ಮಾಲತಿಶ್ರೀಯಿಂದ ಅನ್ನ, ಖ್ಯಾತಿ ನೀಡಿದ ರಂಗಭೂಮಿಯ ಋಣ ತೀರಿಸುವ ಕಾರ್ಯ: ಸಂಸದ ಅಂಗಡಿ

ಗೋಕಾಕ 25: ಉತ್ತರ ಕನರ್ಾಟಕ ಭಾಗದ ಜಾನಪದ ಸೊಗಡಿನ ಹಿರಿಯ ರಂಗಕಲಾವಿದರನ್ನು ನಾಡಿನ ರಂಗಭೂಮಿಯ ಇಬ್ಬರು ಶ್ರೇಷ್ಠ ದಿಗ್ಗಜರ ಹೆಸರಿನಿಂದ ರಂಗ ಪ್ರಶಸ್ತಿಗಳನ್ನು ನೀಡುವ ಸಂಪ್ರದಾಯದ ಮೂಲಕ ಖ್ಯಾತ ಕಿರುತೆರೆ ಮತ್ತು ರಂಗ ಕಲಾವಿದೆ ಮಾಲತಿಶ್ರೀ ಮೈಸೂರು ರವರು ತಮ್ಮ ಆಶಾ ಕಿರಣ ಟ್ರಸ್ಟ ಮೂಲಕ ತಮಗೆ ಅನ್ನ ಮತ್ತು ಖ್ಯಾತಿ ನೀಡಿದ ರಂಗಭೂಮಿಯ ಋಣ ತೀರಿಸುವುದರ ಜೊತೆಗೆ ಒಬ್ಬ ಕಲಾವಿದೆ ತನ್ನ ಸಹಪಾಟಿ ಹಿರಿಯ ಕಲಾವಿದರನ್ನು ಗೌರವಿಸುವ ಹೃದಯ ವೈಶಾಲ್ಯತೆ ತೋರಿಸಿದ್ದಾರೆ ಎಂದು ಬೆಳಗಾವಿಯ ಸಂಸದ ಸುರೇಶ ಅಂಗಡಿ ಪ್ರಶಂಸೆ ವ್ಯಕ್ತಪಡಿಸಿದರು. 

ಆಶಾಕಿರಣ ಕಲಾ ಟ್ರಸ್ಟ ಬೆಂಗಳೂರು ಇವರ ಆಶ್ರಯದಲ್ಲಿ ನಗರದ 'ಜ್ಞಾನ ಮಂದಿರ' ಆಧ್ಯಾತ್ಮ ಕೇಂದ್ರದ ಸಭಾಂಗಣದಲ್ಲಿ ಜರುಗಿದ ನಾಡಿನ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರಾದ ದಿ. ಬಿ.ಆರ್. ಅರಷಿನಗೋಡಿ ಹಾಗೂ ದಿ. ಬಸವಣ್ಣೆಪ್ಪಾ ಹೊಸಮನಿ ಯವರ ರಂಗ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಜಾನಪದ ರಂಗಭೂಮಿಯ ಗೋಕಾವಿ ನಾಡಿನ ಹಿರಿಯ ಕಲಾವಿದರಾದ ದಿಗಂಬರ ಹರಿಜನ ಘೋಡಗೇರಿ ಅವರಿಗೆ 'ದಿ.ಬಿ.ಆರ್. ಅರಷಿನಗೋಡಿ' ರಂಗ ಪ್ರಶಸ್ತಿಯನ್ನು ಹಾಗೂ ಹಿರಿಯ ಶ್ರೀಕೃಷ್ಣ ಪಾರಿಜಾತ ಕಲಾವಿದೆ ಯಲ್ಲವ್ವ ರೊಡ್ಡಪ್ಪನ್ನವರ ಲೋಕಾಪೂರ ಇವರಿಗೆ 'ದಿ.ಬಸವಣ್ಣೆಪ್ಪಾ ಹೊಸಮನಿ' ರಂಗ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಇಂದು ಜಾನಪದ ಮತ್ತು ವೃತ್ತಿ ರಂಗಭೂಮಿಯನ್ನು ಕ್ರೀಯಾಶೀಲವಾಗಿ ಮುನ್ನಡೆಸಬೇಕಾದ ಅವಶ್ಯಕತೆ ಇದ್ದು, ರಾಜಕೀಯ ಧುರೀಣರು ಇಂದಿನ ದಿನಗಳಲ್ಲಿ ರಂಗಭೂಮಿಯ ಚಟುವಟಿಕೆಗಳಿಗೆ ಕಾಯಕಲ್ಪ ನೀಡುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ನಾಡಿನ-ರಾಷ್ಟ್ರದ ಶ್ರೇಷ್ಠತೆ ಅಲ್ಲಿಯ ಸಂಪನ್ಮೂಲಭರಿತ ಸಮೃದ್ಧತೆಯ ಜೊತೆಗೆ ಅಲ್ಲಿಯ ಸಂಸ್ಕೃತಿಯನ್ನೂ ಅವಲಂಭಿಸಿದ್ದು, ಕಲೆ ಮತ್ತು ಸಾಹಿತಿಕ ಸಂಮೃದ್ಧಿ ಸಂಸ್ಕೃತಿಯನ್ನು ವೈಭವಿಕರಿಸುತ್ತವೆ. ಅಂತಹ ರಂಗಭೂಮಿಯ ವೈಭವಿಕರಣಕ್ಕೆ ಕಾರಣರಾದ ಇಬ್ಬರು ನಾಡಿನ ಹಿರಿಯ ರಂಗಕಮರ್ಿಗಳಾದ ದಿ.ಬಿ.ಆರ್. ಅರಷಿನಗೋಡಿ ಹಾಗೂ ದಿ. ಬಸವಣ್ಣೆಪ್ಪಾ ಹೊಸಮನಿ ಅವರ ಹೆಸರಿನ ಪ್ರಶಸ್ತಿಗಳನ್ನು ಹಿರಿಯ ಕಲಾವಿದರಿಗೆ ಪ್ರದಾನ ಮಾಡುತ್ತಿರುವದು ಅರ್ಥಪೂರ್ಣವಾದ ಕಾರ್ಯವಾಗಿದೆ ಎಂದು ಹೇಳಿದರು. 

