ದಲಿತ ವಿರೋಧಿ ಬಜಟ್ : ವಿನೋದ ಕೋಳೂರಗಿ
ವಿಜಯಪುರ. 07 : ಎಸ್ಸಿ, ಎಸ್ಟಿ ಜನರಿಗೆ ಎರಡು ವರ್ಷಗಳಿಂದ ಗಂಗಾಕಲ್ಯಾಣ ಒಂದು ಬೋರ್ ಹಾಕಿಲ್ಲ. ಒಂದು ಎಕರೆ ಜಮೀನು ಕೊಡಿಸಿಲ್ಲ. ಸ್ವಯಂ ಉದ್ಯೋಗ ಯೋಜನೆಯಲ್ಲಿ ಒಬ್ಬರಿಗೂ ಉದ್ಯೋಗ ಕೊಟ್ಟಿಲ್ಲ. ಐರಾವತ ಯೋಜನೆಯಲ್ಲಿ ಇಂದು ಟ್ಯಾಕ್ಸಿ ಕೊಟ್ಟಿಲ್ಲ.. ಪರಿಶಿಷ್ಟರ ಕಾಲೋನಿಗೆ ಒಂದು ಬುಟ್ಟಿ ಕಾಂಕ್ರೀಟ್ ಹಾಕಿಲ್ಲ. ದಲಿತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಬರ್ತಿಲ್ಲ. ಕೈಗಾರಿಕಾ ಸ್ಥಾಪನೆಗೆ ಸಹಾಯಧನ ನೀಡುತ್ತಿಲ್ಲ. ಸಿಎಂ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್‌ನಲ್ಲಿ ಎಸ್ಸಿ-ಎಸ್ಟಿ ಜನಾಂಗಕ್ಕೆ ನಿರಾಶದಾಯಕ ಮೂಡಿಸಿದೆ ಇದೊಂದು ದಲಿತ ವಿರೋಧಿ ಬಜೆಟ್ ಆಗಿದೆ ಎಂದು ನಾಗಠಾಣ ಮಂಡಲ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ವಿನೋದ ಕೋಳೂರಗಿ ಪ್ರಕಟಣೆಗೆ ತಿಳಿಸಿದ್ದಾರೆ.