ಗದಗ 30: ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ತಂಬಾಕು ನಿಯಂತ್ರಣ ತನಿಖಾ ತಂಡ ಬೆಟಗೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ ಸುತ್ತ ಮುತ್ತ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕೋಟ್ಪಾ 2003 ಕಾಯ್ದೆ ಕುರಿತು ದಿ. 29ರಂದು ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಲಾಯಿತು. ಕೆಲವು ಪಾನ್ ಶಾಪ್ಗಳ ಮುಂದೆ ತಂಬಾಕು ಕಂಪನಿಗಳ ಜಾಹಿರಾತು ಫಲಕ ಹೊಂದಿರುವದು ಕಂಡುಬಂದಿದ್ದು ಅಂತಹ ಫಲಕಗಳನ್ನು ತೆರವುಗೊಳಿಸಿ ಕಾನೂನುರೀತ ಕ್ರಮ ಕೈಗೊಳ್ಳಲಾಯಿತು. ಇನ್ನು ಕೆಲವು ಪಾನ್ ಶಾಪ್ಗಳ ಒಳಗಡೆ ಧೂಮಪಾನ ಸೇವನೆಗೆ ಅನುವು ಮಾಡಿಕೊಡುವದರ ಮೂಲಕ ಪರೋಕ್ಷವಾಗಿ ಬೇರೆಯವರು ತಂಬಾಕು ಸೇವನೆಯ ದುಷ್ಪರಿಣಾಮ ಅನುಭವಿಸಬೇಕಾಗಿದೆ. ಆದಕಾರಣ ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿತ ಪ್ರದೇಶ ಎಂಬ ಸರಕಾರ ಹೊರಡಿಸಿರುವ ಅಧಿಕೃತ 60*30.ಸೆಂ.ಮಿ. ಅಳತೆಯ ನಾಮಫಲಕ ಕಡ್ಡಾಯವಾಗಿ ಬಿತ್ತರಿಸಬೇಕು ಇಲ್ಲವಾದಲ್ಲಿ ರೂ 200 ದಂಡ ವಿಧಿಸಲಾಗುವದು ಶ್ರೀಎಚ್.ಡಿ.ವಣಗೇರಿ ಎ.ಎಸ್.ಐ ತಿಳಿಸಿದರು,ಕೋಟ್ಪಾ ಕಾಯ್ದೆ ಉಲ್ಲಂಘನೆ ಇರುದ್ಧ ಒಟ್ಟು 20 ಪ್ರಕರಣ ದಾಖಲಿಸಿ ಒಟ್ಟು ರೂ.3600 ಗಳನ್ನು ಸಂಗ್ರಹಿಸಲಾಯಿತು, ತಂಡದಲ್ಲಿ ಗೋಪಾಲ ಸುರಪುರ ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ .ಆರೋಗ್ಯ ಇಲಾಖೆಯ ಮಂಜುನಾಥ.ಎಚ್. ತಳವಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಗದಗ, ಪೊಲೀಸ್ ಇಲಾಖೆಯಿಂದ ಎಚ್.ಡಿ.ವಣಗೇರಿ ಎ.ಎಸ್.ಐ. ವಿಜಯ ಕುಮಾರ ಉಪಸ್ಥಿತರಿದ್ದರು.