ಕಬ್ಬೂರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಗೆ ಐಹೊಳೆ ಚಾಲನೆ
ಚಿಕ್ಕೋಡಿ 05: ತಾಲೂಕಿನ ಕಬ್ಬೂರ ಪಟ್ಟಣಕ್ಕೆ ಸಮರ್ಕ ಕುಡಿಯುವ ನೀರು ಸರಬರಾಜು ಒದಗಿಸುವ ಯೋಜನೆಗೆ ಸುಮಾರು 18 ಕೋಟಿ ರೂ ಅನುದಾನ ಮಂಜೂರಾಗಿದೆ. ಶೀಘ್ರದಲ್ಲಿ ಪಟ್ಟಣದ ಜನರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಪುರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ತಾಲೂಕಿನ ಕಬ್ಬೂರ ಪಟ್ಟಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅಮೃತ 2.0 ಯೋಜನೆಯಡಿ ಮಂಜೂರಾದ 18 ಕೋಟಿ ರೂ ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು.
ದೇಶದ 1.0 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಮಧ್ಯಮ ಹಾಗೂ ಸಣ್ಣ ಪಟ್ಟಣಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು ಅಮೃತ ಯೋಜನೆಯಡಿ ಭಾರತ ಸಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ದೆಹಲಿ ಇವರು ಮಾರ್ಗಸೂಚಿ ಹೊರಡಿಸಿರುತ್ತಾರೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 50 ರಷ್ಟು, ರಾಜ್ಯ ಸರ್ಕಾರದ ಶೇ 40 ರಷ್ಟ್ರು ಮತ್ತು ಸ್ಥಳೀಯ ಸಂಸ್ಥೆಗಳಿಂದ ಶೇ 10 ರಷ್ಟು ಅನುದಾನ ನಿಗದಿಯಾಗಿರುತ್ತದೆ ಎಂದರು.
ಈ ಯೋಜನೆಯಡಿ ಕಬ್ಬೂರ ಪಟ್ಟಣಕ್ಕೆ ಮಾತ್ರ ಸಮೀತವಾಗಿದೆ. ಮುಂಬರುವ ದಿನಗಳಲ್ಲಿ ಕೆಂಚನಟ್ಟಿ, ಮೀರಾಪೂರಹಟ್ಟಿ, ಜೋಡಟ್ಟಿ ಗ್ರಾಮಗಳಿಗೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆ ರೂಪಿಸಲಾಗುತ್ತದೆ ಎಂದರು.
ಸಚಿವ ಸತೀಶ ಜಾರಕಿಹೊಳಿ ಆಪ್ತ ಸಹಾಯಕ ಶಿವು ಪಾಟೀಲ ಮಾತನಾಡಿ ಶಾಸಕ ದುರ್ಯೋಧನ ಐಹೊಳೆ ಮತ್ತು ಸಂಸದೆ ಪ್ರಿಯಾಂಕ ಜಾರಕಿಹೊಳಿ ವಿಶೇಷ ಪ್ರಯತ್ನದಿಂದ ಈ ಯೋಜನೆ ಮಂಜೂರಾಗಿದೆ. ಪಟ್ಟಣದ ನಾಗರಿಕರು ಓಣಿಗಳಲ್ಲಿ ಪೈಪಲೈನ ಹಾಕುವಾಗ ಸಹಕರಿಸಬೇಕು. ಇದು ಪ್ರತಿಯೊಂದು ಮನೆಗಳಿಗೆ ನೀರು ಸರಬರಾಜು ಆಗುತ್ತದೆ ಎಂದರು.
ದುರೀಣ ಸುರೇಶ ಬೆಲ್ಲದ, ಬಾಳೇಶ ಕುಚನೂರ, ಮಹಾದೇವ ಜಿವಣಿ, ಮಡ್ಡೇಪ್ಪ ನಿರ್ವಾಣಿ, ರಾಘವೇಂದ್ರ ದೇಶಪಾಂಡೆ, ಅಬ್ಬಾಸ ನದಾಫ, ಮಹಾದೇವ ಪ್ರಧಾನಿ, ಶಂಕರ ಮಹಾದ್ವಾರ, ಶಿದ್ರಾಮ ಹಿರೇಕೊಡಿ, ಸದಾಶಿವ ಘೋರೆ್ಡ ಮುಂತಾದವರು ಇದ್ದರು.