ಬೈಲಹೊಂಗಲ,15: ಶಿಕ್ಷಕರು ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನ ಪಟ್ಟರೆ ವಿದ್ಯಾಥರ್ಿಗಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ತಾಲೂಕಿನ ಮುರಕೀಬಾಂವಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಎಸ್ಡಿಎಂಸಿ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಶಾಲಾ ಉಸ್ತುವಾರಿ ಸಮಿತಿ, ಶಿಕ್ಷಕರು ಸಹಕಾರದಿಂದ ಕೂಡಿಕೊಂಡು ಪ್ರತಿ ಮಕ್ಕಳ ಏಳ್ಗೆಗಾಗಿ ಶ್ರಮಿಸಬೇಕು. ಇದರಿಂದ ಶಾಲೆಯ ಕೀತರ್ಿ ಹೆಚ್ಚಿಸಲು ಶಿಕ್ಷಣ ಗುಣಮಟ್ಟ ಹೆಚ್ಚಲು ಸಾಧ್ಯವೆಂದರು.
ಮಂಡ್ಯದಲ್ಲಿ ಪ್ರಗತಿಪರ ಸೇವಾ ಸಂಸ್ಥೆಯಿಂದ ನಡೆದ 16 ನೇ ರಾಜ್ಯಮಟ್ಟದ ಚಿತ್ರಕಲಾ ಸ್ಪಧರ್ೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿ ಕಲಾ ಕೌಶಲ್ಯ ಪ್ರಶಸ್ತಿ ಪಡೆದಿರುವ ವಿದ್ಯಾಥರ್ಿನಿ ನೇತ್ರಾ ಉಡಕೇರಿ ಇವರನ್ನು ಶಾಸಕರು ಸತ್ಕರಿಸಿದರು.
ಗ್ರಾ.ಪಂ ಅಧ್ಯಕ್ಷೆ ನಿರ್ಮಲಾ ಸಾವಳಗಿ, ಸದಸ್ಯೆ ನಾಗಮ್ಮಾ ಪಾಟೀಲ, ಬಿ.ಎಫ್.ಕೊಳದೂರ, ಶಿವಾನಂದ ಪಾಟೀಲ, ಎಸ್ಡಿಎಂಸಿ ಉಪಾಧ್ಯಕ್ಷೆ ಸಾವಕ್ಕಾ ವಕ್ಕುಂದ, ಸದಸ್ಯರಾದ ಸುರೇಶ ಉಡಕೇರಿ, ರಾಯನಗೌಡ ಪಾಟೀಲ, ರಾಯನಾಯ್ಕ ನಾಯ್ಕರ, ಶಿಕ್ಷಕರು, ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.