ಮುಂಬಯಿ, ಏ 30 ನಟ ರಣಬೀರ್ ಕಪೂರ್ ಜೊತೆ ಬ್ರೇಕ್ ಅಪ್ ಆದ ನಂತರ ಅದರಿಂದ ಚೇತರಿಸಿಕೊಳ್ಳಲು ಅಮ್ಮ ತುಂಬಾ ಸಹಾಯ ಮಾಡಿದ್ದಾರೆ ಎಂದು ಬಾಲಿವುಡ್ ಬಾಬರ್ಿ ಗಲರ್್ ಕತ್ರಿನಾ ಕೈಫ್ ಹೇಳಿದ್ದಾರೆ. ಹಲವು ಸಮಯದಿಂದ ಕತ್ರಿನಾ ಹಾಗೂ ರಣಬೀರ್ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಮದುವೆ ಮಾಡಿಕೊಳ್ಳುವ ಉತ್ಸಾಹದಲ್ಲಿ ಕೂಡ ಇದ್ದರು. ಆದರೆ, ಈ ಸಂಬಂಧ ಜಾಸ್ತಿ ದಿನ ಉಳಿದುಕೊಳ್ಳಲಿಲ್ಲ. ಬಹುಬೇಗನೆ ಅವರು ದೂರಾಗಿ ಬಿಟ್ಟರು. ಆದರೆ, ರಣಬೀರ್ ಆಗಲೀ, ಕತ್ರಿನಾ ಆಗಲೀ ಈ ವಿಷಯದ ಕುರಿತು ತುಟಿ ಬಿಚ್ಚಿರಲಿಲ್ಲ. ಈಗ ಕತ್ರಿನಾ ಮುಕ್ತವಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಜೀವನದಲ್ಲಿ ಮುಂದೆ ಸಾಗುವುದಕ್ಕಾಗಿ ನನಗೆ ದೂರಾಗುವುದು ಅನಿವಾರ್ಯವಾಗಿತ್ತು. ನನಗೆ ಎಲ್ಲ ನೋವನ್ನು ಅನುಭವಿಸಬೇಕಿತ್ತು. ಈ ಸಂಬಂಧದಲ್ಲಿ ನನ್ನಿಂದ ತಪ್ಪಿನ ಭಾಗದ ಹೊಣೆಯನ್ನು ನಾನೇ ಹೊತ್ತುಕೊಳ್ಳಬೇಕಿತ್ತು. ಜೀವನದ ಈ ಏರಿಳಿತದಲ್ಲಿ ನನ್ನ ತಾಯಿ ತುಂಬಾ ಸಹಾಯ ಮಾಡಿದ್ದಾರೆ ಎಂದು ಕತ್ರಿನಾ ಹೇಳಿದ್ದಾರೆ. ಅನೇಕ ಯುವತಿಯರು, ಮಹಿಳೆಯರು ಇಂತಹ ನೋವನ್ನು ಅನುಭವಿಸಿರುತ್ತಾರೆ. ಕೇವಲ ನೀನೊಬ್ಬಳೆ ಇದನ್ನು ಎದುರಿಸುತ್ತಿಲ್ಲ ಎಂದು ನಮ್ಮ ತಾಯಿ ಹೇಳಿದ್ದರು. ಅವರ ಈ ಸಾಂತ್ವನ ನನ್ನನ್ನು ಜೀವನದಲ್ಲಿ ಮುನ್ನುಗ್ಗುವಂತೆ ಮಾಡಿತು ಎಂದು ಹೇಳಿಕೊಂಡಿದ್ದಾರೆ. ಕತ್ರಿನಾ ಶೀಘ್ರವೇ ನಟ ಸಲ್ಮಾನ್ ಖಾನ್ ಅವರೊಂದಿಗೆ 'ಭಾರತ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಂಜಾನ್ ಹಬ್ಬದಂದು ಜೂನ್ 5ಕ್ಕೆ ಚಿತ್ರ ತೆರೆಕಾಣಲಿದೆ.