ಲೋಕದರ್ಶನ ವರದಿ
ಹುಬ್ಬಳ್ಳಿ 17 : ಕುಂದಗೋಳ ತಾಲೂಕಿನ ಗುಡಗೇರಿ ಮಂಡಿಗನಾಳ ಕ್ರಾಸ್ ಬಳಿ ಟಂಟಂ ಹಾಗೂ ಅಟೋ ನೊಡುವೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಮೃತಪಟ್ಟು 7 ಜನರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಸಾದಿಕ್ ಗುದಗಿ ( 12) ಮೃತಪಟ್ಟ ಬಾಲಕ ನಾಗಿದ್ದು ಈತ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸುವ ಮುನ್ನ ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ ಗಾಯಂಗೊಂಡವರನ್ನ ಹುಬ್ಬಳ್ಳಿ ಕಿಮಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಶುವಿನಾಳ ಶರೀಫರ ಜಾತ್ರೆಗೆ ಹೋಗಿ ಬರುವಾಗ ಈಗ ದುರ್ಘಟನೆ ಸಂಭವಿಸಿದೆ. ಗುಡುಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.