ಅಮ್ಮಿನಬಾವಿ ಇಂದು ನಂದೀಶ್ವರ ಜಾತ್ರೆ

ಲೋಕದರ್ಶನವರದಿ

ಧಾರವಾಡ 18 : ಇಲ್ಲಿಗೆ ಸಮೀಪದ ತಾಲೂಕಿನ ಅಮ್ಮಿನಬಾವಿ ಗ್ರಾಮದ ಪ್ಯಾಟಿ ಬಸವಣ್ಣ (ನಂದೀಶ್ವರ) ದೇವರ ವಾಷರ್ಿಕ ಜಾತ್ರಾ ಮಹೋತ್ಸವ ಶುಕ್ರವಾರ (ಏಪ್ರೀಲ್ 19 ರಂದು) ದವನದ ಹುಣ್ಣಿಮೆಯ ದಿನ ಜರುಗಲಿದೆ. 

ಜಾತ್ರೆಯ ಅಂಗವಾಗಿ ಪ್ರಾತಃಕಾಲದಲ್ಲಿ ಬಸವಣ್ಣ (ನಂದೀಶ್ವರ) ದೇವರ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ, ಮಹಾಮಂಗಳಾರತಿ ಮುಂತಾದ ಪೂಜಾ ಕಾರ್ಯಗಳು ಜರುಗುವವು. ನಂತರ ಮಹಾಪ್ರಸಾದ ವಿತರಣೆ ನಡೆಯುವುದು.

ಸಂಜೆ 4.30 ಗಂಟೆಗೆ ಅಲಂಕೃತ ರಥೋತ್ಸವವು ವಿವಿಧ ಜನಪದ ವಾದ್ಯ ಮೇಳ ಗಳೊಂದಿಗೆ ವಿಜೃಂಭಣೆ ಯಿಂದ  ನಡೆಯಲಿದ್ದು, ದೇವಾಲಯದ ಪ್ರಧಾನ ಅರ್ಚಕರು ರಥೋತ್ಸವದ ಕೊನೆಯಲ್ಲಿ ವಾಷರ್ಿಕ ಮಳೆಬೆಳೆ-ಆಗುಹೋಗುಗಳ ಕುರಿತು ಹೇಳಿಕೆ (ಕಾಣರ್ಿಕ) ಹೇಳುವ ರೂಢಿ ಇದೆ.

ಈ ಜಾತ್ರೆಯಲ್ಲಿ ಸಮೀಪದ ಹಳ್ಳಿಗಳು ಮತ್ತು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳೂ ಸೇರಿದಂತೆ ದೂರದ ಕೊಲ್ಲಾಪೂರ, ಗದಗ, ಹಾವೇರಿ, ಬೆಳಗಾವಿ ಜಿಲ್ಲೆಗಳ ಭಕ್ತರು ಆಗಮಿಸಿ ನಂದೀಶ್ವರನ ದರ್ಶನ ಪಡೆಯುವರೆಂದು ಅಮ್ಮಿನಬಾವಿ ಮಂಡಳ ಪಂಚಾಯತಿ ಮಾಜಿ ಪ್ರಧಾನ ಎಂ.ಸಿ. ಹುಲ್ಲೂರ ಹಾಗೂ ಜಿ.ಎಂ. ಹಂಚಿನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.