ಸರ್ಕಾರಿ ಹೊರಗುತ್ತಿಗೆ ನೌಕರರ ಭದ್ರತೆಗೆ ರಾಜ್ಯದಲ್ಲಿ ಸಂಘ ಸ್ಥಾಪನೆಯಾಗಿದೆ : ದುರ್ಗೇಶ

An association has been established in the state for the security of government outsourced employee

ಸರ್ಕಾರಿ ಹೊರಗುತ್ತಿಗೆ ನೌಕರರ ಭದ್ರತೆಗೆ ರಾಜ್ಯದಲ್ಲಿ ಸಂಘ ಸ್ಥಾಪನೆಯಾಗಿದೆ : ದುರ್ಗೇಶ 

ಬ್ಯಾಡಗಿ  14: ಸರ್ಕಾರಿ ಹೊರಗುತ್ತಿಗೆ ನೌಕರರ ಭದ್ರತೆಗೆ ರಾಜ್ಯದಲ್ಲಿ ಸಂಘ ಸ್ಥಾಪನೆಯಾಗಿದೆ ಎಂದು ಜಿಲ್ಲಾ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಉಪಾಧ್ಯಕ್ಷ ದುರ್ಗೇಶ ವಂದುವಗಲ ತಿಳಿಸಿದ್ದಾರೆ.ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ಹೊರ ಗುತ್ತಿಗೆದಾರರ ಸಭೆಯಲ್ಲಿ ಹೊರ ಗುತ್ತಿಗೆದಾರರ ಹಿತ ಕಾಪಾಡಲು ಹತ್ತು ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹೊರಗುತ್ತಿಗೆದಾರರಿಗೆ ಸಂಘಗಳನ್ನು ಕಟ್ಟಿ ಹೊರಗುತ್ತಿಗೆದಾರರ ಹಿತ ಕಾಪಾಡಲು ಕಾರ್ಮಿಕ ಇಲಾಖೆ ಅನುಮತಿ ನೀಡಲಾಗಿದೆ.ಇದರಿಂದಾಗಿ ಹೊರಗುತ್ತಿಗೆ ನೌಕರರನ್ನು ಏಜೆನ್ಸಿಗಳು ಮತ್ತು ಮಧ್ಯವರ್ತಿಗಳ ಶೋಷಣೆಯಿಂದ ರಕ್ಷಿಸಲು ನೆರವು ನೀಡಲಿದೆ. ಬೇಡಿಕೆಗೆ ತಕ್ಕಂತೆ ಗುತ್ತಿಗೆ ಕಾರ್ಮಿಕರನ್ನು ಪೂರೈಸುವುದರ ಜತೆಗೆ, ನೌಕರರಿಗೆ ಪಿಎಫ್, ಇಎಸ್‌ಐ, ಸಾಲ ಸೌಲಭ್ಯಗಳನ್ನು ಒದಗಿಸುವುದು ಸಂಘದ ಉದ್ದೇಶವಾಗಿದೆ ಎಂದರು.ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸುಧಾಕರ, ಕಾರ್ಯದರ್ಶಿ ಮುರುಗೇಶ ಸಮ್ಮುಖದಲ್ಲಿ ಹಾವೇರಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.ಜಿಲ್ಲಾ ಸರ್ಕಾರಿ ಹೊರಗುತ್ತಿಗೆ ನೌಕರರ ಜಿಲ್ಲಾಧ್ಯಕ್ಷರಾಗಿ ಗುರುರಾಜ ಕಂಬಳಿ ಪ್ರಧಾನ ಕಾರ್ಯದರ್ಶಿ- ರಾಜು ಪೂಜಾರ ಉಪಾಧ್ಯಕ್ಷರಾಗಿ ದುರಗೇಶ ವಂದುವಗಲ ಮತ್ತು ಕಾವ್ಯ ಬಗಾಡಿ ಜಿಲ್ಲಾ ಕಾರ್ಯದರ್ಶಿಗಳಾಗಿ ಸುರೇಶ ಸಾಗರ ಮತ್ತು   ಹನುಮಂತ ಮಾಲೇರ, ಶಿವಲಿಂಗಪ್ಪ ಗೋಕಾವಿಸಂಘಟನಾ ಕಾರ್ಯದರ್ಶಿ ಗಣೇಶ ಮುದುಕಪ್ಪನವರ ಸಹ ಸಂಘಟನೆ ಕಾರ್ಯದರ್ಶಿ- ಹನುಮಂತಪ್ಪ ಬಾಗಲರ ಅವರನ್ನು ನೇಮಿಸಲಾಗಿದೆ.