ಕೊಪ್ಪಳ 12: ಕೊಪ್ಪಳ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ರವರು ಆಯೋಜಿಸಿರುವ ಸಸ್ಯಸಂತೆ ರೈತರನ್ನು ಹಾಗೂ ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ.
ಸಸ್ಯ ಸಂತೆಯ ಮುಖ್ಯ ಉದ್ದೇಶ ರೈತರಿಗೆ ಹಾಗೂ ತೋಟಗಾರಿಕೆಯಲ್ಲಿ ಆಸಕ್ತಿ ಇರುವ ಸಾರ್ವಜನಿಕರಿಗೆ ತೋಟಗಾರಿಕೆ ಸಸ್ಯಗಾರಗಳಲ್ಲಿ ವೈಜ್ಞಾನಿಕವಾಗಿ ಉತ್ಪಾದಿಸಿದ ಮತ್ತು ನುರಿತ ಅಧಿಕಾರಿಗಳಿಂದ ದೃಢೀಕರಿಸಿದ ಅನೇಕ ಸಸಿ/ಕಸಿಗಳ-ಹಣ್ಣಿನ ಸಸಿಗಳು, ಹೂ, ತರಕಾರಿ ಅಷ್ಟೇ ಅಲ್ಲದೇ ಅಲಂಕಾರಿಕ ಸಸಿಗಳು, ತೆಂಗಿನ ಸಸಿಗಳು ಅಲ್ಲದೇ ತೋಟಗಾರಿಕೆಯಲ್ಲಿ ಬಳಸಲ್ಪಡುವ ಜೈವಿಕ ಗೊಬ್ಬರಗಳು, ಸಾವಯವ ಗೊಬ್ಬರಗಳು ಮತ್ತು ಕತ್ತರಿ ಗರಗಸದಂತಹ ಉಪಕರಣಗಳು ಬೀಜಗಳು, ಇಲಾಖೆಯ ಯೋಗ್ಯ ದರದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಸುವುದು. ಅಲ್ಲದೇ ರೈತರಿಗೆ ತೋಟಗಾರಿಕೆ ಬಗ್ಗೆ ಸಮಗ್ರ ಮಾಹಿತಿ ನೀಡುವುದು. ಉದ್ದೇಶದಿಂದ ಸಸ್ಯಸಂತೆಯನ್ನು ಆಯೋಜಿಸಲಾಗಿದೆ.
ಹವ್ಯಾಸಿ ತೋಟಗಾರರಿಗೆ ಮತ್ತು ತೋಟಗಾರಿಕೆಯಲ್ಲಿ ಆಸಕ್ತಿಯುಳ್ಳವರಿಗೆ ಮತ್ತು ವಿಷಮುಕ್ತ ಆಹಾರ ಉತ್ಪಾದಿಸುವ ಬಗ್ಗೆ ಕೈ ತೋಟ, ತಾರಸಿ ತೋಟ ಅಲ್ಲದೇ ತೋಟಗಾರಿಕೆಗೆ ಸಂಬಂದಿಸಿದ ಉಪಕಸುಬುಗಳಾದ ಜೇನು ಸಾಕಾಣೆ, ಅಣಬೆ ಕೃಷಿಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ತಜ್ಞರಿಂದ ಮಾಹಿತಿ ನೀಡಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನಗಳಾದ ಜಲಕೃಷಿ, ಹನಿ ನೀರಾವರಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಪರಿಸರ ಸ್ವಚ್ಛಗೊಳಿಸುವ ಹಾಗೂ ನೀರಿನ ಸದ್ಭಳಕೆ ಮಾಡುವುದರ ಮೂಲಕ ರೋಗಗಳನ್ನು ತಡೆಗಟ್ಟುವ ವಿಧಾನಗಳನ್ನು ಸಸ್ಯ ಸಂತೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗುತ್ತಿದ್ದು, ಉದಾ: ಖಾಲಿ ಡಬ್ಬಗಳು, ವಾಹನದ ಟಾಯರ್ಗಳು, ಕುಡಿಕೆ, ಮಡಿಕೆಗಳಲ್ಲಿ ಮತ್ತು ನೀರಿನ ಪ್ಲಾಸ್ಟಿಕ್ ಬಾಟಲಿಗಳಲ್ಲಿ, ಎಳೆ ನೀರಿನ ಬುರುಡೆಗಳಲ್ಲಿ ವಿವಿಧ ಸಸಿಗಳನ್ನು ಬೆಳೆಸುವ ಮೂಲಕ ಮನೆ ಸುತ್ತಲ ಪರಿಸರದ ಸೌಂದಯರ್ೀಕರಣ, ಅಲ್ಲದೇ ಇ-ತ್ಯಾಜ್ಯ ವಸ್ತುಗಳ ನಿರ್ವಹಣೆ, ಶುದ್ದ ಆಮ್ಲಜನಕ ಒದಗಿಸುವ ಗಿಡಗಳ ಬಗ್ಗೆ ಮಾಹಿತಿ, ಔಷದೀ ಗಿಡಗಳ ಬಗ್ಗೆ ಮಾಹಿತಿಯನ್ನು ಈ ಸಂತೆಯಲ್ಲಿ ನೀಡಲಾಗುತ್ತಿದೆ.
