ಅಖಿಲ ಭಾರತ “ಎ” ಗ್ರೇಡ್ ಆಹ್ವಾನಿತ ಪುರುಷರ ಕಬಡ್ಡಿ ವೈಭವದ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಬಿಪಿಸಿಎಲ್ ಮುಂಬೈ ಹಾಗೂ ಅಡಿಯನ್ ಪ್ಯಾಕ್ಟ್ರಿ ದೆಹಲಿ ನಡುವೆ ರೋಚಕ ಪಂದ್ಯ ಏರು್ಡ
ಬೀಳಗಿ 24: ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಮಂಗಳವಾರ ನಡೆದ ಪುರುಷರ ಕಬಡ್ಡಿ ವೈಭವದ ಪಂದ್ಯಾವಳಿಯಲ್ಲಿ ಬಿಪಿಸಿಎಲ್ ಮುಂಬೈ 36-34 ಪಾಯಿಂಟ್ ಪಡೆದು ಎದುರಾಳಿ ಅಡಿಯನ್ ಪ್ಯಾಕ್ಟ್ರಿ ದೆಹಲಿ ತಂಡ ಕೊನೆಗೆ ಕ್ಷಣದಲ್ಲಿ ಪಂದ್ಯದ ಒತ್ತಡವನ್ನು ಸಮರ್ಕವಾಗಿ ನಿಭಾಯಿಸುವಲ್ಲಿ ವಿಫಲಗೊಂಡು ಸೋಲು ಕಂಡಿತು. ಬಿಪಿಸಿಎಲ್ ಮುಂಬೈ ಭರ್ಜರಿ ಗೆಲುವಿನೊಂದಿಗೆ ಟ್ರೋಪಿ ಹಾಗೂ ರೂ.2ಲಕ್ಷ ನಗದು ಬಹುಮಾನ ಪಡೆಯುವಲ್ಲಿ ಯಶಸ್ವಿಯಾಯಿತು.
ಅಖಿಲ ಭಾರತ “ಎ” ಗ್ರೇಡ್ ಆಹ್ವಾನಿತ ಪುರುಷರ ಕಬಡ್ಡಿ ವೈಭವದ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಬಿಪಿಸಿಎಲ್ ಮುಂಬೈ ಹಾಗೂ ಅಡಿಯನ್ ಪ್ಯಾಕ್ಟ್ರಿ ದೆಹಲಿ ನಡುವೆ ರೋಚಕ ಪಂದ್ಯ ಏರ್ಪಟಟಿತು.
ಪಂದ್ಯದ ಆರಂಭದಿಂದ ಮದ್ಯದವರೆಗೆ ಉಭಯ ತಂಡಗಳು 29*30 ಪಾಯಿಂಟ್‌ನೊಂದಿಗೆ ಸಮಬಲದಿಂದ ಪಂದ್ಯವನ್ನು ತಮ್ಮ ಹಿಡಿತದಲ್ಲಿ ಹಿಡಿದಿಟ್ಟುಕೊಂಡಿದ್ದವು, ನಂತರ ಬಿಪಿಸಿಎಲ್ ಬೆಸ್ಟ್ ರೈಡರ್ ಶುಭಂ ತನ್ನ ಚಾಣಾಕ್ಯದಿಂದ ಎದುರಾಳಿ ಅಡಿಯನ್ ಪ್ಯಾಕ್ಟ್ರಿ ದೆಹಲಿಯ ಎದುರು ಉತ್ತಮ ದಾಳಿಯಿಂದ 3ಪಾಯಿಂಟ್ ಪಡೆಯುವ ಮೂಲಕ ಪಂದ್ಯವು ತಿರುವು ಪಡೆಯಿತು. ಅಡಿಯನ್ ಪ್ಯಾಕ್ಟ್ರಿ ದೆಹಲಿಯ ಆಲ್‌ರೌಂಡರ್ ಅಂಕಿತ್ ಪರಿಶ್ರಮ ವ್ಯರ್ಥವಾಯಿತು. ಕಬಡ್ಡಿ ಅಭಿಮಾನಿ ಪ್ರೇಕಕರಿಗೆ ಆರಂಭದಿಂದ ಕೊನೆಯವರರೆಗೂ ರೋಚಕತೆ ನೀಡುತ್ತಾ ಬಂದ ಉಭಯ ತಂಡಗಳು ಮುಕ್ತಾಯಕ್ಕೆ ಎರಡು ನಿಮಿಷ ಇರುವಾಗ ಅಡಿಯನ್ ಪ್ಯಾಕ್ಟ್ರಿ ದೆಹಲಿ ಹಿನ್ನಡೆ ಅನುಭವಿಸಿ ಕೈಚಲ್ಲಿದಾಗ ಎದುರಾಳಿ ತಂಡ ಬಿಪಿಸಿಎಲ್ ಮುಂಬೈ 36-34 ಪಾಯಿಂಟ್ ಮುನ್ನಡೆ ಪಡೆಯುವ ಮೂಲಕ ವಿಜಯ ಪತಾಕೆ ಹಾರಿಸಿತು.
