ಕಣವಿತಿಮ್ಲಾಪುರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ

Appointment of new office bearers for Kanavithimlapura village unit

ಕಣವಿತಿಮ್ಲಾಪುರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ 

ಕಂಪ್ಲಿ 19: ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ(ಜೆ.ಕಾರ್ತಿಕ)ಯ ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ ಗ್ರಾಪಂಯ ಕಣವಿತಿಮ್ಲಾಪುರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

 ಕಣವಿತಿಮ್ಮಲಾಪುರ ಗ್ರಾಮದಲ್ಲಿ ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ  ಗೌರವಾಧ್ಯಕ್ಷರಾಗಿ ಎನ್‌.ರಾಮಯ್ಯ, ಅಧ್ಯಕ್ಷರಾಗಿ ಎನ್‌.ಹನುಮೇಶ, ಉಪಾಧ್ಯಕ್ಷರಾಗಿ ಎನ್‌.ರಾಘವೇಂದ್ರ, ಸಣ್ಣ ನಾಗಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎನ್‌.ವೆಂಕಟೇಶ್, ಖಜಾಂಚಿಯಾಗಿ ಈ.ದೇವೇಂದ್ರ, ಸಂಚಾಲಕರಾಗಿ ಎನ್‌.ಸುಧಾಕರ್, ಪಿ.ಜಗದೀಶ್, ಸಹ ಕಾರ್ಯದರ್ಶಿಯಾಗಿ ಓ.ಮಹಾದೇವಪ್ಪ, ಪಿ.ಮಂಜುನಾಥ, ಸಂಘಟನಾ ಕಾರ್ಯದರ್ಶಿ ಎಂ.ತಿಪ್ಪೇಸ್ವಾಮಿ, ಪದಾಧಿಕಾರಿಗಳಾಗಿ ಎನ್‌.ಯಲಪ್ಪ, ಪಿ.ಹನುಮಂತಪ್ಪ, ಎಂ.ಸಿದ್ದಯ್ಯ, ಟಿ.ಓಬಳೇಶ, ಜಿ.ಸೋಮನಗೌಡ, ಜಿ.ಚಂದ್ರ​‍್ಪ ಇವರು ಸರ್ವಾನುಮತದಿಂದ ಆಯ್ಕೆಗೊಂಡರು.  

ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ವಿ.ನಾಗರಾಜ, ನಂ.10 ಮುದ್ದಾಪುರ ಅಧ್ಯಕ್ಷ ಲಿಂಗರಾಜ, ಉಪಾಧ್ಯಕ್ಷ ಉಮೇಶಗೌಡ, ರಾಮಸಾಗರ ಅಧ್ಯಕ್ಷ ಸಿ.ವಿಶ್ವನಾಥ, ಮುಖಂಡರಾದ ಪುರುಷೋತ್ತಮ ಇದ್ದರು.