ಗುಣಮಟ್ಟದ ಮಾಂಸ ಮಾರಾಟಕ್ಕೆ ಕ್ರಮಕೈಗೊಳ್ಳುವಂತೆ ಪಶು ವೈದ್ಯಾಧಿಕಾರಿಗೆ ಮನವಿ

Appeal to the veterinary officer to take action for the sale of quality meat

ಗುಣಮಟ್ಟದ ಮಾಂಸ ಮಾರಾಟಕ್ಕೆ ಕ್ರಮಕೈಗೊಳ್ಳುವಂತೆ ಪಶು ವೈದ್ಯಾಧಿಕಾರಿಗೆ ಮನವಿ

ಕಂಪ್ಲಿ 08: ಪಟ್ಟಣದ ಮಾಂಸ ಕಮಾಲ್‌ನಲ್ಲಿ ಸತ್ತ, ರೋಗ ಪೀಡಿತ ಕುರಿ, ಕೋಳಿ, ದನದ ಮಾಂಸ ಮಾರುತ್ತಿರುವವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ, ಪಟ್ಟಣದ ಪಶು ಆಸ್ಪತ್ರೆಯ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಯು.ಬಸವರಾಜ ಅವರಿಗೆ ಸಾರ್ವಜನಿಕರು ಮನವಿ ಪತ್ರವನ್ನು ಸಲ್ಲಿಸಿದರು.  ಪುರಸಭೆ ಸದಸ್ಯ ಸಿ.ಆರ್‌.ಹನುಮಂತ ಮಾತನಾಡಿ, ಮಾಂಸದ ಕಮಾಲ್‌ನಲ್ಲಿ ಗುಣಮಟ್ಟದ ಮಾಂಸ ಮಾರಾಟ ಮಾಡಲು ಸೂಕ್ತ ಕ್ರಮ ವಹಿಸಬೇಕಿದೆ. ಮಾಂಸ ಮಾರಾಟಗಾರರಿಗೆ ಈ ಕುರಿತು ತಿಳುವಳಿಕೆ ನೀಡಬೇಕೆಂದು ಆಗ್ರಹಿಸಿದರು. ಡಾ.ಕೆ.ಯು.ಬಸವರಾಜ ಮಾತನಾಡಿ ಪಟ್ಟಣ ಹಾಗೂ ತಾಲ್ಲೂಕಿನ ಎಲ್ಲಾ ಮಾಂಸ ಕಮಾಲ್‌ಗಳನ್ನು ಸ್ಥಳಿಯ ಆಡಳಿತದೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಪರೀಶೀಲಿಸಲಾಗುವುದು.ಕಾನೂನು ಉಲ್ಲಂಘಸಿದ ಕಮಾಲ್ ಮಾರಾಟಗಾರರ ನೋಂದಣಿ ರದ್ದುಪಡಿಸಲಾಗುವುದರೊಂದಿಗೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಕಿರಿಯ ಪಶು ವೈದ್ಯ ಪರೀವೀಕ್ಷಕ ಶಿವಪ್ಪ ವಿ ದೇವಕಿ, ಮುಖಂಡರಾದ ಜಿ.ರಾಮಣ್ಣ, ಡಾ.ಎ.ಸಿ.ದಾನಪ್ಪ, ಸಿ.ವೆಂಕಟೇಶ್, ಬಿ.ದೇವೇಂದ್ರ, ಕೆ.ಮಸ್ತಾನ್, ಬಿ.ಜಾಫರ್ ಸೇರಿದಂತೆ ಇತರರು ಇದ್ದರು. ಫೆ.004: ಕಂಪ್ಲಿ ಪಶು ಆಸ್ಪತ್ರೆಯ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಯು.ಬಸವರಾಜ ಅವರಿಗೆ ಪಟ್ಟಣದ ಸಾರ್ವಜನಿಕರು ಪಟ್ಟಣದಲ್ಲಿ ಗುಣಮಟ್ಟ ಮಾಂಸ ಮಾರಾಟಕ್ಕೆ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.