ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸಿ, ಪ್ರಾತಿನಿಧ್ಯ ನೀಡಿ : ಮಣ್ಣೂರು ನಾಗರಾಜ
ಕಂಪ್ಲಿ 12: ಗಂಗಾಮತ ಸಮಾಜದವರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು, ರಾಜ್ಯ ಸರ್ಕಾರವು ಅತಿ ಮುತುವರ್ಜಿವಹಿಸಿ, ಕೇಂದ್ರಕ್ಕೆ ಕಳುಹಿಸಿ, ಎಸ್ಟಿಗೆ ಸೇರೆ್ಡ ಮಾಡಬೇಕು ಎಂದು ಗಂಗಾಮತ ಸಮಾಜದ ರಾಜ್ಯ ಉಪಾಧ್ಯಕ್ಷ ಮಣ್ಣೂರು ನಾಗರಾಜ ಹೇಳಿದರು. ತಾಲೂಕು ಸಮೀಪದ ಎಂ.ಸೂಗೂರು ಗ್ರಾಮದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಗಂಗಾಮತ ಸಮಾಜದ ರಾಜ್ಯ ಉಪಾಧ್ಯಕ್ಷ ಮಣ್ಣೂರು ನಾಗರಾಜ ಮಾತನಾಡಿ, ಅಂಬಿಗ, ಕಬ್ಬೇರು, ಕೋಲಿ, ಬೆಸ್ತಾ, ಬಾರಿಕರು, ಮಗುವೀರ ಒಳಗೊಂಡಂತಹ ಮೂಲ ದಾಖಲೆಗಳೊಂದಿಗೆ ರಾಜ್ಯ ಸರ್ಕಾರದ ಮುಖೇನ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ರಾಜಕಾರಣಿಗಳು, ಎಲ್ಲಾ ಸಮುದಾಯದವರು ಎಸ್ಟಿ ಸೇರೆ್ಡಗೆ ಬೆಂಬಲ ನೀಡಬೇಕು. ರಾಜ್ಯಾಧ್ಯಕ್ಷ ಮೌಲಾಲಿ ನೇತೃತ್ವದಲ್ಲಿ ಗಂಗಾಮಾತೆ ದೇವಸ್ಥಾನ, ಹಾಸ್ಟೆಲ್ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಶುಭ ಕಾರ್ಯಗಳಿಗೆ ಗಂಗೆಪೂಜೆ ಮಹತ್ವದ್ದಾಗಿದೆ. ನಾಡಿನಲ್ಲಿ ಸಮೃದ್ಧ ಮಳೆ, ಬೆಳೆಯಾಗಲಿದೆ. ಅಂಬಿಗರು ನಂಬಿಗಸ್ಥರಾಗಿದ್ದಾರೆ. ಅಂಬಿಗರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಒಗ್ಗಟ್ಟು, ಒಮ್ಮತದೊಂದಿಗೆ ಹೋರಾಟ ಮಾಡಿದಾಗ ಮಾತ್ರ ಬಹುಬೇಡಿಕೆ ಎಸ್ಟಿ ಸೇರೆ್ಡಯಾಗಲು ಸಾಧ್ಯ ಎಂದರು. ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಜ್ಞಾನಾರ್ಜನೆಯೊಂದಿಗೆ ಕತ್ತಲಿನಿಂದ ಬೆಳಕಿನ ಕಡೆಗೆ ಸಾಗಬೇಕು. ಮಕ್ಕಳಿಗೆ ವಿದ್ಯೆ ಕೊಟ್ಟರೆ, ಮುಂದಿನ ಪೀಳಿಗೆಗೆ ಒಳ್ಳೆಯ ಭವಿಷ್ಯ ಕೊಡಬಹುದು. ನಮ್ಮ ಎರಡು ಅವಧಿಯಲ್ಲಿ ಹಾಸ್ಟೆಲ್ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯದೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ನಿಮ್ಮ ಹೋರಾಟಕ್ಕೆ ಸದಾ ಬೆಂಬಲ ನೀಡಲಾಗುವುದು ಎಂದರು. ಗಂಗಾಮತ ಸಮಾಜದ ರಾಜ್ಯಾಧ್ಯಕ್ಷ ಮೌಲಾಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಉಪನ್ಯಾಸಕ ಧಳವಾಯಿ ವಿಶೇಷ ಉಪನ್ಯಾಸ ನೀಡಿದರು. ಪುರೋಹಿತರಾದ ಹೆಚ್.ಸುಧೀಂದ್ರ ಆಚಾರ್, ಹೆಚ್.ಸುಶಿಲೇಂದ್ರ ಆಚಾರ್ ನೇತೃತ್ವದಲ್ಲಿ ನೂತನ ಗಂಗಾಪರಮೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಾಲಯ ಉದ್ಘಾಟನೆ ನಿಮಿತ್ಯ ಜಲಾಸ್, ಧಾನ್ಯ, ಪುಷ್ಪವಾಸ ಹೋಮ ಹವನ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿತು. ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿ, ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ, ಗಂಗಾಮತ ಸಮಾಜದ ಅಧ್ಯಕ್ಷ ಎಂ.ಎಚ್.ವಿರೇಶ, ಉಪಾಧ್ಯಕ್ಷ ಜಿಬಿ ವೀರಣ್ಣ, ಖಜಾಂಚಿ ಜಿವಿ ರಾಮಲಿಂಗಪ್ಪ, ಮುಖಂಡರಾದ ಬಾರಿಕರ ಮಲ್ಲಿಕಾರ್ಜುನ, ಧಳಪತಿ ಪಕ್ಕೀರ್ಪ, ಕೆಎಸ್ ಬಸವರಾಜಪ್ಪ, ಹುಲುಗಪ್ಪ, ಮೊಸಳೆ ತಿಮ್ಮಪ್ಪ, ದೊಡ್ಡ ಈರಣ್ಣ, ಟಿ.ವೆಂಕೋಬ, ಕೊಟೇಶ್ವರಮ್ಮ, ಡಿ.ವಿ.ಸುಬ್ಬಾರಾವ್, ಬಾಗೋಡಿ ಅನ್ನಪೂರ್ಣ, ಎಸ್.ಎಂ.ಬಸವಣ್ಣಯ್ಯಸ್ವಾಮಿ, ಡಿ.ಕೆ.ಭಾಸ್ಕರ್ ರಾವ್, ಇಟಗಿ ವಿರೇಶ ಸೇರಿದಂತೆ ಅನೇಕರಿದ್ದರು.
ಫೆ.002: ಸಮಾರಂಭವನ್ನು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಇವರು ಉದ್ಘಾಟಿಸಿದರು.