ಸರ್ಕಾರಿ ಆಸ್ಪತ್ರೆಗೆ ನುಗ್ಗಿ ವಾರ್ಡ ವಿಡಿಯೋ ಮಾಡಿದ ನಕಲಿ ಯುಟೂಬ್ ಪತ್ರಕರ್ತರ ಬಂಧನ
ಕಾರವಾರ 06 : ಯುಟೂಬ್ ಪತ್ರಕರ್ತರ ಹೆಸರಲ್ಲಿ ಹಳಿಯಾಳದ ಆಸ್ಪತ್ರೆಗೆ ನುಗ್ಗಿ ರೋಗಿಗಳ ವಾರ್ಡ ವಿಡಿಯೋ ಮಾಡಿದ ಗಣೇಶ್ ರಾಥೋಡ್ ಹಾಗೂ ದಿವ್ಯ ಎಂಬುವವರನ್ನು ಆಸ್ಪತ್ರೆಯ ನರ್ಸ, ವೈದ್ಯೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿ,ಪ್ರಕರಣ ದಾಖಲಿಸಿದ್ದಾರೆ. ಹಳಿಯಾಳ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜೊತೆ ಗಣೇಶ ಮತ್ತು ದಿವ್ಯಾ ಪತ್ರಕರ್ತರ ರೆಂದುಬ ಹೆಸರು ಹೇಳಿಕೊಂಡು ಅನುಚಿತವಾಗಿ ವರ್ತಿಸಿದ್ದರು. ಫೆ.3 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ,ಯೂಟ್ಯೂಬರ್ ಗಳು ಪತ್ರಕರ್ತರೆಂದು ಹೇಳಿ ,ಸರ್ಕಾರಿ ನೌಕರರನ್ನು ಬೆದರಿಸಿ , ವಸೂಲಿ ಮಾಡುವ ದಂಧೆ ಹೆಚ್ಚಾಗುತ್ತಿದ್ದು ,ಹಳಿಯಾಳದಲ್ಲಿ ಮೊದಲ ಬಾರಿಗೆ ಆಸ್ಪತ್ರೆಯ ಸಿಬ್ಬಂದಿ ದೂರು ನೀಡಿ, ನಕಲಿಗಳಿಗೆ ಪಾಠ ಕಲಿಸಿದ್ದಾರೆ.ಆಸ್ಪತ್ರೆಯ ಸಿಬ್ಬಂದಿ ತೇಜಸ್ವಿ ಪಾಲೇಕರ್ ಹಾಗೂ ವೈದ್ಯೆ ಡಾ.ಸೋನಾ ರವರು ಕರ್ತವ್ಯದಲ್ಲಿದ್ದಾಗ, ಅವರ ಅನುಮತಿ ಪಡೆಯದೆ ,ಆಸ್ಪತ್ರೆಯ ವಾರ್ಡ ವಿಡಿಯೋ ಮಾಡಿದ್ದರು.
ಅನುಮತಿ ಇಲ್ಲದೇ ರೋಗಿಗಳ ವಿಡಿಯೋ ಸಹ ಮಾಡಿದ್ದು ಅನುಚಿತ ವರ್ತನೆ ತೋರಿ ಯ್ಯೂಟ್ಯೂಬ್ ನಲ್ಲಿ ಹಾಕಿ ಮಾನ ಕಳೆಯುವ ಬೆದರಿಕೆ ಹಾಕಿದ್ದರು. ಈ ಸಂಬಂಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತು. ಹಾಗೂ ಸರ್ಕಾರಿ ನೌಕರರ ಸಂಘವು ಬ್ಲಾಕ್ ಮೇಲ್ ಮಾಡುವ ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಹಳಿಯಾಳ ಪೊಲೀಸರು ಆರೋಪಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ,ನ್ಯಾಯಾಧೀಶರ ಎದುರು ಆರೋಪಿಗಳನ್ನು ಹಾಜರುಪಡಿಸಿದ್ದರು. ಗಣೇಶ್ ರಾಠೋಡ್, ದಿವ್ಯಾ ಅವರನ್ನು ಫೆ.15 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಜೊಯಿಡಾ ,ದಾಂಡೇಲಿ ಭಾಗದಲ್ಲಿ ನಕಲಿ ಯುಟೂಬ್ ನವರು, ಪತ್ರಕರ್ತರ ಹೆಸರಲ್ಲಿ ಕೆಲವರು ವಸೂಲಿಗೆ ಇಳಿದಿದ್ದು, ಇಂಥವರ ಮೇಲೆ ಸಹ ಪೊಲೀಸರು ಕಣ್ಣಿಟ್ಟಿದ್ದಾರೆ.