ಲೋಕದರ್ಶನ ವರದಿ
ಬ್ಯಾಡಗಿ24: ತಾಲೂಕಿನ ಅಂಗರಗಟ್ಟಿ ಗ್ರಾಮದ ಡಾ.ಬಾಬು ಜಗಜೀವನರಾಂ ಭವನದ ಸುತ್ತಲೂ ಕಂಪೌಂಡ ಗೋಡೆ ನಿಮರ್ಿಸಿಕೊಳ್ಳಲು ಅನುದಾನವನ್ನು ನೀಡುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಗ್ರಾಮದ ಜನತೆಗೆ ಭರವಸೆ ನೀಡಿದರು.
ಅವರು ಮಂಗಳವಾರ ಅಂಗರಗಟ್ಟಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ನಿಮರ್ಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಿಮರ್ಿಸಿದ ನೂತನ ಡಾ.ಬಾಬು ಜಗಜೀವನ್ರಾಂ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಡಾ.ಬಾಬು ಜಗಜೀವನ್ರಾಂ ಭವನದ ಮೇಲ್ಚಾವಣಿಯನ್ನು ನಿಮರ್ಿಸುಲು ಹಿರಿಯ ಅಧಿಕಾರಿಗಳ ಜೊತೆಗೆ ಚಚರ್ಿಸಿ ಕಟ್ಟಡವನ್ನು ನಿಮರ್ಿಸಿ ಕೊಡುವ ಮೂಲಕ ಸ್ಥಳೀಯ ಜನತೆಗೆ ಉತ್ತಮ ಕಾರ್ಯ ಕೈಕೊಳ್ಳಲು ಮುಂದಾಗುವಂತ ಕಾರ್ಯ ಮಾಡಲಾಗುವುದು. ಈಗಾಗಲೇ ತಾಲೂಕಿನಲ್ಲಿ ಹಿಂದುಳಿದ ಜನತೆಗೆ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ಧನಾಗಿದ್ದು, ತಾಲೂಕಿನಲ್ಲಿರುವ ಎಸ್ಸಿ ಹಾಗೂ ಎಸ್ಟಿ ಕಾಲೋನಿಗಳಲ್ಲಿಯ ಜನತೆಗೆ ಕುಡಿಯವ ನೀರಿನ ಸೌಲಭ್ಯಕ್ಕಾಗಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರ ಜೊತೆಗೆ ಮಾತನಾಡಿ ಅನುದಾನ ತರುವುದಾಗಿ ತಿಳಿಸಿದರಲ್ಲದೇ ಈಗಾಗಲೇ ಅನೇಕ ಗ್ರಾಮಗಳಲ್ಲಿಯ ಎಸ್.ಸಿ ಕಾಲೋನಿಗಳಲ್ಲಿ ಡಾ.ಅಂಬೇಡಕರ ಭವನಗಳನ್ನು ಕಟ್ಟಲಾಗಿದೆ.
ಇನ್ನೂ ಕೆಲವೊಂದು ಗ್ರಾಮಗಳಲ್ಲಿ ಕಟ್ಟಡದ ಕಾಮಗಾರಿಗಳು ನಡೆಯುತ್ತಲಿವೆ. ಎಸ್ಸಿ ಹಾಗೂ ಎಸ್ಟಿ ಕಾಲೋನಿಯ ಜನತೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ದೇಶದ ಸಮಗ್ರ ಅಭಿವೃದ್ದಿಗೆ ಮುಂದಾಗಬೇಕೆಂದರು.
ಸಮಾಜ ಸೇವಕ ಶಿವಬಸಣ್ಣ ಕುಳೇನೂರ ಮಾತನಾಡಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿಯ ರಸ್ತೆಗಳನ್ನು ಕಾಂಕ್ರೀಟ್ಕರಣಗೊಳಿಸಲು ಶಾಸಕರು ಪ್ರಯತ್ನಿಸುತ್ತಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರಕಾರ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸುತ್ತಲಿರುವುದು ಸಂತೋಷದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಶಾಸಕರು ಸರಕಾರದ ಮೇಲೆ ಒತ್ತಡವನ್ನು ಹಾಕಿ ಸಚಿವರ ವಿಶ್ವಾಸವನ್ನು ಪಡೆದುಕೊಂಡು ತಾಲೂಕಿನಲ್ಲಿ ಹೆಚ್ಚಿನ ಅನುದಾನವನ್ನು ತರಲಿದ್ದಾರೆಂದು ವಿಶ್ವಾಸ ವ್ಯಕ್ತ ಪಡಿಸಿದರು.
ಗ್ರಾ.ಪಂ.ಅಧ್ಯಕ್ಷೆ ಅಕ್ಕಮ್ಮ ಓಲೇಕಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಗ್ರಾ.ಪಂ.ಉಪಾಧ್ಯಕ್ಷ ಬಸಪ್ಪ ಬನ್ನಿಹಟ್ಟಿ, ಶೇಖಪ್ಪ ಬಡಿಗೇರ, ಕಮಲವ್ವ ಬಡಿಗೇರ, ನಿಮರ್ಿತಿ ಕೇಂದ್ರದ ಯೋಜನಾ ನಿದರ್ೇಶಕ ಎಚ್.ಡಿ.ಶಾಂತಕುಮಾರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹನುಮಂತಪ್ಪ ಲಮಾಣಿ, ಧುರೀಣರಾದ ರಾಮಣ್ಣ ಉಕ್ಕುಂದ, ಖಂಡೆಪ್ಪ ಹಾದಿಮನಿ, ದಿಳ್ಳೆಪ್ಪ ಹಾದಿಮನಿ, ಹನುಮಂತಪ್ಪ ಅಳಲಗೇರಿ, ಬಸಯ್ಯ ಹಿರೇಮಠ, ಶಿವಪುತ್ರಪ್ಪ ಮಾಸಣಗಿ, ಗುಡ್ಡಪ್ಪ ಮೋಟೆಬೆನ್ನೂರ, ರುದ್ರಪ್ಪ ಮುಳಗುಂದ ಸೇರಿದಂತೆ ಇನ್ನಿತರರಿದ್ದರು. ಶಾಲಾ ಮಕ್ಕಳು ಪ್ರಾಥರ್ಿಸಿದರು. ಪಿ.ಎಫ್.ತಗಡಿಮನಿ ಸ್ವಾಗತಿಸಿ, ಎಂ.ಎಫ್.ಕರಿಯಣ್ಣನವರ ನಿರೂಪಿಸಿ ವಂದಿಸಿದರು.