ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ
ಕಾರವಾರ, 17; ಎಜ್ಯುಕೇಶನ್ ಸೊಸೈಟಿಯ ಸುಮತಿ ದಾಮ್ಲೆ ಬಾಲಕಿಯರ ಪ್ರೌಢಶಾಲೆಯಲ್ಲಿ “ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ” ಯಶಸ್ವಿಯಾಗಿ ಜರುಗಿತು.
ಉದ್ಘಾಟಕರಾಗಿ ವಸಂತಲಕ್ಷ್ಮೀ ಎಸ್. ನಾಯ್ಕ, ಸಹಾಯಕ ಅಭಿಯಂತರರು (ವಿದ್ಯುತ್) ನೋಡಲ್ ಅಧಿಕಾರಿಗಳು, ಕೆ.ಪಿ.ಟಿ.ಸಿ.ಎಲ್. ಆಗಮಿಸಿ "ಸೋಲಿನಲ್ಲಿ ಸಹನೆ, ಸಾಧನೆಯಲ್ಲಿ ಸಮಚಿತ್ತತೆ, ನಮ್ಮದಾಗಿಸಿಕೊಳ್ಳಬೇಕು". ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಗಳಾಗಿ ದೇವಿದಾಸ ವಿಠೋಬಾ ನಾಯ್ಕ ಆಗಮಿಸಿ, "ವಿನಯವು ಪ್ರೀತಿ ಮತ್ತು ಹೃದಯಗಳನ್ನು ಜೋಡಿಸುವ ಸೇತುವೆಯಾಗಿದೆ. ನಾವು ಪ್ರೀತಿ-ನೀತಿಗಳಿಂದ ಬದುಕಿನಲ್ಲಿ ಅಮೂಲ್ಯ ಬೆಳಕು ತುಂಬಲು ಪ್ರಯತ್ನಿಸಬೇಕು". ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಸಂಸ್ಥೆಯ ಆಡಳಿತಾಧಿಕಾರಿ ಜಿ.ಪಿ. ಕಾಮತ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಥಿಗಳು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕಿ ಶ್ರೀಮತಿ ಗಿರಿಜಾ ಎನ್. ಬಂಟ ಸ್ವಾಗತಿಸಿದರು. ಟಿ. ಎಮ್. ಶಮೀಂದ್ರ ಅತಿಥಿ ಪರಿಚಯ ಮಾಡಿದರು. ಮಾಲಿನಿ ಜೆ. ಗುರವ, ಪೂಣಿಮಾ ಮಾಂಜ್ರೇಕರ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ರಾಣೆ ವಂದಿಸಿದರು. ಸಂತೋಷ ಎಂ. ಶೇಟ್ ಕಾರ್ಯಕ್ರಮ ನಿರ್ವಹಿಸಿದರು.