ಲೋಕದರ್ಶನ ವರದಿ
ಅಥಣಿ08: ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ಬಾಬು ಜಗಜೀವನರಾಮ ಅವರ ತತ್ವಾದರ್ಶಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಥಣಿ ತಹಸಿಲ್ದಾರ ಎಮ್.ಎನ್.ಬಳಿಗಾರ ಹೇಳಿದರು. ಅವರು ಬಾಬು ಜಗಜೀವನರಾಮ ಅವರ 112 ನೇ ಜನ್ಮ ದಿನಾಚಾರಣೆಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾಜದ ಮುಖ್ಯವಾಹಿನಿಯಲ್ಲಿ ಬರಬೇಕಾದಲ್ಲಿ ಶಿಕ್ಷಣ ಬಹು ಮುಖ್ಯ ಪಾತ್ರ ವಹಿಸುತ್ತದೆ, ಶಿಕ್ಷಣ ಸಮಾಜದಲ್ಲಾಗುವ ನ್ಯಾಯ ಅನ್ಯಾಯಗಳ ಬಗೆಗೆ ಕಣ್ಣು ತೆರೆಸುತ್ತದೆ ಎನ್ನುವದನ್ನು ಬಾಬು ಜಗಜೀವನರಾಮ ಅವರು ಹೇಳಿಕೊಟ್ಟಿದ್ದಾರೆ, ಅವರ ನುಡಿಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದರಿಂದ ಸಮಾಜದಲ್ಲಿ ಸಮಾನತೆಯನ್ನು ಕಾಣಲು ಸಾಧ್ಯ ಎಂದರು.
ಇದೆ ಸಮಯದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ತಮ್ಮ ಪವಿತ್ರವಾದ ಮತದಾನ ಮಾಡಬೇಕು. ತಮ್ಮ ಎಷ್ಟೇ ಕಾರ್ಯಗಳು ಇದ್ದರು ಸಹ ಮತದಾನವನ್ನು ಮಾಡುವದು ತಪ್ಪಿಸಬಾರದು ಎಂದು ಹೇಳಿದ ಅವರು ಯುವಕರು, ಹಿರಿಯರು ಪ್ರತಿಯೋಬ್ಬರು ಮತದಾನದ ಮಹತ್ವವನ್ನು ಜನರಿಗೆ ತಿಳಿಸಿ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಡಾ. ದಾಣೆ ರಾಜೇಂದ್ರ ಮಾಣಿಕರಾವ ಮಾತನಾಡಿ ಸಾಮಾಜಿಕ ಸಮಾನತೆಗಾಗಿ ಬಾಬು ಜಗಜೀವನರಾಮ ಶ್ರಮಪಟ್ಟಿದ್ದಾರೆ. ಅದರ ಲಾಭ ಜನಸಾಮಾನ್ಯರಿಗೆ ಸಿಗಬೇಕು. ಅದಕ್ಕಾಗಿ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದ ಅವರು ಸಾಮಾಜಿಕ ಸಮಾನತೆಗೆ ಆಥರ್ಿಕ ಪ್ರಗತಿ ಅತಿ ಮುಖ್ಯ, ಆಥರ್ಿಕ ಪ್ರಗತಿ ಹಸಿರು ಕ್ರಾಂತಿಯಿಂದ ಮಾತ್ರ ಸಾಧ್ಯ ಎಂದು ತಿಳಿದಿದ್ದ ಅವರು ಅದಕ್ಕಾಗಿ ಹಸಿರು ಕ್ರಾಂತಿಗೆ ಶ್ರಮಿಸಿದರು ಎಂದರು.
ಇನ್ನೋರ್ವ ಅತಿಥಿ ಉಪನ್ಯಾಸಕ ಶಿವಾನಂದ ಮಬ್ರುಕರ ಮಾತನಾಡಿ ನಾವು ಅವರು ಹಾಕಿದ ದಾರಿಯಲ್ಲಿ ಸಾಗಿ ಸಮಾಜದಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕು ದೊರಕಿಸುವದಕ್ಕೆ ದುಡಿಯಬೇಕು ಎಂದು ಹೇಳಿದರು.
ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿ ರವಿಂದ್ರ ಬಂಗಾರೆಪ್ಪನವರ, ಅಥಣಿ ಪೊಲೀಸ್ ಉಪ ಅಧೀಕ್ಷಕರಾದ ರಾಮಣ್ಣ ಬಸರಗಿ, ಕ್ಷೇತ್ರ ಶಿಕ್ಷಣ ಅಧಿಕಾರಿ ಸಿ.ಎಮ್.ನೇಮಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದರ್ೆಶಕ ಬಿ.ಎಸ್.ಯಾದವಾಡ, ಪುರಸಭೆ ಮುಖ್ಯಾಧಿಕಾರಿ ಕೆ.ಬಿ.ಈರಣ್ಣಾ, ನಾರಾಯಣ ಹೋನಕಾಂಡೆ, ಅನೀಲ ಸೌದಾಗರ, ಶೇಖರ ಸೌದಾಗರ, ದಿಲಿಪ್ ಕಾಂಬಳೆ, ಮಿಲಿಂದ ಯಳಮಲಿ ಉಪಸ್ಥಿತರಿದ್ದರು.
ಬಿ.ಎಸ್.ಯಾದವಾಡ ಸ್ವಾಗತಿಸಿದರು, ವಾಮನ ಕುಲಕಣರ್ಿ ನಿರೂಪಿಸಿದರು, ಅರುಣ ಯಲಗುದ್ರಿ ವಂದಿಸಿದರು.