ಜ.4ರಂದು ಚಮಕೇರಿಯಲ್ಲಿ ಅಪ್ಪನ ಜಾತ್ರೆ: 6 ಜನ ಸಾಧಕರಿಗೆ ಅಪ್ಪ ಪ್ರಶಸ್ತಿ ಪ್ರದಾನ

ಅಥಣಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕನ್ನಡಿಗರ ಸಾಹಿತ್ಯ , ಸಾಂಸ್ಕೃತಿಕ ಟ್ರಸ್ಟ ಅಧ್ಯಕ್ಷ ಮಹಾದೇವ ಬಿರಾದಾರ ಮಾತನಾಡಿದರು.

ಲೋಕದರ್ಶನ ವರದಿ

ಅಥಣಿ20: ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ, ಚಮಕೇರಿ ಇವರ ಆಶ್ರಯದಲ್ಲಿ ಲಿಂ.ರಾಮಗೌಡ ಬಸಗೌಡ ಬಿರಾದಾರರ 3ನೇ ಸ್ಮರಣೋತ್ಸವ ನಿಮಿತ್ತ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು  ಬರುವ ಜ. 4 ರಂದು ಮುಂಜಾನೆ 11 ಗಂಟೆಗೆ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ ಅಧ್ಯಕ್ಷ ಮಹಾದೇವ ಬಿರಾದಾರ ಹೇಳಿದರು.

 ಪಟ್ಟಣದ ಖಾಸಗಿ ಹೊಟೇಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಈ ಸಮಾರಂಭದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸುವರು. ಹುಕ್ಕೇರಿಯ ಹಿರೇಮಠದ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ನೇತೃತ್ವ ವಹಿಸಲಿದ್ದಾರೆ. ಸಾನಿಧ್ಯವನ್ನು ಗೋಕಾಕದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಮಳಲಿಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ದಾರೇಶ್ವರದ ಡಾ.108 ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು, ನದಿಇಂಗಳಗಾಂವದ  ಸಿದ್ದಲಿಂಗ ಮಹಾಸ್ವಾಮೀಗಳು, ಗುಲ್ಬಗರ್ಾದ ಡಾ.ಚನ್ನರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಕಕಮರಿಯ ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮಿಗಳು, ಮಾತೋಶ್ರೀ ಅನಸೂಯಾದೇವಿ, ತುಂಗಳದ ಸಿದ್ಧಲಿಂಗ ಶಾಂಭವಿ ವಹಿಸುವರು. 

  ಮಾಜಿ ಸಚಿವ ಲಕ್ಷ್ಮಣ ಸವದಿ ಅದ್ಯಕ್ಷತೆ ವಹಿಸುವರು. ಉದ್ಘಾಟಕರಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗಮಿಸಲಿದ್ದಾರೆ. ನನ್ನಪ್ಪ ವಿಶೇಷ ಸಂಚಿಕೆಯನ್ನು ವಿಶ್ರಾಂತ ನ್ಯಾಯಮೂತರ್ಿ ಅರಳಿ ನಾಗರಾಜ ಅವರು ಅನಾವರಣ ಮಾಡುವರು. 2019ರ ದಿನದಶರ್ಿಕೆ ಅನಾವರಣ  ಶಾಸಕ ಪಿ. ರಾಜೀವ ಮತ್ತು ಶ್ರೀಶೈಲ ಜಗದ್ಗುರುಗಳವರ ಭಾವಚಿತ್ರ ಅನಾವರಣವನ್ನು ಶಾಸಕ ಮಹೇಶ ಕುಮಠಳ್ಳಿ ಅವರು ಮಾಡುವರು ಎಂದು ಹೇಳಿದರು.

    ಸೇವಾ ವಿಭೂಷಣ ರಾಜ್ಯ ಪ್ರಶಸ್ತಿ ಪುರಷ್ಕತರು: 

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸಾಧಕರಿಗೆ ಸೇವಾ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮವಿದ್ದು ಗುರುಪಾದಯ್ಯ ಸಾಲಿಮಠ, ಡಾ. ಪದ್ಮಜಿತ್ ಅ ನಾಡಗೌಡ, ಅರವಿಂದ ವಿ ಲಕಡೆ ದಂಪತಿಗಳು,  ಕೆ ಎಲ್ ಕುಂದರಗಿ, ಲಕ್ಷ್ಮಣ ಈ ಸವದತ್ತಿ, ರವೀಂದ್ರ ತೋಟಿಗೇರ, ಶೇಖರ ಬಹುರೂಪಿ,  ಬಿ.ಎಮ್ ಪಾಟೀಲರ, ವಿಜಯ ಹುದ್ದಾರ, ಉದಯ ಕಾರವೇಕರ, ಟಿ ಎಸ್ ಒಂಟಗೂಡಿ, ಮಹಾದೇವ ವಡಗಾವಿ, ಸಿದ್ದಾರ್ಥ ಸಿಂಗೆ, ಡಾ.ಶಿವು ನಂದಗಾಂವ, ಶಾಂತಾ ಸಿಂದೆ  ಅವರಿಗೆ ಪ್ರಶಸ್ತಿ ನೀಡಲಾಗುವದು.

