಡಿತು.