ಜಿಲ್ಲಾಧಿಕಾರಿಗಳಿಗೆ ಮನವಿ
ಧಾರವಾಡ 24: ಫೆಬ್ರವರಿ 3 ಹಾಗೂ 4 ರಂದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜರುಗಿದ 17 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ತೆಗೆದುಕೊಂಡ ನಿರ್ಣಯಗಳ ಪ್ರತಿಯನ್ನು ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳಿಗೆ ಸಮ್ಮೇಳನದ ಸರ್ವಾದ್ಯಕ್ಷರಾದ ಮಾನ್ಯ ಡಾ. ಎಸ್ ಆರ್ ಗುಂಜಾಳ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶರಾದ ಎಸ್ ಎಚ್ ಮಿಟ್ಟಲಕೋಡ, ಡಾ. ವೀರಣ್ಣ ರಾಜೂರ, ಪ್ರೊ. ಕೆ ಎಸ್ ಕೌಜಲಗಿ, ಡಾ. ಜಿನದತ್ ಹಡಗಲಿ, ಎಮ್ ಎಮ್ ಚಿಕ್ಕಮಠ, ಶಂಕರ ಕುಂಬಿ, ಶಾಂತವೀರ ಬೆಟಗೇರಿ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಎಮ್ ಎಸ್ ನರೇಗಲ್, ಎಸ್ ಎಮ್ ದಾನಪ್ಪಗೌಡರ, ಬಿ ಜಿ ಬಾರ್ಕಿ, ಸಿ ಎಮ್ ಕೆಂಗಾರ, ಆರ್ ಎಮ್ ಹೊನ್ನಪ್ಪನವರ, ಗುರು ತಿಗಡಿ,ಡಾ . ಎಸ್ ಎಸ್ ದೊಡಮನಿ. ಪ್ರಮೀಳಾ ಜಕ್ಕನ್ನವರ, ಸುನಂದಾ ಯಡಾಲ, ಸುಮಂಗಲಾ ದಂಡಿನ, ಶಿವು ಕನ್ನೂರ, ಬಸವಣ್ಣೆಪ್ಪ ಗೆದ್ದಕೇರಿ ಮೊದಲಾದವರು ಮನವಿಯನ್ನು ಅರ್ಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ಕಂದಾಯ ಅಧಿಕಾರಿ ಮಲ್ಲಿಕಾರ್ಜುನ ಸೊಲಗಿ ಅವರು ಪ್ರಸ್ತುತ ವಿಷಯವನ್ನು ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತಮ್ಮ ಮನವಿ ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.