ಅಕ್ಕಿ ರಫ್ತಿಗೆ ಅನುಮತಿ ನೀಡುವಂತೆ ಸಿಎಂಗೆ ಮನವಿ

ಅಕ್ಕಿ ರಫ್ತಿಗೆ ಅನುಮತಿ ನೀಡುವಂತೆ ಸಿಎಂಗೆ ಮನವಿ

ಅಕ್ಕಿ ರಫ್ತಿಗೆ ಅನುಮತಿ ನೀಡುವಂತೆ ಸಿಎಂಗೆ ಮನವಿ

ಬಳ್ಳಾರಿ 28: ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡುವಂತೆ ತುಂಗಭದ್ರ ರೈತ ಸಂಘ ನಿನ್ನೆ ನಗರಕ್ಕೆ ಆಗಮಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮನವಿ ಸಲ್ಲಿಸಿ. ತುಂಗಭದ್ರ ಜಲಾಶಯದ ವ್ಯಾಪ್ತಿಗೆ ಒಳಪಟ್ಟಿರುವ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ 9 ಲಕ್ಷ ಎಕರೆ ನೀರಾವರಿ ಪ್ರದೇಶವಿದ್ದು, ಇದರಲ್ಲಿ ಸುಮಾರು 5 ಲಕ್ಷ ಎಕರೆಗಳವರೆಗೆ ರೈತರು ಭತ್ತವನ್ನು ಬೆಳೆದಿರುತ್ತಾರೆ. ಸರ್ಕಾರದ ಬೆಂಬಲ ಬೆಲೆ 100 ಕೆ.ಜಿ. ಭತ್ತಕ್ಕೆ 2320 ರೂ ನಿಗದಿಪಡಿಸಲಾಗಿದೆ. ಆದರೆ ಈ ವರ್ಷ 100 ಕೆ.ಜಿ ಭತ್ತಕ್ಕೆ 1800 ರೂ ಗಳಿಂದ 2000 ದಂತೆ ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ಭತ್ತ ಖರೀದಿ ನಡೆದಿದೆ.ಹಿಂದಿನ ವರ್ಷ 100 ಕೆ.ಜಿ ಭತ್ತಕ್ಕೆ 2600 ರಿಂದ 3000 ರೂ.ಗಳವರೆಗೆ ರೈತರು ಮಾರಾಟ ಮಾಡಿದ್ದರು. ಹಿಂದಿನ ವರ್ಷಕ್ಕಿಂತಲೂ ಈ ವರ್ಷ 100 ಕೆ.ಜಿ. ಭತ್ತಕ್ಕೆ 1000 ದರ ಕಡಿಮೆಯಾಗುವುದರಿಂದ ರೈತರು ಅತ್ಯಂತ ನಷ್ಟಕ್ಕೆ ಈಡಾಗುತ್ತಿದ್ದಾರೆ.ಸರ್ಕಾರದಿಂದ ಖರೀದಿ ಕೇಂದ್ರಗಳನ್ನು ತಡವಾಗಿ ತೆಗೆದದು ಅದರಿಂದ ಕೇವಲ ವ್ಯಾಪಾರಿಗಳಿಗೆ ಮಾತ್ರ ಅನುಕೂಲವಾಗಲಿದೆ. ಏಕೆಂದರೆ ರೈತರು ಭತ್ತವನ್ನು ಒಣಗಿಸಿ, ಖಾಲಿ ಚೀಲಗಳಲ್ಲಿ ತುಂಬಿಸಿ, ಖರೀದಿ ಕೇಂದ್ರಗಳಿಗೆ ಕೊಂಡೊಯ್ಯುವ ಖರ್ಚುಗಳು ಹೆಚ್ಚಾಗುವುದರಿಂದ ರೈತರಿಗೆ ಖರೀದಿ ಕೇಂದ್ರಗಳಿಂದ ಅನುಕೂಲವಾಗುತ್ತಿಲ್ಲ.ಅಕ್ಕಿಯನ್ನು ಬೇರೆ ರಾಜ್ಯಗಳಿಗೆ ಸಾಗಿಸಲು ಮತ್ತು ವಿದೇಶಗಳಿಗೆ ರಫ್ತುಮಾಡಲು ಕ್ರಮಕೈಗೊಳ್ಳಿರಿ. ಇದರಿಂದ ಭತ್ತದ ಬೆಲೆ ಹೆಚ್ಚಾಗಿ ರೈತರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದ್ದಾರೆ.