ಕೋಟ್ಸ್-
ನಾನು ಸಾಕಷ್ಟು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ. ಇವತ್ತು ತೆಗ್ಗಿಯ ಗ್ರಾಮದಲ್ಲಿ ಆಯೋಜನೆ ಮಾಡಿದ ಕಬಡ್ಡಿಗೂ ಅಂತರಾಷ್ಟ್ರೀಯ ಕಬಡ್ಡಿಗೂ ಯಾವುದೇ ವ್ಯತ್ಯಾಸವಿಲ್ಲ. ಇಲ್ಲಿಯ ಸಂಘಟಿತರು ಚನ್ನಾಗಿ ಪಂದ್ಯದ ಆಯೋಜನೆ ಮಾಡಿದ್ದಾರೆ. ಇಂತಾ ಗ್ರಾಮೀಣ ಮಟ್ಟದಲ್ಲಿ ಅಖಿಲ ಭಾರತ “ಎ” ಗ್ರೇಡ್ ಕಬಡ್ಡಿ ಪಂದ್ಯಾವಳಿಯನ್ನು ಆಯೋಜನೆ ಮಾಡುವುದರಿಂದ ಗ್ರಾಮೀಣ ಪ್ರತಿಭೆಗಳನ್ನು ಹುಟ್ಟುಹಾಕಲು ಸಹಕಾರಿಯಾಗುತ್ತದೆ. ಇಲ್ಲಿ ನಮ್ಮ ಮುಂಬೈ ತಂಡದ ಆಟಗಾರರು ಆಲ್‌ರೌಂಡ್ ಆಟ ಪ್ರದರ್ಶಿಸಿ ಗೆಲುವು ಸಾಧಿಸಿದರು.
-ಇಶಾಂಕ್ ದೇವಾಡಿಗ್. ಭಾರತ ಪ್ರೋ ಕಬಡ್ಡಿ ಆಟಗಾರ ಮುಂಬೈ.
ಕೋಟ್ಸ್-
ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಆಟಗಾರರ ಜೊತೆ ನಮ್ಮ ಭಾಗದ ಆಟಗಾರರು ಆಡೋದ್ರಿಂದ ಅವರಲ್ಲಿರುವ ಆಟದ ಕೌಶಲ್ಯಗಳನ್ನು ಕಲಿತು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ತಂಡಗಳಲ್ಲಿ ಭಾಗವಹಿಸುವ ವೇದಿಕೆ ಇದಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಲಾಗಿದೆ.
-ವಿಠ್ಠಲ್ ಮೇತ್ರಿ ಪ್ರೋ ಕಬಡ್ಡಿ ಆಟಗಾರ. ತೆಗ್ಗಿ ಗ್ರಾಮಸ್ಥ
ಬಾಕ್ಸ್ ಐಟಂ-
ಬೆಂಗಳೂರು, ಮುಂಬೈ, ಕಲ್ಕತ್ತಾ, ರಾಜಕೋಟ್, ನವದೆಹಲಿ, ಸಿಕಂದರಾಬಾದ್, ತಾಣೆ, ನೆಲಮಂಗಲ, ಕೇರಳ, ಗದಗ ಸೇರಿದಂತೆ 21 ತಂಡಗಳು ಭಾಗವಹಿಸಿದ್ದವು.
ಮುಖ್ಯಂಶಗಳು-
ಬೀಳಗಿ ತಾಲೂಕಿನ ತೆಗ್ಗಿ ಸೋಮಲಿಂಗೇಶ್ವರ ಕಾರ್ತಿಕೋತ್ಸವದ ನಿಮಿತ್ಯವಾಗಿ ಆಯೋಜನೆ.
ಅಖಿಲ ಭಾರತ “ಎ” ಗ್ರೇಡ್ ಆಹ್ವಾನಿತ ಪುರುಷರ ಕಬಡ್ಡಿ ವೈಭವದ ಪಂದ್ಯಾವಳಿ.
ಸುಸಜ್ಜಿತವಾದ ಕ್ರೀಡಾಂಗಣ ಆಯೋಜನೆ.
ಪೈನಲ್ ಪಂದ್ಯದಲ್ಲಿ ಉಭಯ ತಂಡಗಳು ಕೊನೆಯವರೆಗೂ ಸಮಬಲ ಸಾಧಿಸುತ್ತಾ ಪ್ರೇಕ್ಷಕರಿಗೆ ಪಂದ್ಯದ ರಸದೌತನ ಉನಬಡೆಸಿ ರೋಚಕತೆ ಹೆಚ್ಚಿಸಿದವು.
ಬಿಪಿಸಿಎಲ್ ಮುಂಬೈ ಟ್ರೋಪಿಯೊಂದಿಗೆ ರೂ.2ಲಕ್ಷ ಬಹುಮಾನ ಪಡೆಯಿತು.
ಅಡಿಯನ್ ಪ್ಯಾಕ್ಟ್ರಿ ದೆಹಲಿ ರನ್ನರಾಫ್‌ಗೆ ತೃಪ್ತಿಪಟ್ಟು ರೂ.1ಲಕ್ಷ ಬಹುಮಾನ ಗಳಿಸಿತು.
ಪೋಟೊ: 24 ಬಿಎಲ್ ಜಿ 1
ಅಖಿಲ ಭಾರತ “ಎ” ಗ್ರೇಡ್ ಆಹ್ವಾನಿತ ಪುರುಷರ ಕಬಡ್ಡಿ ವೈಭವದ ಪಂದ್ಯಾವಳಿಯಲ್ಲಿ ಟ್ರೋಪಿ ಎತ್ತಿಹಿಡಿದ ಬಿಪಿಸಿಎಲ್ ಮುಂಬೈ ತಂಡ.