ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮುಖ್ಯ: ಬೇವನೂರ
ದೇವರಹಿಪ್ಪರಗಿ, 08; ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ ಸಮಾಜಕ್ಕೆ ಕೊಡುಗೆಯಾಗಿ ಕೊಡುವುದು ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಎಸ್.ಬೇವನೂರ ತಿಳಿಸಿದರು.ಪಟ್ಟಣದ ಚೈತನ್ಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಾಲೆಯ ಅವರಣದಲ್ಲಿ ಶನಿವಾರ ಏರಿ್ಡಸಿದ್ದ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಪ್ರಗತಿಯನ್ನು ಪೋಷಕರು ಶಾಲೆಗೆ ಭೆಟಿ ನೀಡಿ ಪ್ರಗತಿಯನ್ನು ವಿಚಾರಿಸಿ ಕೊಳ್ಳಬೇಕು, ಇಂದು ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ಅಚಾರಗಳನ್ನು ವಿಚಾರಗಳನ್ನು ಪಾಲಿಸಬೇಕು. ಪೋಷಕರು ಮನೆಯಲ್ಲಿ ಅಭ್ಯಾಸ ಮಾಡುವ ವಾತಾವರಣ ರೂಪಿಸುವ ಮೂಲಕ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ. ಇದನ್ನು ಹೊರ ತೆಗೆಯುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕಿದೆ. ಅಂದಾಗಲೇ ಅವರು ಸಹ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿ.ಎಸ್.ಘಾತಟೆ, ಶಿಕ್ಷಣ ಸಂಯೋಜಕರಾದ ಎಸ್.ಎಂ.ಕಪನಿಂಬರಗಿ ಅವರು ಮಾತನಾಡಿ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಕುರಿತು ಹೇಳಿದರು.ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ಗುರುರಾಜ ಕುಲಕರ್ಣಿ ಅವರು ಮಾತನಾಡಿ, 22 ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆ, ಅಧ್ಯಕ್ಷರ ಆದಿಯಾಗಿ ಆಡಳಿತ ಮಂಡಳಿಯ ಸದಸ್ಯರು ಶಾಲೆಗೆ ಬೇಕಾದ ಎಲ್ಲ ಅಗತ್ಯ ಮೂಲ ಸೌಲಭ್ಯ ಒದಗಿಸುವ ಮೂಲಕ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸಂಸ್ಥೆ ತೆಗೆದಿದ್ದೇವೆ. ಪಾಲಕರು ಮಕ್ಕಳ ಪ್ರತಿನಿತ್ಯ ಹಾಜರಾತಿಯನ್ನು ಪರೀಕ್ಷಿಸಬೇಕು ಹಾಗೂ ಬರುವಂತ ದಿನಗಳಲ್ಲಿ ಶಾಲೆಗೆ ಒಬ್ಬ ಉತ್ತಮ ಇನ್ಸ್ತ್ರಕ್ಟರ್ ನೇಮಕ ಮಾಡುವ ಮೂಲಕ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.ಸಂದರ್ಭದಲ್ಲಿ ಕನ್ನಡ ಪ್ರಭ ಪತ್ರಿಕೆ ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಭೀಮಶಂಕರ ಪಾಟೀಲ, ಪ್ರಭು ಶಿರಗೂರ, ರಾಮನಗೌಡ ಗುಂಡಿ,ಬಿ.ಬಿ. ರಾಮನಳ್ಳಿ ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ರಮೇಶ.ಆರ್. ಕೋರಿ ಸ್ವಾಗತಿಸಿದರು, ಆರಿ್ಬ. ಕಲಕೇರಿ ನಿರೂಪಿಸಿದರು, ಶಿಕ್ಷಕಿ ಎಸ್ .ಎಂ. ನದಾಫ್ ವಂದಿಸಿದರು. ನಂತರ ಚೈತನ್ಯ ಉತ್ಸವದ ಮಕ್ಕಳ ಸಂಸ್ಕೃತಿಕ ಕಲರವ ಜರುಗಿತು