ಜಿ ಪಿ ಟಿ ಶಿಕ್ಷಕರ ವೇತನ ಬಾಕಿ ಮತ್ತು ವಾರ್ಷಿಕ ವೇತನ ಬಡ್ತಿ ವಿಚಾರವಾಗಿ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ

Association office bearers appeal to field education officers regarding salary arrears and annual s

ಜಿ ಪಿ ಟಿ ಶಿಕ್ಷಕರ ವೇತನ ಬಾಕಿ ಮತ್ತು ವಾರ್ಷಿಕ ವೇತನ ಬಡ್ತಿ ವಿಚಾರವಾಗಿ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ 

ಹೂವಿನ ಹಡಗಲಿ 19 :   ನೂತನವಾಗಿ ನೇಮಕ ಹೊಂದಿರುವ ತಾಲೂಕಿನ ಜಿ ಪಿ ಟಿ ಶಿಕ್ಷಕರ ವೇತನ ಬಾಕಿ ಮತ್ತು ವಾರ್ಷಿಕ ವೇತನ ಬಡ್ತಿ ವಿಚಾರವಾಗಿ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಬಾಕಿ ಇರುವ ವೇತನ,ವಾರ್ಷಿಕ ಬಡ್ತಿ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಲು ಅಧ್ಯಕ್ಷ ಯಂಕಾನಾಯ್ಕ್‌ ನೇತೃತ್ವದಲ್ಲಿ ಮನವಿ ಪತ್ರವನ್ನು ಕಚೇರಿ ಅಧೀಕ್ಷಕರಾದ ಮಂಜುನಾಥ ಗೌಡರಿಗೆ ಸಲ್ಲಿಸಿದರು.ಅಧೀಕ್ಷಕರಾದ ಮಂಜುನಾಥ ಗೌಡರು ಸಕಾರಾತ್ಮಕವಾಗಿ ಸ್ಪಂದಿಸಿ ಆದಷ್ಟು ಬೇಗ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯು ಆನಂದ್ ಕಾರ್ಯದರ್ಶಿ ವಿ ಹೆಚ್ ಯೇಸು ಸರ್ಕಾರಿ ನೌಕರರ ಸಂಘದ ನೂತನ ನಿರ್ದೇಶಕರಾದ ಮಾದೇಶ್ವರ ಕೆ,  ಇ ಸಿ ಒ ಮಿಟ್ಯಾನಾಯ್ಕ್ಜಿ ಪಿ ಟಿ ಶಿಕ್ಷಕರ ಸಂಘದ ಕಾರ್ಯದರ್ಶಿ ಜಿ ತಿರುಕನಗೌಡ, ಪದಾಧಿಕಾರಿಗಳಾದ ಯು ಸಿ ಚನ್ನವೀರ​‍್ಪ,  ಟಿ ಕೆ ಪುಷ್ಪಾ,ಬೆಟ್ಟನಗೌಡ, ಯಶೋಧರ,ಮಹಮದ್ ಆಸಿಫ್, ಚಂದ್ರಶೇಖರ ಎ, ಕೊಟ್ರೇಶ್ ಎನ್, ಪೂಜಾ, ಉಮೇಶ, ಮಹಾಂತೇಶ, ಫಕ್ಕೀರ​‍್ಪ, ಬಸವರಾಜ, ನಾಗಪ್ಪ, ವಿದ್ಯಾಶ್ರೀ, ಶ್ರೀಧರ್, ಮಠದ ವೀರೇಶ್, ಹಾಲಪ್ಪ , ಮಂಜುಶ್ರೀ ಇತರರು ಭಾಗವಹಿಸಿದ್ದರು.