ಪಾದಚಾರಿಗಳ ಕೆಳ ಸೇತುವೆ ನಿಮರ್ಿಸಲು ಅಗ್ರಹಿಸಿ ಮನವಿ

ಲೋಕದರ್ಶನ ವರದಿ

ಹೋಸಪೇಟೆ  23:ವಿಜಯನಗರ ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಹೊಸಪೇಟೆ ರೈಲು ನಿಲ್ದಾಣಕ್ಕೆ ತೆರಳಿ  ನಿಲ್ದಾಣದ ಪೂರ್ವ ಭಾಗದಲ್ಲಿ ಲಘು ವಾಹನ, ಪಾದಾಚಾರಿಗಳ ಕೆಳ ಸೇತುವೆ ನಿಮರ್ಿಸಬೇಕೆಂದು ಅಗ್ರಹಿಸಿ ರೈಲ್ವೇ ನಿಲ್ದಾಣ ವ್ಯಸ್ಥಾಪಕರಾದ ಎಂ.ಉಮೇಶ್ ಅವರ ಮೂಲಕ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ವಿಜಯನಗರ ರೈಲ್ವೇ ಅಭಿವೃದ್ದಿಕ್ರಿಯಾ ಸಮಿತಿ ಅಧ್ಯಕ್ಷರಾದ ವೈ.ಯಮುನೇಶ್ ಮಾತನಾಡಿ ಹೊಸಪೇಟೆ ರೈಲ್ವೆ ನಿಲ್ದಾಣದ ಉತ್ತರ ದಿಕ್ಕಿನಲ್ಲಿ 88 ಮುದ್ಲಾಪುರ, ಬೆಳಗೋಡು, ರಾಂಪುರ ಮಾಗಾಣಿ, ಬಸವನದುರ್ಗ, ನರಸಾಪುರಮಾಗಾಣಿ, ನಾಗೇನಹಳ್ಳಿ, ಗ್ರಾಮಗಳಿವೆ ಈ ಗ್ರಾಮಗಳಿಂದ ಪ್ರತಿ ನಿತ್ಯ ನೂರಾರು ರೈತರು, ವಿದ್ಯಾಥರ್ಿಗಳು ಕೃಷಿ ಕಾಮರ್ಿಕರು, ಸಾರ್ವಜನಿಕರು ರೈಲ್ವೆ ನಿಲ್ದಾಣದ ಪೂರ್ವ ಭಾಗದಲ್ಲಿರುವ  ರೈಲ್ವೆ ಗೇಟ್ ಮಾರ್ಗದ ಮೂಲಕ ನಗರಕ್ಕೆ ಬಂದು ಹೋಗುತ್ತಾರೆ. ಆದರೆ ಪ್ಯಾಸೆಂಜರ್ ರೈಲುಗಳು, ಗೂಡ್ಸ್ಗಾಡಿಗಳ ನಿರಂತರ ಓಡಾಟದಿಂದ ದಿನದ ಹೆಚ್ಚಿನ ವೇಳೆ ರೈಲ್ವೆ ಗೇಟು ಮುಚ್ಚಲ್ಪಟ್ಟು ಜನರಿಗೆ ವಿಪರೀತ ತೊಂದರೆಯಾಗುತ್ತಿದೆ. ಎಷ್ಟೋಸಲ ತುತರ್ಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ, ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಗಭರ್ಿಣಿ ಸ್ತ್ರೀಯರು, ರೋಗಿಗಳು ಅರ್ಧ ದಾರಿಯಲ್ಲೇ ಸಾವನ್ನಪ್ಪಿದ ನಿಧರ್ಶನಗಳಿವೆ. ರೈತರು ತಮ್ಮ ಹೊಲ ಗದ್ದೆಗಳಿಂದ ಕೃಷಿ ಉತ್ಪನ್ನಗಳನ್ನು ಸಾಗಿಸಲು ಅನಾನುಕೂಲವಾಗುತ್ತಿದೆ. ಗೇಟು ಮುಚ್ಚಿದ ಸಂದರ್ಭದಲ್ಲಿ ವಿದ್ಯಾಥರ್ಿಗಳು ಶಾಲಾ ಕಾಲೇಜುಗಳಲ್ಲಿ ಸಮಯ ಪಾಲನೆ ಮಾಡಲಾಗದೆ ಶೈಕಷಣಿಕವಾಗಿ ಹಿಂದುಳಿಯುವಂತಾಗಿದೆ. ಹಾಗೂ ಚಿಕ್ಕಮಕ್ಕಳು ಶಾಲೆಗೆ ಹೋಗುವ ಧಾವಂತದಲ್ಲಿ ಗೂಡ್ಸ್ ಗಾಡಿಗಳ ಕೆಳಗಿನಿಂದ ಹಳಿ ದಾಟುವ ಸಂದರ್ಭದಲ್ಲಿ ಅಫಘಾತಗಳಾಗುತ್ತಿವೆ. ಆದುದರಿಂದ ಈ ಗ್ರಾಮಗಳ ನಿವಾಸಿಗಳ ಸುಗಮ ಸಂಚಾರಕ್ಕೆ, ಯಾವುದೇ ಅಡೆತಡೆಯಿಲ್ಲದೆ ತಿರುಗಾಡಲು ಅನುಕೂಲವಾಗುವಂತೆ ಹೊಸಪೇಟೆ ರೈಲ್ವೇ ನಿಲ್ದಾಣದ ಪೂರ್ವ ಭಾಗದಲ್ಲಿ ಕೆಳಸೇತುವೆ ನಿಮರ್ಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಲಾಯಿತು. 

ಈ ಸಂದರ್ಭದಲ್ಲಿ ಸಂಘಟನೆಗಳ ಪದಾಧಿಕಾರಿಗಳಾದ ಕಾಶಿನಾಥ ಕುಲಕಣರ್ಿ,  ಶೇಖರ್, ದೇವಪ್ಪ, ಸೋಮಣ್ಣ ಯಾದವ್, ದೀಪಕ್ ಉಳ್ಳಿ, ಕೆ.ಮಹೇಶ್, ಹೆಚ್.ಪೀರಾನ್ ಸಾಬ್, ಎ.ಚನ್ನಪ್ಪ, ಬಿ.ಎಸ್.ಯಮುನಪ್ಪ, ಸಿದ್ದಪ್ಪ, ಮಾರುತಿ, ರುದ್ರಪ್ಪ, ಶ್ರೀರಾಮ್, ವಿನೋದ ಶರ್ಮ, ಕೋರಿಶೆಟ್ಟಿ ಸಿದ್ದಪ್ಪ, ಬಿ.ಬಸಪ್ಪ, ಹಾಗೂ ನಂ:88-ಮುದ್ಲಾಪುರ ಗ್ರಾಮದ ಶಾಲಾ ಮಕ್ಕಳು ಉಪಸ್ಥಿತರಿದ್ದರು,.