ಸಸ್ಯ ಸಂತೆಯಲ್ಲಿ ಹಣ್ಣಿನ ಬೆಳೆಗಳಾದ ವಿವಿಧ ತಳಿ ಮಾವು, ನಿಂಬೆ, ಪೇರಲ, ಅಂಜೂರ, ನೇರಳೆ, ಕರಿಬೇವು, ನುಗ್ಗೆ, ತೆಂಗು ಅಲ್ಲದೇ ಹೂವಿನ ಬೆಳೆಗಳಾದ ಅನೇಕ ಬಣ್ಣ ಬಣ್ಣದ ಗುಲಾಬಿ, ದಾಸವಾಳ, ಮಲ್ಲಿಗೆ, ಪಾರಿಜಾತ ಮತ್ತು ಅಲಂಕಾರಿಕ ಗಿಡಗಳಾದ ಕ್ರೋಟನ್ಸ್, ಸೈಪ್ರಸ್, ಕ್ಯಾಕ್ಟಸ್, ಬೋನ್ಸಾಯ್ ಮಾದರಿ ಗಿಡಗಳು ಯೋಗ್ಯ ದರದಲ್ಲಿ ದೊರೆಯುತ್ತವೆ. ಇದಲ್ಲದೇ ಕೊಳವೆ ಬಾವಿ ಜಲ ಮರುಪೂರಣದ ಮಾದರಿ, ನಿರಂತರ ಆದಾಯಕ್ಕೆ ತೋಟಗಾರಿಕೆ ಬಗ್ಗೆ ಮಾಹಿತಿ ಅಲ್ಲದೇ ರೈತರಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಸಿಕೊಡಲಾಗುತ್ತಿದ್ದು, ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ರೈತರಿಗೆ ತೋಟಗಾರಿಕೆಗೆ ಸಂಬಂಧಿಸಿದ ಅನೇಕ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ತೋಟಗಾರಿಕೆ ಕ್ಷೇತ್ರ ಗಿಣಗೇರದಲ್ಲಿ ಈಗಾಗಲೇ ಆರಂಭಗೊಂಡ ಮಣ್ಣು, ನೀರು ಮತ್ತು ಎಲೆ ವಿಶ್ಲೇಷಣೆ ಪರೀಕ್ಷೆಯನ್ನು ರೈತರು ಕಡಿಮೆ ದರದಲ್ಲಿ ಮಾಡಿಸಿಕೊಳ್ಳಬಹುದಾಗಿದೆ. ಇದರ ಬಗ್ಗೆ ಮಾಹಿತಿ ನೀಡಲು ಸಿಬ್ಬಂದಿ ವರ್ಗ ಕಾರ್ಯ ನಿರ್ವಹಿಸುತ್ತಿದ್ದು ಕರ ಪತ್ರಗಳ ಮೂಲಕ ಮಾಹಿತಿ ನೀಡುತ್ತಿದ್ದಾರೆ. ರೈತರು ಈ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ. ಇದುವರೆಗೂ ಸುಮಾರು 3000 ಕ್ಕೂ ಹೆಚ್ಚಿನ ರೈತರು ಮತ್ತು ಗ್ರಾಹಕರು ಈ ಸಸ್ಯ ಸಂತೆಗೆ ಭೇಟಿ ನೀಡಿದ್ದು ಸಸಿ/ಕಸಿಗಳನ್ನು ಖರೀದಿಸುವುದರ ಜೊತೆಗೆ ತೋಟಗಾರಿಕೆ ಬಗ್ಗೆ ಮಾಹಿತಿಯನ್ನು ಪಡದಿರುತ್ತಾರೆ. ಹಾಟರ್ಿಕ್ಲಿನಿಕ್ ಎಂಬ ಏಕ ಗವಾಕ್ಷಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದಿಂದ ಸಮಗ್ರ ತೋಟಗಾರಿಕೆ ಬಗ್ಗೆ ವಿಡಿಯೋ ಪ್ರದರ್ಶನ, ರೈತರೊಡನೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ತೋಟಗಾರಿಕೆ ವಿಷಯ ತಜ್ಞರು ಮಾಹಿತಿ ನೀಡಲಿದ್ದಾರೆ. ಅನೇಕ ಬೆಳೆಗಳ ತಾಂತ್ರಿಕ ಕರ ಪತ್ರಗಳು ರೈತರಿಗೆ ಲಭ್ಯವಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಸಸ್ಯ ಸಂತೆಯಲ್ಲಿ ಕಳೆದ 3 ದಿನಗಳಿಂದ ಸುಮಾರು 04 ರಿಂದ 05 ಲಕ್ಷದಷ್ಟು ವಹಿವಾಟು ಆಗಿದೆ. ತೆಂಗಿನ ಸಸಿಗಳು ಸುಮಾರು 1.50 ಲಕ್ಷದಷ್ಟು ಮಾರಾಟವಾಗಿವೆ. ರೈತರು/ಸಾರ್ವಜನಿಕರು ತಮಗೆ ಬೇಕಾದ ಅನೇಕ ಹಣ್ಣಿನ ಸಸಿಗಳು, ಹೂವಿನ ಸಸಿಗಳು, ಅಲಂಕಾರಿಕ ಗಿಡಗಳನ್ನು ಇಲಾಖಾ ದರದಲ್ಲಿ ಖರೀದಿಸಿರುತ್ತಾರೆ. ಈಗಾಗಲೇ 5 ಲಕ್ಷಕ್ಕೂ ಮೀರಿ ಮುಂಗಡವಾಗಿ ವಿವಿಧ ಸಸಿಗಳನ್ನು ಕಾಯ್ದಿರಿಸಿದ್ದಾರೆ. ಒಟ್ಟು 10 ಲಕ್ಷದಷ್ಟು ತರಕಾರಿ, ಹೂವಿನ ಮತ್ತು ಇತರೆ ಸಸಿಗಳನ್ನು ಉತ್ಪಾದಿಸಿ ಪೂರೈಸಲು ರೈತರು ಮತ್ತು ಗ್ರಾಹಕರು ಬೇಡಿಕೆ ಸಲ್ಲಸಿದ್ದು, ಇಲಾಖೆಯು ಅವುಗಳನ್ನು ಪೂರೈಸುವ ಜವಬ್ದಾರಿಯನ್ನು ಹೊಂದಿದ್ದು,
ಒಟ್ಟಾರೆಯಾಗಿ ಈ ಬಾರಿಯ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ಕಾರ್ಯಕ್ರಮವು ಎಂದಿಗಿಂತಲೂ ಆಕರ್ಷಣೀಯವಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಅಷ್ಟೇ ಅಲ್ಲದೇ ಜಿಲ್ಲೆಯ ಉನ್ನತ ಅಧಿಕಾರಿಗಳ ಶ್ಲಾಘನೆಗೂ ಪಾತ್ರವಾಗಿದೆ. ರೈತರನ್ನು ಮತ್ತು ಸಾರ್ವಜನಿಕರನ್ನು ಕೈ ಬೀಸಿ ಸೆಳೆಯುವಲ್ಲಿ ಈ ಬಾರಿಯ ಸಸ್ಯಸಂತೆ ಯಶಸ್ವಿಯಾಗಿದೆ ಎಂದು ತೋಟಗಾರಿಕೆ ಉಪನಿದರ್ೇಶಕ ಕೃಷ್ಣ ಉಕ್ಕುಂದರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.