ನಿಜವಾದ ಕಲಾವಿದ ಕಲಾ ಸೇವೆಯನ್ನು ಎಂದೂ ಕಲೆಯನ್ನು ವೃತ್ತಿಯನ್ನಾಗಿ ಸ್ವೀಕರಿಸದೇ ಆರಾಧಿಸುತ್ತಾನೆ. ಅಂತೆಯೇ ಕಲಾವಿದ ಧನಗಳಿಕೆಯ ಕಡೆಗೆ ಮಾರುಹೋಗದೇ ಕೇವಲ ಪ್ರೇಕ್ಷಕರ ಮನಮೆಚ್ಚಿದ ಕರತಾಡನಕ್ಕೇ ಕರಗಿ ಹೋಗುತ್ತಾನೆ ಎಂದು ಮಾಮರ್ಿಕವಾಗಿ ಹೇಳಿದರು. 

ರಂಗವಿದ್ವಾಂಸಕ ಡಾ. ರಾಮಕೃಷ್ಣ ಮರಾಠೆ ದಿ. ಬಿ.ಆರ್. ಅರಷಿನಗೋಡಿ ಕುರಿತು ಹಾಗೂ ಪ್ರಜಾವಾಣಿ ಪತ್ರಿಕೆ ನಿವೃತ್ತ ಸುದ್ದಿ ಸಂಪಾದಕ ಗೂಡಿಹಳ್ಳಿ ನಾಗರಾಜ ದಿ. ಬಸವಣ್ಣೆಪ್ಪಾ ಹೊಸಮನಿ ಅವರ ಕಲೆ ಮತ್ತು ಬದುಕು ಕುರಿತು ಮಾತನಾಡಿದರು. 

ಸಾನಿಧ್ಯವನ್ನು ಪ್ರಭು ಸ್ವಾಮಿಗಳು, ಕೊತರ್ಿಕೋಲಾರ ಹಿರೇಮಠ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಾ ಸಾಹಿತ್ಯ ಪರಿಷತ್ತ ಅಧ್ಯಕ್ಷ ಮಹಾಂತೇಶ ತಾಂವಶಿ, ಪ್ರೋ. ಚಂದ್ರಶೇಖರ ಅಕ್ಕಿ, ಕಿರುತೆರೆ ನಟಿ ಶಾರದಾ ಜಿ.ಎಸ್., ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರಾದ ಎಮ್. ಎಸ್. ಕೋಟ್ರೇಶ, ರಾಘವೇಂದ್ರ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಮಾಲತಿಶ್ರೀ ಮೈಸೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಾ ಕೊಕ್ಕರಿ ನಿರೂಪಿಸಿದರು. ಈಶ್ವರಚಂದ್ರ ಬೆಟಗೇರಿ ವಂದನಾರ್ಪಣೆ ಮಾಡಿದರು.