ಆಂಜನೇಯಸ್ವಾಮಿ ಕಾರ್ತಿಕೋತ್ಸವ
ರಾಣೆಬೆನ್ನೂರ 25: ತಾಲೂಕಿನ ಮುಷ್ಟೂರ ಗ್ರಾಮದ ಆಂಜನೇಯಸ್ವಾಮಿಯ ಕಾರ್ತಿಕೋತ್ಸವವು ಡಿ.28 ರಂದು ಸಂಜೆ 7 ಘಂಟೆಗೆ ಬಹು ವಿಜ್ರಂಭಣೆಯಿಂದ ಜರುಗಲಿದೆ. ಅಂದು ಬೆಳಿಗ್ಗೆ 7ಗಂಟೆಯಿಂದ ಆಂಜನೇಯಸ್ವಾಮಿಯ ಮೂರ್ತಿಗೆ ಪುಷ್ಪಾಲಂಕಾರ, ಅಭಿಷೇಕ, ಮಹಾರುದ್ರಾಭಿಷೇಕ ಮತ್ತು ಹೋಮ-ಹವನ ಮುಂತಾದ ಪೂಜಾಧಿ ಕಾರ್ಯಕ್ರಮಗಳು ನಡೆಯಲಿವೆ. ಮದ್ಯಾಹ್ನ 12-30ಕ್ಕೆ ಅನ್ನದಾಸೋಹ ಹಾಗೂ ಸಾಯಂಕಾಲ ರಾತ್ರಿ 7 ಗಂಟೆಗೆ ಕಾರ್ತಿಕೋತ್ಸವವು ನೆರವೇರಲಿದೆ ಎಂದು ದೇವಸ್ಥಾನ ಸಮಿತಿಯು ತಿಳಿಸಿದೆ.