ಆರಾಧ್ಯ ದೇವ ಶ್ರೀ ಆಂಜನೇಯ್ಯ ಸ್ವಾಮಿ ಮಹಾರಥೋತ್ಸವ
ಕಂಪ್ಲಿ 31: ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಆರಾಧ್ಯ ದೇವ ಶ್ರೀ ಆಂಜನೇಯ್ಯ ಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ ಜರುಗಿತು. ಇಲ್ಲಿನ ದೇವಸ್ಥಾನದಿಂದ ಹೊರಟ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪುನಃ ದೇವಸ್ಥಾನ ಬಳಿ ಬಂದು ಸಂಪನ್ನಗೊಂಡಿತು. ಭಾಗವಹಿಸಿದ ಭಕ್ತರು ಬಾಳೆಹಣ್ಣು, ಉತ್ತುತ್ತಿ, ಹೂ, ಬಿಲ್ವಪತ್ರಿ ಎಸೆದು, ಭಕ್ತರಿ ಮೆರೆಯುವ ಜತೆಗೆ ಇಷ್ಟಾರ್ಥಗಳು ಲಭಿಸುವಂತೆ ಕೋರಿದರು.ಸುಮಂಗಲಿಯರ ಕಳಸ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರಗು ನೀಡಿದವು. ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಪೂಜಾರಿ ರಮೇಶ ನೇತೃತ್ವದಲ್ಲಿ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕಾರ್ಯಗಳು ಶ್ರದ್ದೆಯಿಂದ ಜರುಗಿದವು.ಭಕ್ತರು ಕಾಯಿ, ಕರ್ುರ ಅರ್ಿಸಿ, ಆಂಜನೇಯ್ಯ ಸ್ವಾಮಿ ಕೃಪೆಗೆ ಪಾತ್ರರಾದರು. ಶಾಸಕ ಜೆ.ಎನ್.ಗಣೇಶ ಭಾಗವಹಿಸಿ, ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಆಂಜನೇಯ್ಯಸ್ವಾಮಿ ಆಡಳಿತ ಮಂಡಳಿ ಸದಸ್ಯರು, ಮುಖಂಡರು, ಭಕ್ತರು ಪಾಲ್ಗೊಂಡಿದ್ದರು.