ರೈತರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸದಾ ಬದ್ಧ : ಶಿವರಾಜ ಶಿವಪುರ
ಕಂಪ್ಲಿ 23: ರೈತರು ದೇಶದ ಬೆನ್ನೆಲುಬಾಗಿದ್ದು, ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಸದಾ ಬದ್ಧರಾಗಿದ್ದೇವೆ ಎಂದು ತಹಶೀಲ್ದಾರ್ ಶಿವರಾಜ ಶಿವಪುರ ಹೇಳಿದರು. ಅವರು ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನಡಿ ರೈತ ದಿನಾಚರಣೆ, ಪ್ರಶಸ್ತಿ ವಿಜೇತ ರೈತರಿಗೆ ಸನ್ಮಾನ, ಪ್ರಗತಿಪರ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿ, ರೈತರು ಸಾವಯವ ಬೇಸಾಯ ಪದ್ಧತಿಯಿಂದ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನು ಬೆಳೆಯಲು ಮುಂದಾಗಬೇಕು. ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ನೀಡುವುದು ಇಂದಿನ ರೈತರ ಪ್ರಮುಖ ಸವಾಲು ಆಗಿದೆ ಎಂದರು. ಗಂಗಾವತಿ ಕೃಷಿ ಸಂಶೋಧನೆ ಕೇಂದ್ರದ ಕೃಷಿ ವಿಜ್ಞಾನಿ ಡಾ.ಬದ್ರಿ ಪ್ರಸಾದ್ ಮಾತನಾಡಿ, ರೈತರು ಕೃಷಿಯೊಡನೆ ಉಪಕಸುಬುಗಳಲ್ಲಿ ತೊಡಗಿಸಿಕೊಳ್ಳಬೇಕು. ಬೇಸಿಗೆ ಬೆಳೆಯಾಗಿ ಹಲಸಂದಿ, ಹೆಸರು ಮೊದಲಾದ ಹಸಿರೆಲೆ ಗೊಬ್ಬರ ನೀಡುವ ಬೆಳೆ ಬೆಳೆಯಬೇಕೆಂದು ಸಲಹೆ ನೀಡಿದರು.
ಆತ್ಮ ಯೋಜನಡಿ ತಾಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿದ ಸಿ.ಸಣ್ಣ ರಾಮುಡು(ಕೃಷಿ ಪದ್ಧತಿ, ತೋಟಗಾರಿಕೆ, ಕೋಳಿ ಸಾಕಾಣಿಕೆ ವಿಭಾಗದಲ್ಲಿ) ಸನ್ಮಾನಿಸಿ ಗೌರವಿಸಲಾಯಿತು. ಕೃಷಿ ಅಧಿಕಾರಿ ಕೆ.ಸೋಮಶೇಖರ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿ.ಎ.ಚನ್ನಪ್ಪ, ಬಿ.ವಿ.ಗೌಡ, ವಿ.ವಿರೇಶ, ಕೊಟ್ಟೂರು ರಮೇಶ, ತಿಮ್ಮಪ್ಪನಾಯಕ, ಬಿ.ಗಂಗಾಧರಗೌಡ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ನವ್ಯ, ರೈತ ಸಂರ್ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಟಿ.ಜ್ಯೋತಿ, ತಾಂತ್ರಿಕ ಸಹಾಯಕ ರೇಣುಕಾರಾಜ್ ಸೇರಿದಂತೆ ರೈತರು ಹಾಗೂ ಅನುಗಾರರು ಪಾಲ್ಗೊಂಡಿದ್ದರು.