ಸೌಹಾರ್ದ ಸಹಕಾರಿ ರಜತ ಮಹೋತ್ಸವ

Amicable Cooperative Silver Jubilee

ಸೌಹಾರ್ದ ಸಹಕಾರಿ ರಜತ ಮಹೋತ್ಸವ  

ಹೂವಿನ ಹಡಗಲಿ 02: ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದ 25 ನೇ ವರ್ಷದ ರಜತ ಮಹೋತ್ಸವ, ಸಹಕಾರಿ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಬುಧವಾರ ಪಟ್ಟಣದ ಗಿರಿಮಲ್ಲಿಗೆ ಮಹಿಳಾ ಸೌಹಾರ್ದ ಸಹಕಾರಿಯಲ್ಲಿ ನೆರವೇರಿಸಲಾಯಿತು.ಸಂಯುಕ್ತ ಸಹಕಾರಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಮ್ಮ ಸಹಕಾರಿಯು ಭಾಗಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಅಧ್ಯಕ್ಷೆ ಸವಿತಾ ಅಂಗಡಿ ಹೇಳಿದರು. 

ಈ ಐತಿಹಾಸಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಮ್ಮ ಸಹಕಾರಿ ಠೇವಣಿದಾರರಿಗೆ ಹೆಚ್ಚಿನ ಮಟ್ಟದಲ್ಲಿ ಪಾರದರ್ಶಕ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸೋಣ ಎಂದರು.ನಿರ್ದೇಶಕಿ ಕುಂಬಾರಿ ಸವಿತಾ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಗತಿಗೆ ಪೂರಕವಾಗಿ ಕೆಲಸ ನಿರಂತರವಾಗಿ ಮಾಡುವುದಾಗಿ ತಿಳಿಸಿದರು.ಉಪಾಧ್ಯಕ್ಷೆ ನರ್ಮದಾ ಯಲಗಚ್ಚಿನ, ನಿರ್ದೇಶಕರಾದ ಮಂಗಳಾ ವಾಲಿ ಶೆಟ್ಟರ್, ಸೌಮ್ಯ ತುರಕಾಣಿ, ವಿಜಯ ಕಡ್ಲಿ, ನಾಗರತ್ನ ಕುಂಚೂರ್,ಭುವನೇಶ್ವರಿ ಎ ಕೆ, ಲಲಿತಾ ಕೋರಿ, ವ್ಯವಸ್ಥಾಪಕಿ ಪೂಜಾ,ಪಿಗ್ಮಿ ಕಲೆಕ್ಟರ್ ವೀರನಗೌಡ ಇತರರು ಉಪಸ್ಥಿತರಿದ್ದರು.