ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಅಗತ್ಯ ತಾಂತ್ರಿಕ ಶಿಕ್ಷಣ ಅವಶ್ಯವಾಗಿದೆ -ವಿಧಾನಸಭೆ ಉಪಾಧ್ಯಕ್ಷ ರುದ್ರ​‍್ಪ ಲಮಾಣಿ

Along with reading, necessary technical education is necessary for students - Vidhana Sabha Deputy

ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಅಗತ್ಯ ತಾಂತ್ರಿಕ ಶಿಕ್ಷಣ ಅವಶ್ಯವಾಗಿದೆ -ವಿಧಾನಸಭೆ ಉಪಾಧ್ಯಕ್ಷ ರುದ್ರ​‍್ಪ ಲಮಾಣಿ 

ಹಾವೇರಿ 23: ಇಂದಿನ ಆಧುನಿಕ ಯುಗದಲ್ಲಿ ಓದಿನ ಜೊತೆಗೆ ತಾಂತ್ರಿಕ ಶಿಕ್ಷಣ ಅವಶ್ಯವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ತಾಂತ್ರಿಕ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರ​‍್ಪ ಲಮಾಣಿ ಅವರು ಹೇಳಿದರು. 

ನಗರದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಎಸ್‌.ಸಿ.ಎಸ್‌.ಪಿ., ಟಿ.ಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ  ಅವರು ಮಆತನಾಡಿದರು. 

ವಿದ್ಯಾರ್ಥಿಗಳು ತಮಗೆ ವಿತರಿಸಲಾದ ಟ್ಯಾಬ್‌ಗಳ ಸದುಪೋಗ ಪಡೆದುಕೊಳ್ಳಬೇಕು.  ಅಗತ್ಯಕ್ಕೆ ತಕ್ಕಂತೆ ಹಾಗೂ ಒಳ್ಳೆಯ ವಿಷಯಗಳಿಗೆ ಮಾತ್ರ ಟ್ಯಾಬ್ ಬಳಸಬೇಕು ಎಂದು ಸಲಹೆ ನೀಡಿದರು. 

ಹಿಮ್ಸ್‌ ನಿರ್ದೇಶಕ ಡಾ.ಪ್ರದೀಪಕುಮಾರ ಮಾತನಾಡಿ,  ವೈದ್ಯಕೀಯ ಪ್ರಚಲಿತ ವಿಷಯಗಳ ಬಗ್ಗೆ  ಹಾಗೂ ವೈದ್ಯಕೀಯ ವಿಷಯಗಳ ಮಾಹಿತಿ ಪಡೆದಯಲು ಟ್ಯಾಬ್ ಸಹಕಾರಿಯಾಗಿದೆ ಎಂದರು. 

ಹಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ.ಪಿ.ಆರ್‌.ಹಾವನೂರ ಅವರು ಮಾತನಾಡಿ,  ಶಿಕ್ಷಣ ಜೊತೆಗೆ ಜೀವನ ನಿರ್ವಹಣೆಗೆ ತಾಂತ್ರಿಕ ಶಿಕ್ಷಣದ ಅವಶ್ಯಕತೆ ಬಹಳ ಇದೆ. ಅದನ್ನು ಅರಿತು ವಿದ್ಯಾರ್ಥಿಗಳು ವ್ಯಾಸಂಗ ಮಾಡಬೇಕು ಎಂದು ಸಲಹೆ ನೀಡಿದರು. 

ಪರಿಶಿಷ್ಟ ಜಾತಿ  ಹಾಗೂ  ಪರಿಶಿಷ್ಟ ಪಂಡಗದ 64 ನರ್ಸಿಂಗ್ ವಿದ್ಯಾರ್ಥಿಗಳಿಗೆ  ಹಾಗೂ  ಅರೇ ವೈದ್ಯಕೀಯ 68  ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು.  

ಕಾರ್ಯಕ್ರಮದಲ್ಲಿ ಹಿಮ್ಸ್‌ ಪ್ರಭಾರ ಮುಖ್ಯ ಆಡಳಿತಾಧಿಕಾರಿ ಡಾ.ನಾಗರಾಜ ಎಲ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಪರಸಪ್ಪ ಚುರ್ಚಿಹಾಳ, ಡಾ.ಕೊಟ್ರೇಶ, ಡಾ.ರಾಠೋಡ, ಡಾನಿರಂಜನ, ಡಾ.ಬಸವರಾಜ ತಳವಾರ, ಡಾ.ಮಂಜುನಾಥ, ಡಾ.ದಾಸರ, ಕೆ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಪ್ರಾಚಾರ್ಯ ಸರಸ್ವತಿ, ಅರೇವೈದ್ಯಕೀಯ ಸಂಯೋಜಕ ವಿನಾಯಕ ಕುಲಕರ್ಣಿ, ರಾಜೇಸಾಬನವರ, ಶಮೀಮಬಾನು, ಜಯಮ್ಮ ಅಂಗಡಿ, ಮೀನಾಕ್ಷಿ, ಬೆಳಗಾಂವಕರ, ಶೀಲ ಡಾನ್ಸ್‌ನ, ಮಾಲಾ ನಾಯಕ  ಇತರರು ಉಪಸ್ಥಿತರಿದ್ದರು.