ರೈಲು ಮಾರ್ಗ ಹೋರಾಟ ಸಮಿತಿಯಿಂದ ಲೋಕಾಯುಕ್ತರಿಗೆ ಮನವಿ
ತಾಳಿಕೋಟಿ 12: ಕರ್ನಾಟಕ ರಾಜ್ಯದ ನಿಯೋಜಿತ ಆಲಮಟ್ಟಿ- ಯಾದಗಿರಿ ರೈಲು ಮಾರ್ಗವನ್ನು ಅನುಷ್ಠಾನಗೊಳಿಸುವಲ್ಲಿ ಸಹಕರಿಸಬೇಕೆಂದು ತಾಳಿಕೋಟಿ ರೈಲು ಮಾರ್ಗ ಹೋರಾಟ ಸಮಿತಿಯ ಪದಾಧಿಕಾರಿಗಳು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಹೋರಾಟ ಸಮಿತಿಯ ಪದಾಧಿಕಾರಿಗಳು ಭಾನುವಾರ ಲೋಕಾಯುಕ್ತರ ಸ್ವಗ್ರಾಮ ಪಡೇಕನೂರದ ಅವರ ತೋಟದ ಮನೆಯಲ್ಲಿ ಭೇಟಿಯಾದರು. ಈ ಸಮಯದಲ್ಲಿ ಸಮಿತಿಯ ಸದಸ್ಯ ಶ್ರೀಕಾಂತ ಪತ್ತಾರ ಅವರು ಈ ರೈಲು ಮಾರ್ಗದ ಅಗತ್ಯ ಹಾಗೂ ಅದರ ಅನುಷ್ಠಾನಕ್ಕಾಗಿ ಇಲ್ಲಿವರೆಗೆ ನಡೆದು ಬಂದ ಹೋರಾಟದ ಕುರಿತು ಮಾನ್ಯ ಲೋಕಾಯುಕ್ತರಿಗೆ ವಿವರಗಳನ್ನು ನೀಡಿ ಸಹಕಾರಕ್ಕೆ ಮನವಿ ಮಾಡಿಕೊಂಡರು.
ಮಾಹಿತಿ ಪಡೆದುಕೊಂಡ ಲೋಕಾಯುಕ್ತ ನ್ಯಾಯಮೂರ್ತಿ ಅವರು ನಾನು ಸಹ ಇದೇ ತಾಲೂಕಿನವನೆ ಆಗಿರುವುದರಿಂದ ಸಹಜವಾಗಿ ನನಗೂ ಇದರ ಅನುಷ್ಠಾನ ಕುರಿತು ಹೆಚ್ಚಿನ ಆಸಕ್ತಿ ಇದೆ. ಏಕೆಂದರೆ ಇದೊಂದು ಸಾರ್ವಜನಿಕ ಕೆಲಸ ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಆದರೆ ನನಗೆ ನನ್ನದೇ ಆದ ಕೆಲವು ಇತಿಮಿತಿಗಳಿವೆ. ಅದರ ವ್ಯಾಪ್ತಿಯಲ್ಲಿ ನನಗೆ ಕೆಲಸ ಮಾಡಬೇಕಾಗುತ್ತದೆ. ಆದರೂ ಸಹ ನಾನು ಈ ನಿಟ್ಟಿನಲ್ಲಿ ಸಾಧ್ಯವಿದ್ದಷ್ಟು ಸಹಕರಿಸುತ್ತೇನೆ ಎಂದರು.ಈ ಸಮಯದಲ್ಲಿ ರೈಲು ಮಾರ್ಗ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಆರ್.ಎಸ್. ಪಾಟೀಲ( ಕೂಚಬಾಳ),ಪ್ರಭುಗೌಡ ಮದರಕಲ್ಲ, ಆರಿ್ವ.ಜಾಲವಾದಿ, ಮಹಾಂತೇಶ ಮುರಾಳ, ರಾಜು ಹಂಚಾಟೆ, ಪ್ರಕಾಶ್ ಹಜೇರಿ, ಇಬ್ರಾಹಿಂ ಮನ್ಸೂರ, ಸಂಗನಗೌಡ ಅಸ್ಕಿ, ರಾಘವೇಂದ್ರ ಚೌವಾಣ, ವೀರೇಶ ಕೋರಿ, ಶಫೀಕ ಇನಾಮದಾರ, ಈಶ್ವರ್ ಹೂಗಾರ, ಹಣಮಂತ ದಢವಳಗಿ, ವಿಠ್ಠಲ ಮೋಹಿತೆ, ಆಸೀಫ್ ಕೆಂಭಾವಿ, ರಾಘು ಮಾನೆ ಮತ್ತಿತರರು ಇದ್ದರು.