ಸರಕಾರಿ ಬಾಲಕರ ಬಾಲಮಂದಿರದಲ್ಲಿ ಅಂಬೇಡ್ಕರ ಜಯಂತಿ

ಬೆಳಗಾವಿ, 15: ಶೋಷಿತ ಹಾಗೂ ದುರ್ಬಲ ವರ್ಗದವರ ಸಮಾಜ ಸುಧಾರಣೆ ಆಗಬೇಕಾದರೆ ಶಿಕ್ಷಣ ಅತ್ಯವಶ್ಯವಾಗಿದೆ ಎಂದು ಅಭಿಪ್ರಾಯ ಪಟ್ಟವರು ಡಾ. ಬಿ.ಆರ್. ಅಂಬೇಡ್ಕರ ಎಂದು ಸಂಸ್ಥೆಯ ಅಧಿಕ್ಷಕರಾದ ಎ.ಪಿ.ಬಮ್ಮನಳ್ಳಿ ಅವರು ಹೇಳಿದರು.

ಖಾನಾಪೂರದ ಸರಕಾರಿ ಬಾಲಕರ ಬಾಲಮಂದಿರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 128ನೇ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಅವರು ಮಾತನಾಡಿದರು. 

ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಪಿ.ಬಿ. ತಳಕಟ್ನಾಳ ಅವರು ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಮಾತನಾಡುತ್ತ ಸಮಾಜದ ಮೇಲು ಕೀಳು, ಅಸಮಾನತೆಯನ್ನು ಹೋಗಲಾಡಿಸಲು ಸಾಕಷ್ಟು ಶ್ರಮ ವಹಿಸಿದ ಮಹಾನ್ ವ್ಯಕ್ತಿ ಎಂದು ಹೇಳಿದರು. 

  ವಿದ್ಯಾರ್ಥಿ ಯಾದ ಯಲ್ಲಾಲಿಂಗ ಭಜಂತ್ರಿ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ವಿದ್ಯಾಥರ್ಿಯಾದ ಸಚೀನ ಜೀರಗವಾಡ ಅಂಬೇಡ್ಕರ ಜೀವನ ಚರಿತ್ರೆ ಬಗ್ಗೆ ಮಾತನಾಡಿದರು. ಸಂಸ್ಥೆಯ ಎಲ್ಲ ಸಿಬ್ಬಂದಿಯವರು ಹಾಗೂ ಮಕ್ಕಳು ಕಾರ್ಯಕ್ರಮವನ್ನು ಶ್ರಮದಾನದೊಂದಿಗೆ ಮುಕ್ತಾಯಗೊಳಿಸಿದರು. ನಿರೂಪಣೆಯನ್ನು ಮುಖ್ಯೋಪಾಧ್ಯಾಯರಾದ ಎಸ್.ಎಂ. ಜನವಾಡೆ ನಿರ್ವಹಿಸಿದರು.