ರಾಣೇಬೆನ್ನೂರು ಹುಲ್ಲತಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ
ರಾಣೇಬೆನ್ನೂರು: ಡಿ 8 ತಾಲೂಕಿನ ಇತಿಹಾಸ ಪ್ರಸಿದ್ಧ, ಹುಲ್ಲತ್ತಿ ಗ್ರಾಮದ, ಶ್ರೀ ಆಂಜನೇಯ ಸ್ವಾಮಿ ವಾರ್ಷಿಕ ಮಹಾ ಕಾರ್ತಿಕೋತ್ಸವವು ಡಿಸೆಂಬರ್ 12,2024 ರಂದು ಅದ್ದೂರಿಯಾಗಿ ಜರುಗಲಿದೆ. ಎಂದು ದೇವಸ್ಥಾನ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕಾರ್ತಿಕೋತ್ಸವದ ಅಂಗವಾಗಿ 10 -12-2024 ರಂದು ಬುಧವಾರ ಸೂರ್ಯೋದಯ ಕಾಲ 5: ಗಂಟೆಗೆ ಹುಲ್ಲತ್ತಿ ಗ್ರಾಮದ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ, ಪ್ರಥಮ ಬಾರಿಗೆ " ಹನುಮ ಮಾಲೆ" ಹಾಕಲಾಗುವುದು ನಂತರ ಒಂಬತ್ತು ದಿನಗಳ ವರೆಗೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಊಟ ವಸತಿಯೊಂದಿಗೆ ಅವಕಾಶ ಕಲ್ಪಿಸಲಾಗಿದೆ ಅಂದು ಮುಂಜಾನೆಯಿಂದ 5 ಗಂಟೆಯಿಂದ ಸಂಜೆ 8.30 ರವರೆಗೆ,ಹನುಮ ಭಜನೆ, ಹನುಮ ನಾಮ ಸ್ಮರಣೆ, ಹನುಮ ಧ್ಯಾನ, ಹನುಮ ಸತ್ಸಂಗ ಹಾಗೂ ಪ್ರತಿದಿನ ರುದ್ರಾಭಿಷೇಕ, ಕುಂಕುಮ ಪೂಜೆ,ಪುಷ್ಪಾರ್ಚನೆ ಮತ್ತು 9 ದಿನಗಳವರೆಗೆ ರಾತ್ರಿ 8:30ಕ್ಕೆ ಗುಡ್ಡದ ಆನ್ವೇರಿಯ ವಿರಕ್ತ ಮಠದ ಶ್ರೀ ಶಿವಯೋಗಿಶ್ವರ ಮಹಾಸ್ವಾಮಿಗಳವರಿಂದ ಆಧ್ಯಾತ್ಮ ಕಾರ್ಮಿಕ ಪ್ರವಚನ ನಡೆಯಲಿದೆ. 18,2024 ರಂದು ಮಂಗಳವಾರ ರಾತ್ರಿ 10.30 ಕ್ಕೆ ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸುವುದು. ಮತ್ತು ಪುನ: ಬೆಳಿಗ್ಗೆ 8.30 ಕ್ಕೆ ಸ್ವಾಮಿಯ ದರ್ಶನ ಪಡೆದು, ಸ್ವಾಮಿಯ ಸನ್ನಿಧಿಯಲ್ಲಿ ಹನುಮಮಾಲೆಯನ್ನು ತೆಗೆಯುವುದು. ಹನುಮ ಮಾಲೆ ಧರಿಸುವ ಆಸಕ್ತ ಭಕ್ತಾದಿಗಳು ಆಂಜನೇಯ ಸ್ವಾಮಿ ಕಮಿಟಿಯವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿಕೋರಿದ್ದಾರೆ.