ಲೋಕದರ್ಶನ ವರದಿ
ಮುಧೋಳ 20: ತಾಲೂಕಿನ ತಿಮ್ಮಾಪೂರ ಗ್ರಾಮದ ರೈತರ ಸಹಕಾರಿ ಸಕ್ಕರೆ ಕಾಖರ್ಾನೆಯನ್ನು ರೈತರು ಕಟ್ಟಿ ಬೆಳಿಸಿದ ಸಂಸ್ಥಯಾಗಿದೆ. ಈ ಸಂಸ್ಥೆ ಯಾರೊಬ್ಬರ ವಯಕ್ತಿಕ ಆಸ್ತಿ ಅಲ್ಲ. ರೈತರ ಆಸ್ತಿಯಾಗಿದೆ. ರೈತರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸಲು ಆಡಳಿತ ಮಂಡಳಿ ಸದಾ ಬದ್ದವಾಗಿದೆ. ಇದರಲ್ಲಿ ಯಾವುದೇ ಪ್ರತಿಷ್ಠೆ ಹಠ ದ್ವೇಷ ಭಾವ ರೈತ ವಿರೋಧಿ ನೀತಿ ಹೊಂದಿಲ್ಲವೆಂದು ರೈತರ ಸಹಕಾರಿ ಸಕ್ಕರೆ ಕಾಖರ್ಾನೆಯ ಅಧ್ಯಕ್ಷ ರಾಮಣ್ಣ ತಳೇವಾಡ ಸ್ಪಷ್ಟಪಡಿಸಿದ್ದಾರೆ.
ಅವರು ಭಾನುವಾರ ಪತ್ರಿಕಾ ಹೇಳಿಕೆ ನೀಡಿ, ತಾಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆಯಾಗದೇ ಇರುವುದು, ನದಿಯಲ್ಲಿ ನೀರು ಇರದೇ ಇರುವುದು ಕೊಳವೆ ಬಾವಿಗಳ ಅಂತರಜಲಮಟ್ಟ ಗಣನಿಯವಾಗಿ ಕಡಿಮೆಯಾಗುರುವುದರಿಂದ ಕಬ್ಬು ಕಟಾವು ಗ್ಯಾಂಗುಗಳು ಕೆಲಸ ಇಲ್ಲದೇ ಹಿಂದಿರುಗುತ್ತಿರುವುದರಿಂದ ನಮಗೆ ಹಾನಿಯಾಗುತ್ತಿದೆ ಎಂದು ಗೊಳು ತೊಡಿಕೊಂಡ ರೈತರು,ದಯವಿಟ್ಟು ಕಾಖರ್ಾನೆ ಆರಂಬಿಸಿ ನಮ್ಮ ನೆರವಿಗೆ ಬರಬೇಕೆಂದು ಹಲವು ಕಬ್ಬು ಪೂರೈಸುವ ಶೇರುದಾರ ರೈತರು ವಿನಂತಿಸಿದ್ದರಿಂದ ಆಡಳಿತ ಮಂಡಳಿ ಕಾಖರ್ಾನೆ ಕಬ್ಬು ನುರಿಸುವ ಕಾರ್ಯ ಆರಂಭಿಸಿತು.
ಮುಧೋಳದ ಶಾಸಕರಾದ ಗೊವಿಂದ ಕಾರಜೋಳ ಅವರು ರೈತರ ಹೊರಾಟಕ್ಕೆ ಸ್ಪಂದಿಸಬೇಕು. ರೈತರಿಗೆ ಸಹಕಾರ ನೀಡಬೇಕು ಎಂದು ಪದೆ ಪದೇ ಆಡಳಿತ ಮಂಡಳಿಯನ್ನು ವಿನಂತಿಸುತ್ತಾ ಬಂದಿರುವುದು, ಇನ್ನುಳಿದ ಕಬ್ಬು ಬೆಳೆಗಾರರು ಮುಖಂಡರು ಕಬ್ಬು ಅರೆಯುವುದನ್ನು ನಿಲ್ಲಿಸಲು ಮನವಿ ಮಾಡಿ ಪ್ರತಿಭಟನೆ, ದರಣಿ ಮಾಡುವುದರ ಮೂಲಕ ಕಬ್ಬು ಅರೆಯುವುದನ್ನು ನಿಲ್ಲಿಸಲು ಆಗ್ರಹಿಸಿರುತ್ತಾರೆ.
ಶಾಸಕರ ಮನವಿಗೆ ಸ್ಪಂದಿಸಿ, ರೈತರ ಹಿತಾಸಕ್ತಿಗೆ ಬದ್ದರಾಗಿ ಕಾನೂನು ಸುವ್ಯವಸ್ಥೆಗೆ ಭಂಗವಾಗಬಾರದು ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಯಾಗಬಾರದು ಎನ್ನುವ ಉದ್ದೇಶದಿಂದ ಕಬ್ಬು ಕಟಾವು ಮಾಡುವ ಆದೇಶವನ್ನು ತಕ್ಷಣದಿಂದ ನಿಲ್ಲಿಸಲು ಆಡಳಿತ ಮಂಡಳಿ ನಿರ್ದರಿಸಿದೆ. ಕಬ್ಬಿನ ಗದ್ದೆಯಲ್ಲಿ ಕಾಖರ್ಾನೆಗೆ ಕಳುಹಿಸಲು ಈಗಾಗಲೇ ಕಟಾವು ಮಾಡಿ ಹೊಲದಲ್ಲಿ ಇರುವ ಅಂದಾಜು 300 ವಾಹನಗಳ ಕಬ್ಬನ್ನು ರೈತರಿಗೆ ಹಾನಿಯಾಗಬಾರದು ಎನ್ನುವ ಉದ್ದೇಶದಿಂದ ನುರಿಸಿ ಮುಂದೆ ಕಾಖರ್ಾನೆಯು ಕಬ್ಬು ನುರಿಸುವುದನ್ನು ನಿಲ್ಲಿಸಿ ಬಂದ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಳೇವಾಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ, ಎಲ್ಲರ ಸಹಕಾರ ಕೋರಿದ್ದಾರೆ.