ಅಗ್ನಿ ಅವಘಡ : ಎಮ್ಮೆ ಮತ್ತು ಕರು ಬೆಂಕಿಗಾಹುತಿ
ಕಂಪ್ಲಿ 02: ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾ.ಪಂ. ವ್ಯಾಪ್ತಿಯ ಕೃಷ್ಣಾನಗರ ಕ್ಯಾಂಪಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಎಮ್ಮೆ, ಕರು, ಆಹಾರ ಪದಾರ್ಥಗಳು ಬೆಂಕಿಗಾಹುತಿಯಾಗಿವೆ. ಕೃಷ್ಣಾನಗರ ಕ್ಯಾಂಪಿನ ಬಿ.ರಾಜಗೋಪಾಲರಾವು ಎನ್ನುವವರ ಶೆಡ್ಡಿಗೆ ಆಕಷ್ಮಿಕವಾಗಿ ಬೆಂಕಿ ತಗುಲಿದ್ದು, ಶೆಡ್ಡಿನಲ್ಲಿ ಕಟ್ಟಿದ್ದ ಮೂರು ಎಮ್ಮೆಗಳು ಹಾಗೂ ಒಂದು ಎಮ್ಮೆ ಕರು ಸುಟ್ಟುಕರಕಲಾಗಿವೆ. ಜೊತೆಗೆ ಸಂಗ್ರಹಿಸಿದ್ದ ಆಹಾರ ಪಾದಾರ್ಥಗಳಾದ ಅಕ್ಕಿ, ಗೋದಿ ಸೇರಿದಂತೆ ಇತರೆ ಪದಾರ್ಥಗಳು ಸುಟ್ಟಿದ್ದು ಸುಮಾರು 4ಲಕ್ಷಕ್ಕಿಂತ ಅಧಿಕ ನಷ್ಟ ಸಂಭವಿಸಿದೆ. ಫೆ.001: ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾ.ಪಂ.ವ್ಯಾಪ್ತಿಯ ಕೃಷ್ಣಾನಗರ ಕ್ಯಾಂಪಿನಲ್ಲಿ ಆಕಷ್ಮಿಕ ಬೆಂಕಿಯಿಂದ ಶೆಡ್ ಹೊತ್ತಿ ಉರಿಯುತ್ತಿರುವುದು.