ಹಿಂದುಳಿದ ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸಿ: ಎಲೆಗಾರ ನಾಗರಾಜ ಒತ್ತಾಯ

Add Backward Gangamen to ST: Elegara Nagaraja insists

ಹಿಂದುಳಿದ ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸಿ: ಎಲೆಗಾರ ನಾಗರಾಜ ಒತ್ತಾಯ 

ಕಂಪ್ಲಿ 21: ಶರಣ ಅಂಬಿಗರ ಚೌಡಯ್ಯನವರು ನೇರ, ನಿಷ್ಠುರವಾದಿ ಆಗಿದ್ದರು. ವಚನಗಳಿಂದ ಅವರ ವ್ಯಕ್ತಿತ್ವದ ಅರಿವಾಗುತ್ತದೆ ಎಂದು ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಎಲೆಗಾರ್ ನಾಗರಾಜ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗಂಗಾಮತಸ್ಥರು ಮೃದು ಸ್ವಭಾವ ಉಳ್ಳವರು. ಎಲ್ಲ ಸಮುದಾಯಗಳ ಜತೆ ಉತ್ತಮ ಬಾಂಧವ್ಯದೊಂದಿಗೆ ಬೆರೆತು ಬದುಕನ್ನು ಕಟ್ಟಿಕೊಂಡವರು. ಆದರೆ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ್ದು, ಸರ್ಕಾರ ಗಂಗಾಮತ ಸಮಾಜದ ಏಳಿಗೆಗಾಗಿ ವಿಶೇಷ ಯೋಜನೆಗಳನ್ನು ಕಲ್ಪಿಸಬೇಕಾಗಿದೆ.  

ಈ ಸಮಾಜದ ಅಭಿವೃದ್ಧಿಗಾಗಿ ಕೂಡಲೇ ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸಬೇಕೆಂದು ಒತ್ತಾಯಿಸಿದರು. ಗ್ರೇಡ್‌-2 ತಹಶೀಲ್ದಾರ್ ಷಣ್ಮುಕಪ್ಪ ಮಾತನಾಡಿ, ಜಾತ್ಯತೀತ ಸಮಾಜ ನಿರ್ಮಿ ಸುವ ಉದ್ದೇಶದಿಂದ ಹೋರಾಡಿದ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು, ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪರಂಪರೆ ಹುಟ್ಟಿಕೊಂಡಿದೆ. ಸಂತರ, ಶರಣರ, ದಾರ್ಶನಿಕರ, ಮಹನೀಯರ ಜಯಂತಿ ಆಚರಣೆಗೆ ಸೀಮಿತವಾಗದೆ, ಅವರ ತತ್ವಾದರ್ಶ ಪಾಲಿಸಬೇಕು ಎಂದರು. ಇಲ್ಲಿನ ಸಭಾಂಗಣದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ವಿಶೇಷ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಲಾಯಿತು.  

ಜಯಂತಿ ನಿಮಿತ್ಯ ಕಂಪ್ಲಿ-ಕೋಟೆಯ ತುಂಗಭದ್ರ ಸೇತುವೆ ಬಳಿಯಲ್ಲಿರುವ ಅಂಬಿಗರ ಚೌಡಯ್ಯ ವೃತ್ತದಲ್ಲಿ ನಾಮಫಲಕಕ್ಕೆ ಪೂಜೆ ಸಲ್ಲಿಸಿ, ನಂತರ ಬೈಕ್ ರ್ಯಾಲಿ ನಡೆಸಿ, ತದನಂತರ ಶಿಬಿರದಿನ್ನಿ(ಮಾರುತಿನಗರ)ದಲ್ಲಿ ಅಂಬಿಗರ ಚೌಡಯ್ಯ ನಾಮಫಲಕ ಅನಾವರಣಗೊಳಿಸಿ, ತಹಶೀಲ್ದಾರ್ ಕಛೇರಿಗೆ ತೆರಳಿ, ಜಯಂತಿ ಆಚರಿಸಿದರು. ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ಕೆ.ಪ್ರಕಾಶ, ಮುಖಂಡರಾದ ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಅಯೋಧ್ಯ ವೆಂಕಟೇಶ, ಬಿ.ವೀರ​‍್ಪ, ಕೆ.ವೀರಭದ್ರ​‍್ಪ, ಕಟ್ಟೆ ಸಣ್ಣ ದುರುಗಪ್ಪ, ಬಿ.ರಮೇಶ, ಎಸ್‌.ಸುರೇಶ, ಯು.ವೆಂಕಟೇಶ, ಯು.ವಿರುಪಣ್ಣ, ಎಸ್‌.ನಂದೆಪ್ಪ, ಸೆರೆಗಾರ ನಾಗರಾಜ, ಮಾರುತಿ,  ಬಸವರಾಜ, ಶಿವು, ಎ.ರಮೇಶ, ಇಟಗಿ ಈರಣ್ಣ, ಎಂ.ಭರತ್,  ಪರಶುರಾಮ, ಎಸ್‌.ಯಮನಪ್ಪ, ಪಂಪಾಪತಿ, ಮಂಜು, ವಿನೋದ, ಆಟೋ ಮಂಜು, ಶಿವು, ಹುಲೇಶ, ದುರುಗೇಶ, ಕಟ್ಟೆ ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.  ಜ.001: ಕಂಪ್ಲಿಯ ಮಾರುತಿನಗರದಲ್ಲಿ ಅಂಬಿಗರ ಚೌಡಯ್ಯ ನಾಮಫಲಕ ಉದ್ಘಾಟಿಸಲಾಯಿತು.