ಧಾರವಾಡ 23: ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶುಚಿ-ರುಚಿಯಾದ ಆಹಾರ ಪೂರೈಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಇಸ್ಕಾನ್ ಸಹಯೋಗದಲ್ಲಿ ಅಕ್ಷಯಪಾತ್ರೆ ಕಾರ್ಯಕ್ರಮದಡಿ ಕ್ರಮ ಕೈಗೊಳ್ಳಲಾಗಿತ್ತು. ಮತದಾನ ಪೂರ್ವದಿನವಾದ ಏ.22 ರ ರಾತ್ರಿ ತರಕಾರಿ ಪಲಾವ್, ಮೊಸರನ್ನ, ಖಾರಾ ಬೂಂದಿ.
ಮತದಾನ ದಿನವಾದ ಏ.23 ರ ಬೆಳಿಗ್ಗೆ ಉಪಹಾರಕ್ಕೆ ಶಿರಾ, ಉಪ್ಪಿಟ್ಟು, ಮಧ್ಯಾಹ್ನ ಊಟಕ್ಕೆ ಅನ್ನ, ಸಾಂಬಾರನ್ನು ರಾಯಾಪೂರದ ಇಸ್ಕಾನ್ ನಲ್ಲಿ ಸಿದ್ಧತೆ ಮಾಡಿ ಸಕಾಲಕ್ಕೆ ಪೂರೈಸಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರ ಹಸಿವು ನೀಗಿಸಲಾಯಿತು.
48 ಮಾರ್ಗಗಳ ಮೂಲಕ ಆಹಾರ ಪೂರೈಸಲಾಯಿತು. ಪ್ರತಿ ಮಾರ್ಗದ ಮೂಲಕ 30 ರಿಂದ 40 ಮತಗಟ್ಟೆಗಳಿಗೆ ಆಹಾರ ತಲುಪಿಸಲಾಯಿತು.
ಜಿಲ್ಲೆಯ ಎಲ್ಲ 1634 ಮತಗಟ್ಟೆಗಳಿಗೆ ನಿಯೋಜನೆಗೊಂಡಿದ್ದ ಸುಮಾರು 10 ಸಾವಿರ ಮತದಾನ ಸಿಬ್ಬಂದಿ, 3 ಸಾವಿರ ಸ್ವಯಂ ಸೇವಕರು, 1500 ಬಿಎಲ್ ಓ, ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು 3 ಸಾವಿರಕ್ಕೂ ಅಧಿಕ ಪೊಲೀಸ್ ,ಅರೆಸೇನಾ ಪಡೆ ಸಿಬ್ಬಂದಿಗೆ ಶುಚಿ- ರುಚಿಯಾದ ಆಹಾರ ಪೂರೈಸಲಾಯಿತು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.
ಜಿಲ್ಲಾಡಳಿತದ ಈ ಕ್ರಮ ನೆಮ್ಮದಿಯಾಗಿ,ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಪ್ರೇರಣೆ ನೀಡಿತು ಎಂದು ಕರ್ತವ್ಯ ನಿರತ ಸಿಬ್ಬಂದಿ ತೃಪ್ತಿ ವ್ಯಕ್ತಪಡಿಸಿದರು.
ಪ್ರತಿಯೊಂದು ಮತಗಟ್ಟೆಯಲ್ಲಿ ಶುದ್ಧ ಕುಡಿಯುವ ನೀರು, ವಿಕಲಚೇತನರು, ಹಿರಿಯ ನಾಗರಿಕರಿಗೆ ವಾಹನ, ಇಳಿಜಾರು ಮಾರ್ಗ ಮತ್ತಿತರ ಕನಿಷ್ಠ ಮೂಲಭೂತ ಸೌಕರ್ಯಗಳು ಇರುವುದು ಕಂಡು ಬಂದಿತು.