ನಾಗಾವಿ ಗ್ರಾಮದಲ್ಲಿ ಅಸುಂಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಅಲ್ತಾಫ್ ಕಾಗದಗಾರ ಅವರನ್ನು ಸನ್ಮಾನ

Altaf Papagara, the new president of Asundi Gram Panchayat, was felicitated in Nagavi village

ನಾಗಾವಿ ಗ್ರಾಮದಲ್ಲಿ ಅಸುಂಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಅಲ್ತಾಫ್ ಕಾಗದಗಾರ ಅವರನ್ನು ಸನ್ಮಾನ

ಗದಗ 19:  ಗ್ರಾಮದ ಅಭಿವೃದ್ಧಿ ಬಯಸಿ ನನ್ನ ಮೇಲೆ ವಿಶ್ವಾಸ ಇಟ್ಟು ನನ್ನೂರಿನ ಜನ ನನ್ನನ್ನು ಆಯ್ಕೆ ಮಾಡಿದ್ದು, ನಮ್ಮ ಗ್ರಾಮ ಪಂಚಾಯತಿಯನ್ನು ಮಾದರಿಯಾಗಿ ಮಾಡುವೆ ಎಂದು ಅಸುಂಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಅಲ್ತಾಫ್ ಕಾಗದಗಾರ ಹೇಳಿದರು. 

 ನಾಗಾವಿಯ ಸೋಮೇಶ ಹಿರೇಮಠ  ಪ್ರತಿಷ್ಠಾನ ಹಾಗು ನಾಗಾವಿ ನಾನಾ ಯೂಟ್ಯೂಬ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಜನಪರ ಕಾರ್ಯಗಳನ್ನು ಮೆಚ್ಚಿಕೊಂಡು ಒಮ್ಮತದಿಂದ  ಅಸುಂಡಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು,  ಅಸುಂಡಿ ಗ್ರಾಮ ಪಂಚಾಯತಿಯನ್ನು ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದು, ಆ ದಿಸೆಯಲ್ಲಿ  ಮುಂದುವರಿಯುತ್ತೇನೆ. ಸೋಮೇಶ ಹಿರೇಮಠ ಪ್ರತಿಷ್ಠಾನದವರು ಉತ್ತಮ ಕಾರ್ಯಕ್ರಮ ಮಾಡುತ್ತಿದ್ದು, ಅವರ ಅಭಿವೃದ್ಧಿ ಪರ ಕಾರ್ಯಗಳಿಗೆ ಕೈ ಜೋಡಿಸುವೆ ಎಂದು ಹೇಳಿದರು. 

ಅಸುಂಡಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಅಲ್ತಾಫ್ ಕಾಗದಗಾರ್, ಸಾಹಿತಿ, ರಾಗ ಸಂಯೋಜಕ ಹಾಜಿ ಮಾಸ್ಟರ್ ಹಿರೇಹರಕುಣಿ, ಚಿಂಚಲಿಯ ಕವಿಗಳಾದ ರಾಜೇಸಾಬ್ ಕೊಕ್ಕರಗುಂದಿ, ಬೆಳಧಡಿ ಗ್ರಾಮದ ಶ್ರೀದೇವಿ ಆರಾಧಕರಾದ ಶಂಭುಲಿಂಗಯ್ಯ ಕಲ್ಮಠ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.  

 ಬಿಜೆಪಿ ಮುಖಂಡರಾದ ಮಹೇಶ ದಾಸರ ಮಾತನಾಡಿ, ಜಿಲ್ಲೆಯ ಯುವ ಕಲಾವಿದರಿಗೆ ತಮ್ಮ ಪ್ರತಿಭೆ ತೋರಿ​‍್ಡಸಲು ಅವಕಾಶ ನೀಡುವುದಕ್ಕೆ ನಾಗಾವಿಯ ನಾನಾ ಯೂಟೂಬ್ ಮುಂದೆ ಬಂದಿದ್ದು, ಯುವ ಕಲಾವಿದರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದು.ಸಾಹಿತಿ ಹಾಜಿ ಮಾಸ್ತರ ಹರಕುಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕರ್ನಾಟಕದ ಭಜನಾ ಸಂಘಗಳು, ಜಾನಪದ ಕಲಾವಿದರು ಯೂಟೂಬ್ ಮೂಲಕ ತಮ್ಮ ಪ್ರತಿಭೆಗಳನ್ನು ತೋರಿ​‍್ಡಸಬೇಕು. ತಮ್ಮ ಕಲೆಯನ್ನು ಜಿಲ್ಲೆಯ ದೇವಸ್ಥಾನಗಳ ಇತಿಹಾಸವನ್ನು ಪ್ರಚಾರ ಮಾಡಬೇಕು ಎಂದು ಹೇಳಿದರು. 

ಸೋಮೇಶ ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷರಾದ ಬಸವಣ್ಣೆಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿ, ಮಾತನಾಡಿದರು.ಪ್ರವೀಣ್ ಶೆಟ್ಟಿ ಬಣದ  ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾಧ್ಯಕ್ಷರಾದ ವೆಂಕಟೇಶ ಬೇಲೂರು, ಕಾರ್ಮಿಕ ಘಟಕದ ಅಧ್ಯಕ್ಷರಾದ ತಿಮ್ಮಣ್ಣ ಡೋಣಿ, ಕವಿಗಳಾದ ರಾಜೇಸಾಬ ಕೊಕ್ಕರಗುಂದಿ, ಮುಖಂಡರಾದ ಮೈಲಾರ​‍್ಪ ಕೋಟೆಪ್ಪನವರ್, ಮಂಜು ತಳವಾರ,  ಹರೀಶ ಮಾಡಳ್ಳಿ, ಗುರುಸಿದ್ದಪ್ಪ ಮಡಿವಾಳರ, ಶ್ರೀಮತಿ ಶಿವಲಿಂಗವ್ವ ಹಿರೇಮಠ, ಶಾಂತವ್ವ ನಂದಿಕೋಲಮಠ, ಅನಿತಾ ಬೆನಕನಾಳಮಠ, ನಿವೇದಿತಾ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.  ಧೀರಜ್ ನಂದಿಕೋಲಮಠ ಸ್ವಾಗತಿಸಿ ವಂದಿಸಿದರು.