ಕೋಲ್ಕತಾ, ಡಿ ೧೪ ಪೌರತ್ವ ವಿರೋಧಿ ಕಾಯ್ದೆಯ ಪ್ರತಿಭಟನಾಕಾರರು ಪಶ್ಚಿಮ ಬಂಗಾಳದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಹಳಿಗಳನ್ನು ನಿರ್ಬಂಧಿಸಿದ ಪರಿಣಾಮ ಹೌರಾ ಮತ್ತು ಸೀಲ್ಡಾ ವಿಭಾಗಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ರೈಲು ಸೇವೆಗಳು ಶನಿವಾರ ಭಾಗಶಃ ಸ್ಥಗಿತಗೊಂಡಿತ್ತು.ಪೂರ್ವ ರೈಲ್ವೆ ಮತ್ತು ಆಗ್ನೇಯ ರೈಲ್ವೆ ಎರಡೂ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಸ್ಥಳೀಯ ರೈಲುಗಳನ್ನು ರದ್ದುಗೊಳಿಸಿವೆ.ಬೆಲ್ಡಂಗಾ ನಿಲ್ದಾಣದಲ್ಲಿ ನಿನ್ನೆ ಉಂಟಾದ ಅವಾಂತರಗಳ ಹಿನ್ನೆಲೆಯಲ್ಲಿ ಕೃಷ್ಣನಗರದಲ್ಲಿ ಸೀಲ್ಡಾದಿಂದ ಬಂದ ರೈಲು ಸ್ಥಗಿತಗೊಂಡಿತು, ಅಲ್ಲಿನ ಪೌರತ್ವ ವಿರೋಧಿ ಕಾಯ್ದೆ ಚಳವಳಿಗಾರರು ಸ್ಟೇಷನ್ ಮಾಸ್ಟರ್ ಕಚೇರಿಗೂ ಹಾನಿ ಮಾಡಿದ್ದು, ಈ ವೇಳೆ ಹಲವರನ್ನು ಬಂಧಿಸಲಾಗಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಹಿಂಸಾಚಾರ ವರದಿಯಾಗಿದ್ದು, ಪ್ರತಿಭಟನಾಕಾರರು ಜಂಗೀಪುರ ನಿಲ್ದಾಣದಲ್ಲಿ ರೈಲು ಸ್ಥಗಿತಗೊಳಿಸಿದ್ದಾರೆ.ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೋಮವಾರದಿಂದ ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ಸಾಮೂಹಿಕ ಆಂದೋಲನಕ್ಕೆ ಕರೆ ನೀಡಿದ್ದು, ಅಂತಹ ಶಾಸನಗಳನ್ನು ಜಾರಿಗೆ ತರಲು ತಮ್ಮ ಸರ್ಕಾರ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.ಅಸ್ಸಾಂನಲ್ಲಿಯೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಿಂದಾಗಿ, ಈಶಾನ್ಯ ಗಡಿನಾಡು ರೈಲ್ವೆ ಸುಮಾರು ೩೦ ದೂರದ ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಿದೆ.