ಅಂಬೇಡ್ಕರ ಪ್ರತಿಮೆ ಅನಾವರಣ ಸಮಾವೇಶದ ಪ್ರಚಾರ ಸಾಮಗ್ರಿ ಬಿಡುಗಡೆ
ಹುಕ್ಕೇರಿ,20 : ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ ಭಾರತದ ಭಾಗ್ಯವಿಧಾತ ಡಾ.ಬಿ.ಆರ್.ಅಂಬೇಡ್ಕರ ಅವರ ಕಂಚಿನ ಪ್ರತಿಮೆ ಅನಾವರಣ ಸಮಾರಂಭದ ಪ್ರಚಾರ ಸಾಮಗ್ರಿಗಳನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು.
ಇಲ್ಲಿನ ಕೋರ್ಟ್ ಸರ್ಕಲ್ ಬಳಿ ಸ್ಥಾಪಿಸಿರುವ ಅಂಬೇಡ್ಕರ ಪ್ರತಿಮೆ ಸಭಾಂಗಣದಲ್ಲಿ ಇದೇ ತಿಂಗಳು ಜ. 25 ರಂದು ನಡೆಯುವ ಪ್ರತಿಮೆ ಅನಾವರಣ ಸಮಾವೇಶದ ಬ್ಯಾನರ್, ಕರಪತ್ರ, ಬಂಟಿಂಗ್ಸ್ ಸೇರಿದಂತೆ ಪ್ರಚಾರ ಸಾಮಗ್ರಿಗಳನ್ನು ತಾಲೂಕಿನ ವಿವಿಧ ದಲಿತ ಮುಖಂಡರು ಬಿಡುಗಡೆಗೊಳಿಸಿದರು.
ಈ ವೇಳೆ ಮುಖಂಡರಾದ ಸುರೇಶ ತಳವಾರ, ಮಲ್ಲಿಕಾರ್ಜುನ ರಾಶಿಂಗೆ ಮಾತನಾಡಿ, ಅಂಬೇಡ್ಕರ ಪ್ರತಿಮೆ ಅನಾವರಣ ಸಮಾವೇಶವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಯೋಜಿಸುವ ಮೂಲಕ ಹುಕ್ಕೇರಿ ಇತಿಹಾಸದಲ್ಲಿಯೇ ಚಾರಿತ್ರಿಕ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ. ಬೆಳಗ್ಗೆ ಅಡವಿಸಿದ್ದೇಶ್ವರ ಮಠದಿಂದ ಸುಮಾರು 15ಕ್ಕೂ ಹೆಚ್ಚು ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ, ಮಧ್ಯಾಹ್ನ ಪ್ರತಿಮೆ ಅನಾವರಣ, ಬಳಿಕ ಚಿಕ್ಕೋಡಿ ರಸ್ತೆಗೆ ಹೊಂದಿಕೊಂಡಿರುವ ಕತ್ತಿ ಲೇಓಟ್‌ನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಉದಯ ಹುಕ್ಕೇರಿ, ಸದಸ್ಯ ದೀಲೀಪ ಹೊಸಮನಿ ಮಾತನಾಡಿ, ಪಟ್ಟಣದ ಪ್ರಮುಖ ಬೀದಿ ಮತ್ತು ವೃತ್ತಗಳಲ್ಲಿ ಅಂಬೇಡ್ಕರ ಜೀವನಾಧಾರಿತ ಗೋಡೆ ಬರಹಗಳನ್ನು ಬರೆಯಿಸುವದು, ಅಲಂಕಾರಿಕ ದೀಪಗಳಿಂದ ಸಿಂಗರಿಸುವುದು ಇಡೀ ಪಟ್ಟಣವನ್ನು ನೀಲಿಮಯಗೊಳಿಸಲಾಗುವುದು. ಖ್ಯಾತ ವಿಚಾರವಾದಿಗಳಿಂದ ವಿಶೇಷ ಉಪನ್ಯಾಸ, ಪ್ರಮುಖ ಮಾರ್ಗಗಳಲ್ಲಿ ಸ್ವಾಗತ ಕೋರುವ ಕಮಾನ್ ಮತ್ತು ಬ್ಯಾನರ್‌ಗಳ ಅಳವಡಿಸಲಾಗುತ್ತಿದೆ ಎಂದರು.
ಮುಖಂಡರಾದ ಉದಯ ಹುಕ್ಕೇರಿ, ಸುರೇಶ ತಳವಾರ, ಮಲ್ಲಿಕಾರ್ಜುನ ರಾಶಿಂಗೆ, ಬಸವರಾಜ ಕೋಳಿ, ದೀಲೀಪ ಹೊಸಮನಿ, ರಮೇಶ ಹುಂಜಿ, ಸದಾಶಿವ ಕಾಂಬಳೆ, ಕೆಂಪಣ್ಣಾ ಶಿರಹಟ್ಟಿ, ರವಿ ಕಾಂಬಳೆ, ಪ್ರಮೋದ ಕೂಗೆ, ಅಪ್ಪಣ್ಣಾ ಖಾತೇದಾರ, ಮಾರುತಿ ತಳವಾರ, ಶ್ರೀನಿವಾಸ ವ್ಯಾಪಾರಿ, ಶಂಕರ ತಿಪ್ಪನಾಯಿಕ, ಶಿವಾನಂದ ಮರಿನಾಯಿಕ, ಲಖನ್ ಶಿಂಧೆ, ನಿಖಿಲ್ ಹಾದಿಮನಿ, ಸಂಜು ಜೀವನ್ನವರ, ಲಗಮಣ್ಣ ಕಣಗಲಿ, ರವಿ ಸನದಿ, ಮುತ್ತು ಕಾಂಬಳೆ, ರೋಹಿತ ತಳವಾರ, ಮಾರುತಿ ಚಿಕ್ಕೋಡಿ, ಗೋಪಾಲ ತಳವಾರ ಮತ್ತಿತರರು ಉಪಸ್ಥಿತರಿದ್ದರು.