ಸಮಾಜ ಸೇವೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯ: ಗೋಣೆಣ್ಣವರ

ಲೋಕದರ್ಶನ ವರದಿ

ಶಿರಹಟ್ಟಿ 02: ಎನ್ಎಸ್ಎಸ್ ಶಿಬಿರ ಮೂಲಕ ಪಡೆದ ಸಮಾಜ ಸೇವೆಯ ಅನುಭವವನ್ನು ಶಿಬಿರದಲ್ಲಿ ಮಾತ್ರಕ್ಕೆ ಸೀಮಿತವಾಗದೇ ಜೀವದುದ್ದಕ್ಕೂ ಪಾಲಿಸುವುದು ಅವಶ್ಯವಿದೆ. ಸಮಾಜ ಸೇವೆ ನಮ್ಮ ಜೀವನದ ಅವಿಭಾಜ್ಯವಾಗಬೇಕು ಎಂದು ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಹೇಳಿದರು.

ಅವರು ತಾಲೂಕಿನ ಮಾಗಡಿ ಗ್ರಾಮದಲ್ಲಿ ಶಿರಹಟ್ಟಿ ಶ್ರೀ.ಜ.ಫ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ನಾಲ್ಕನೇ ದಿನದ ಕಾರ್ಯಕ್ರಮದ ಸಾರ್ವಜನಿಕ ಸೊತ್ತು ಸಾರ್ವಜನಿಕ ಹೊಣೆ ವಿಷಯದ ಉಪನ್ಯಾಸದಲ್ಲಿ ಮಾತನಾಡಿದರು.

ಗ್ರಾಮದ ಸ್ವಚ್ಛತೆ ಗ್ರಾಮದ ಸಾರ್ವಜನಿಕರ ಹೊಣೆಯಾಗಿರಬೇಕು. ಗ್ರಾಮದ ಪ್ರತಿಯೊಬ್ಬರೂ ಸ್ವಂತ ಶೌಚಾಲಯವನ್ನು ಹೊಂದಬೇಕು. ಅದನ್ನೇ ಬಳೆಸಬೇಕು. ಯಾರೂ ಕೂಡಾ ಬಯಲು ಸೌಚ್ಯವನ್ನು ಬಹಿಷ್ಕರಿಸಬೇಕು. ಸಾರ್ವಜನಿಕರ ಸಂಪತ್ತುಗಳನ್ನು ಯಾರೂ ಕೂಡಾ ಹಾಳು ಮಾಡಬಾರದು, ಅದು ಸಾರ್ವಜನಿಕರು ಸ್ವತ್ತು ಎನ್ನುವ ಪ್ರಜ್ಞೆ ನಮ್ಮೆಲ್ಲರಲ್ಲಿ ಬರಬೇಕು. ದೇಶದ ಹಿತಕಾಯುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಗಡಿ ಗ್ರಾಮ ಪಂಚಾಯತ ಉಪಾದ್ಯಕ್ಷ ಪ್ರಕಾಶ ಹೋರಿ ಮಾತನಾಡಿ, ಗ್ರಾಮದ ಅಭಿವೃದ್ದಿಗೆ ಗ್ರಾಮದ ಜನತೆಯ ಸಹಕಾರ ಅಗತ್ಯ. ಅದೇ ರೀತಿಯಲ್ಲಿ ಸಾರ್ವಜನಿಕ ಸಂಪತ್ತನ್ನು ಸಾರ್ವಜನಿಕರೇ ಸಂರಕ್ಷಿಸಬೇಕು. ಮಾಗಡಿ ಕೆರೆ ವಿದೇಶಿ ಹಕ್ಕಿಗಳ ವಾಸದಿಂದಾಗಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಕೆರೆಯ ಸಂರಕ್ಷಣೆ ಮತ್ತು ಅದರ ಸುತ್ತಮುತ್ತಲೂ ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲ ಜವಾಬ್ದಾರಿಯಾಗಿದೆ. ಕೆರೆಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಅವರಿಗೆಲ್ಲ ಸೌಕರ್ಯ ಒದಗಿಸಲುಸ್ವಯಂ ಪ್ರೇರಣೆಯಿಂದ ಮುಂದಾಗಬೇಕು.  ಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಠಪತಿ, ವೀರಯ್ಯ ಶಿವರಾಜಗೌಡ ಪಾಟೀಲ್, ಹಾಗೂ ಮಾಜಿ ಸೈನಿಕ ರಘುನಾಥರೆಡ್ಡಿ ಹೊಸಮನಿ,ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯ ಶಂಕರ ಕಡ್ಲಿಕೊಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮಾರುತಿ ಭಜೆಂತ್ರಿ, ಗಿರಿಜವ್ವ್ ಪಾಟೀಲ್, ಶ್ರೀನಿವಾಸ ಪತ್ತಾರ, ಶಿವಪ್ಪ ಗೊಬ್ಬರಗುಂಪಿ, ಕಾಲೇಜಿನ ಪ್ರಾಚಾರ್ಯ ಶಂಕರ ಶಿರಹಟ್ಟಿ, ಅನುಪಮಾ ಭಾತಖಂಡೆಹಾಗೂ  ಎನ್ಎಸ್ಎಸ್ ಶಿಬಿರಾಥರ್ಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.