ಲೋಕದರ್ಶನ ವರದಿ
ಗದಗ 24: ಭಾರತದ ಯುವಕರು ಇತ್ತೀಚಿಗೆ ಹಲವಾರು ವ್ಯಸನಗಳಿಗೆ ದಾಸರಾಗಿ ತಮ್ಮ ಸ್ವಾಸ್ತದ ಜೊತೆಗೆ ಸಮಾಜ ಹಾಗೂ ದೇಶದ ಸ್ವಾಸ್ತ ಹಾಳುಮಾಡಿ ಮಾನವ ಜನಾಂಗವನ್ನು ಅವನತಿಗೆ ದೂಡುತ್ತಿದೆ. ಕ್ಷಣಿಕ ಸುಖಕ್ಕಾಗಿ ಜೀವನವನ್ನೆ ನಾಶ ಮಾಡಿಕೊಳ್ಳುವ ಹಲವಾರು ವ್ಯಸನಗಳಿಂದ ಇಂದಿನ ಯುವ ಜನತೆ ದೂರವಿರಬೇಕಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ಕಾರ್ಯ ನಿರ್ವಹಿಸಿ ದುರಭ್ಯಾಸ ಹಾಗೂ ದುಷ್ಚಟಗಳಿಗೆ ದಾಸರಾದವರನ್ನು ಅದರಿಂದ ಮುಕ್ತಗೊಳಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಸದೃಢ ಸಮಾಜ ನಿಮರ್ಾಣಕ್ಕಾಗಿ ಇಂದಿನ ಯುವ ಜನತೆ ಸದಾಚಾರದ ಸನ್ನಡತೆಯತ್ತ ನಡೆಯಬೇಕಿದೆ. ಎಂದು ಸ್ವಾಸ್ಥ ಸಂಕಲ್ಪದ ಕುರಿತು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ನಾಗೇಶ ಹೇಳಿದರು ಅವರು ನಗರದ ಹೊಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಜಿ.ಉಳಿಗೇರವರು ಮಾತನಾಡಿ ಸಮಾಜದ ಅತ್ಮ ಆಗಿರುವ ಯುವ ಜನತೆ ಸದಾಚಾರದಲ್ಲಿ ನಡೆದಾಗ ಕುಟುಂಬ ಹಾಗೂ ಸಮಾಜ ಉತ್ತಮ ಸ್ವಾಸ್ಥ ಹೊಂದುತ್ತದೆ ಅದರಿಂದ ದೇಶದ ಏಳಿಗೆಗೆ ಸಹಾಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಪೂಜಾ ಹಿರೇಮಠ ಪ್ರಾರ್ಥಿಸಿದರೆ ಅಮೃತಾ ಗೋಕಾವಿ ನಿರೂಪಣೆ ಮಾಡಿದರು ವೇದಿಕೆಯ ಮೇಲೆ ಚಂದ್ರಶೇಖರ ಡಿ. ಎಸ್.ಎನ್. ಶ್ಯಾಗೋಟಿ, ಶಶಿಕಾಂತ ಕೊರ್ಲಹಳ್ಳಿ ಉಪಸ್ಥಿತರಿದ್ದರು ಸೇರಿದ ವಿದ್ಯಾರ್ಥಿ ಗಳಿಗೆ ದುಷ್ಚಟಗಳಿಂದ ದೂರವಿರುವ ಹಾಗೂ ದುಷ್ಚಟಗಳನ್ನು ತ್ಯಜಿಸುವ ಸಂಕಲ್ಪ ಮಾಡಿಸಲಾಯಿತು.