ಅಕ್ಕಮಹಾದೇವಿ ಬದುಕು ದಾರೀದೀಪ
ಹೂವಿನಹಡಗಲಿ: 13- ಕನ್ನಡದ ಮೊದಲ ಕವಯತ್ರಿ ಅಕ್ಕಮಹಾದೇವಿ ಬದುಕು ಎಲ್ಲರಿಗೂ ದಾರೀದೀಪ ಇದ್ದಹಾಗೆ ಎಂದು ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುಂಡವಾಡ ಉಮೇಶ್ ಹೇಳಿದರು.ಬಣಜಿಗ ಕ್ಷೇಮಾಭಿವೃದ್ಧಿ ಸಂಘ, ಮಹಿಳಾ ಘಟಕ ಸಹಯೋಗದೊಂದಿಗೆ ಶರಣೆ ಅಕ್ಕಮಹಾದೇವಿಯ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಕ್ಕಮಹಾದೇವಿ ವಚನಗಳು ಸಾರ್ವಕಾಲಿಕ ಶ್ರೇಷ್ಠ. ಎಲ್ಲಾ ಸಮುದಾಯದ ಪರಸ್ಪರ ಸಂಬಂಧ ಒಳಿತಿಗಾಗಿ ಪೂರಕವಾಗಿವೆ. ವಚನಗಳ ಸಾರದ ಹಾಗೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಶಿಕ್ಷಕಿ ವೈ ಜಯಮ್ಮ 12 ನೇ ಶತಮಾನದ ಶರಣರು ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ಮಾಡಿದರು ಎಂದು ಹೇಳಿದರು.ಸವಿತಾ ಅಂಗಡಿ ಮಾತನಾಡಿ ಅಕ್ಕಮಹಾದೇವಿ ಅವರು ಇಡೀ ಮಹಿಳಾ ಕುಲಕ್ಕೆ ಮಹಾಮೆರಗು. ಚಿಕ್ಕ ವಯಸ್ಸಿನಲ್ಲೇ ಅಸಾಧ್ಯವಾದುದನ್ನು ಸಾಧಿಸಿದ ಮಹಾಮಾತೆ ಎಂದು ಬಣ್ಣಿಸಿದರು.ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಎಸ್ ಎಸ್ ಅಧ್ಯಕ್ಷತೆ ವಹಿಸಿದ್ದರು.ಎಸ್ ಎಸ್ ಉಮಾ ಕಾಂತ್ ರಾಜಶೇಖರ್ ಬೆಲ್ಲದಐ ಎಸ್ ಸೂರ್ಯಪ್ರಕಾಶ್ರವಿ ಕುಂಬಾರಿ ಜಿಎಸ್ ಕಡ್ಲಿ ಮಲ್ಲಿಕಾರ್ಜುನ ಯಲಗಚ್ಚಿನ ಶಂಭುನಾಥ್ ಅಕ್ಕಿ, ಪರಮೇಶ್ ಸಕ್ಕರೆ ಕರಡೀಶ ಬ್ಯಾಂಕಿನ ಸಿಬ್ಬಂದಿ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.ನಿರುಪಮಾ, ಸುಮಂಗಲಾ ಕೆ ದೀಪಾ ಅಕ್ಕಿಅಕ್ಕಮಹಾದೇವಿ ವಚನಗಳನ್ನು ಪ್ರಸ್ತುತ ಪಡಿಸಿದರು.ಸವಿತಾ ಕುಂಬಾರಿ, ಕು ಮಮತಾ ನಿರ್ವಹಿಸಿದರು.