ಲೋಕದರ್ಶನ ವರದಿ
ಹರಪನಹಳ್ಳಿ 20:ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಸಕರ್ಾರಿ ಭೂಗಳ್ಳತನ ವಿರೋಧಿ ವೇದಿಕೆಯಿಂದ, ನ್ಯಾಯಲಯದ ಆದೇಶವನ್ನು ಕಾರ್ಯಗತಗೊಳಿಸಲು ವಿಳಂಬ ಮಾಡುತ್ತಿರುವ ಕಂದಾಯ ಅಧಿಕಾರಿಗಳನ್ನ ಅಮಾನತ್ತು ಮಾಡುವಂತೆ ಒತ್ತಾಯಿಸಿ ಅನಿದರ್ಿಷ್ಟ ಧರಣಿಯನ್ನು ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಭೊಗಳ್ಳತನ ವಿರೋಧಿ ವೇದಿಕೆಯ ಅಧ್ಯಕ್ಷರಾದ ಪಿರಂಗಿ ವಿ ದುರುಗದಯ್ಯರವರು ಮಾತನಾಡಿ ಹರಪನಹಳ್ಳಿ ಪಟ್ಟಣದ ಪಾಳೇಗಾರ ಕಾಲದ ಪ್ರಸಿದ್ಧ ಕೆರೆಗಳಾದ ಹಿರೆಕೆರೆ ಮತ್ತು ಅಯ್ಯನಕೆರೆಗಳು, ಜನ-ಜಾನುವಾರಗಳು ಈ ಕೆರೆಯ ನೀರನ್ನೆ ಅವಲಂಬಿಸಿವೆ. ಹಾಗೂ ಎರಡು ಕೆರೆಗಳ ನೀರಾವರಿ ಪ್ರದೇಶ ಸುಮಾರು 10 ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸುವ ಪ್ರದೇಶವಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಧನದಾಯಿ, ರಿಯಲ್ ಎಸ್ಟೇಟ್ ಉದ್ಯಮಿಗಳು, ಭ್ರಷ್ಠರಾಜಕಾರಣಿಗಳು, ಲಂಚಕೂರ ಅಧಿಕಾರಿಗಳು ಈ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮ ಸವರ್ೆ ನಂಬರ್, ಅಕ್ರಮ ಡೋರ್ ಪಡೆದು ಬೃಹತ್ ಕಟ್ಟಡಗಳನ್ನ ಕಟ್ಟಿಕೊಂಡಿದ್ದಾರೆ ಎಂದು ಗುಡಿಗಿದರು ಹಾಗೂ ಹರಪನಹಳ್ಳಿ ಹಿರಿಯ ಸಿವಿಲ್ ನ್ಯಾಯಧೀಶರ ನ್ಯಾಯಲದಲ್ಲಿ ನೆಡೆದ ಪ್ರಕರಣಗಳಾದ ಔ.ಖ 109/2014,110/2014,98/2014,113/2015,111/2015 ಇವುಗಳಲ್ಲಿ ಘನ ನ್ಯಾಯಲವು ಒತ್ತುವರಿದಾರರ ವಿರುದ್ದ ಕಾಮನ್ ಜಡ್ಜಮೆಂಟ್ ಮಾಡಿದ್ದು ಅದರ ಅನ್ವಯ ಇದುವರೆಗೂ ಸಂಬಂದ ಪಟ್ಟ ಅಧಿಕಾರಿಗಳು ಒತ್ತುವರಿಯನ್ನ ತೆರವುಗೊಳಿಸಿರುವುದಿಲ್ಲ ಕೂಡಲೇ ಕಾರ್ಯಗತಗೊಳಿಸಲು ಸಕರ್ಾರಕ್ಕೆ ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿ ಪಿರಂಗಿ ದುರುಗದಯ್ಯ, ಇದ್ಲಿ ರಾಮಪ್ಪ, ಬಡಿಗೇರ ಬಸವರಾಜಪ್ಪ, ವೀರಭದ್ರಚಾರ್ಯ, ಚೆನ್ನೇಶ ಬಡಿಗೇರ, ತಿಮ್ಮಲಾಪುರದ ಕೃಷ್ಣಾಚಾರ್ಯ, ಬಡಿಗೇರ ಮಂಜಚಾರ್ಯ ಇತರರು ಉಪಸ್ಥಿತರಿದ್ದರು.