 ಸಾಂಸ್ಕೃತಿಕ ಕಾರ್ಯಕ್ರಮ : ಶ್ರೀಪಲ್ಲಕ್ಕಿ ಟೀಮ್ ಚಲನಚಿತ್ರ ನಟ-ನಿದರ್ೇಶಕರು, ಬೆಂಗಳೂರುರವರಿಂದ ಅಪ್ಪ ಅಂದ್ರೆ ಆಕಾಶ ಉಪನ್ಯಾಸ ಡಾ. ಮೈತ್ರೆಯಿಣಿ ಗದಿಗೆಪ್ಪಗೌಡರ ಇವರಿಂದ,ಸುಗಮ ಸಂಗೀತ ಜ್ಯೋತಿಲಿಂಗ ಹೊನಕಟ್ಟಿರವರು ಸಿ.ಪಿ.ಆಯ್ ಗುಪ್ತದಳ ಇಲಾಖೆ, ಬೆಂಗಳೂರು ಇವರಿಂದ ಮತ್ತು .ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಯೋಗದಲ್ಲಿ  ಸಂಗೀತ ಉತ್ಸವ ಜರಗುವದು  ಎಂದು ಟ್ರಸ್ಟ್ ಅಧ್ಯಕ್ಷ ಮಹಾದೇವ ಬಿರಾದಾರ ತಿಳಿಸಿದರು.

   ಪ್ರಶಸ್ತಿ ಪ್ರದಾನ:

 2018ರ ಸಾಲಿನ ಅಪ್ಪ ಪ್ರಶಸ್ತಿಯನ್ನು ಮಹಾಲಿಂಗಪೂರದ ಪದ್ಮಶ್ರೀ ಪುರಸ್ಕೃತರು, ಖ್ಯಾತಿ ಪ್ರವಚನಕಾರರಾದ ಇಬ್ರಾಹಿಂ ಸುತಾರ,  ಬೆಂಗಳೂರಿನ ನಿವೃತ್ತ ಐ.ಪಿ.ಎಸ್.ಅಧಿಕಾರಿ ಜ್ಯೋತಿಪ್ರಕಾಶ ಮಿಜರ್ಿ, ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ.ಸಿ.ಸೋಮಶೇಖರ,  ಧಾರವಾಡದ ಅಭಕಾರಿ ಇಲಾಖೆಯ ಉಪಾಯುಕ್ತರಾದ ಡಾ. ಬಿ. ಆರ್. ಹಿರೇಮಠ, ಕಾಗವಾಡದ    ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮತ್ತು ಸಮಾಜಸೇವಕರಾದ  ಡಾ. ಶಿದಗೌಡ ಕಾಗೆ, ಮದಬಾವಿ  ಗ್ರಾಮದ  ಧಮರ್ಾಧಿಕಾರಿ ಡಾ.ಮಾರುತಿ ಭಂಡಾರೆ  ಅವರಿಗೆ ಪ್ರಧಾನ ಮಾಡಲಾಗುದು ಎಂದು ತಿಳಿಸಿದರು.

     ಈ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರೆ, ಜಿ.ಪಂ ಅಧ್ಯಕ್ಷೆ  ಆಶಾ ಐಹೊಳೆ, ತಾ.ಪಂ ಅಧ್ಯಕ್ಷತೆ ಶಕುಂತಲಾ ರುದ್ರಗೌಡರ,ಮುಖಂಡರಾದ ಗಜಾನನ ಮಂಗಸೂಳಿ, ಶ್ರೀಶೈಲ ಕರಿಶಂಕರರ, ಗಿರೀಶ ಬುಟಾಳಿ, ಮಹಾವೀರ ಪಡನಾಡ, ಅನೀಲ ಸುಣದೊಳಿ, ರೇಖಾ ಲಕ್ಷ್ಮಣ ಭಜಂತ್ರಿ, ರಾವಸಾಬ ಐಹೊಳ, ರಾಜೇಂದ್ರ ಐಹೊಳೆ, ಬಸಗೌಡ ಪಾಟೀಲ ಭಾಗವಹಿಸಲಿದ್ದಾರೆ. 

  ಈ ವೇಳೆ ನ್ಯಾಯವಾದಿ ಕೆ.ಎಲ್.ಕುಂದರಗಿ, ಕರವೇ ರಾಜ್ಯ ಕಾರ್ಯದಶರ್ಿ ರವಿ ಪೂಜಾರಿ, ಕಜಾಪ ಅಧ್ಯಕ್ಷ ವಿಜಯ ಹುದ್ದಾರ, ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ,ಕಾರ್ಯದಶರ್ಿ ಜಗನ್ನಾಥ ಬಾಮನೆ, ಚಿದಾನಂದ ಶೇಗುಣಸಿ ಇನ್ನೀತರರು ಉಪಸ್ಥಿತರಿದ್ದರು.