ಗದಗ 08: ಮಲಪ್ರಭಾ ನದಿ ಒಳಹರಿವು ಹೆಚ್ಚಿದ್ದು ನವಲುತೀರ್ಥ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗದಗ ಜಿಲ್ಲಾಡಳಿತವು ಮಂಗಳವಾರ ಸಂಜೆಯಿಂದಲೇ ನದಿ ಪಾತ್ರದಲ್ಲಿ ನೆರೆ ಹಾವಳಿಯಿಂದಾಗಿ ಬಾಧಿತಗೊಳ್ಳುವ ನರಗುಂದ ತಾಲೂಕಿನ ಬೂದಿಹಾಳ, ಲಕಮಾಪುರ ಹಾಗೂ ವಾಸನ ಗ್ರಾಮಸ್ಥರನ್ನು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನುಡಿದರು.
ನರಗುಂದ ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯತಿಯಲ್ಲಿ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಮಲಪ್ರಭಾ ಹಾಗೂ ಬೆಣ್ಣ ಹಳ್ಳ ಪ್ರವಾಹದಿಂದ ಹಾನಿಗೊಳಗಾಗುವ ಜನವಸತಿ ಪ್ರದೇಶಗಳ ಗ್ರಾಮಸ್ಥರಿಗೆ ನರಗುಂದದಲ್ಲಿ ನಾಲ್ಕು ಹಾಗೂ ರೋಣದಲ್ಲಿ 2 ಪರಿಹಾರ ಕೇಂರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು. ನರಗುಂದ ತಾಲೂಕಿನ ಕೊಣ್ಣೂರ ಗ್ರಾಮಕ್ಕಾಗಿ ಎಪಿಎಂಸಿ ಕೊಣ್ಣೂರನಲ್ಲಿ 1776 ಕುಟುಂಬ ಒಟ್ಟು 9069 ಜನರು, ವಾಸನ ಹಾಗೂ ಲಕಮಾಪುರ ಗ್ರಾಮಕ್ಕಾಗಿ ಕೆ.ಇ.ಎಸ್. ಪ್ರೌಢಶಾಲೆ ಕೊಣ್ಣೂರನಲ್ಲಿ 265 ಕುಟುಂಬಗಳ 1421 ಜನರು, ಹೊಸ ಬೂದಿಹಾಳ ಗ್ರಾಮಸ್ಥರಿಗಾಗಿ 192 ಕುಟುಂಬದ 842 ಜನರಿಗಾಗಿ ಹಾಗೂ ವಾಸನ ಗ್ರಾಮದಲ್ಲಿ 160 ಕುಟುಂಬಗಳ 809 ಜನರಿಗಾಗಿ ಇನ್ನೊಂದು ಪರಿಹಾರ ಕೇಂದ್ರ ತೆರೆಯಲಾಗಿದೆ. ನರಗುಂದದ 4 ಪರಿಹಾರ ಕೇಂದ್ರಗಳಲ್ಲಿ ಸದ್ಯ ಒಟ್ಟು 2393 ಕುಟುಂಬಗಳ 12,141 ಜನರು ಆಶ್ರಯ ಪಡೆದಿದ್ದಾರೆ. ರೋಣದ ಹೊಸ ಕುರುವಿನಕೊಪ್ಪದಲ್ಲಿ 40 ಕುಟುಂಬಗಳ 350 ಜನರಿಗೆ ಹಾಗೂ ಮೆಣಸಗಿ ಗ್ರಾಮದಲ್ಲಿ 424 ಕುಟುಂಬಗಳ 907 ಜನರಿಗಾಗಿ ಪರಿಹಾರ ಕೇಂದ್ರಗಳಲ್ಲಿ ಆಯಾ ಗ್ರಾಮಗಳಲ್ಲಿ ಆರಂಭಿಸಲಾಗಿದೆ. ಸದ್ಯ ಒಟ್ಟಾರೆ 6 ಪರಿಹಾರ ಕೇಂದ್ರಗಳಲ್ಲಿ 2857 ಕುಟುಂಬಗಳ 13,398 ಜನರಿಗೆ ಪರಿಹಾರ ಕೇಂದ್ರದಲ್ಲಿ ಜಿಲ್ಲಾಡಳಿತವು ಆಶ್ರಯ ಒದಗಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ನರಗುಂದ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ ಅವರು ಮಾತನಾಡಿ ಮಲಪ್ರಭಾ ನದಿ ನವಿಲುತೀರ್ಥ ಜಲಾಶಯ ತುಂಬಿದ್ದು ಒಳಹರಿವಿನ ಎಲ್ಲ ನೀರನ್ನು ಹೊರಬಿಡುವುದಾಗಿ ತಿಳಿಸಿದ್ದಾರೆ ಎಂದರು. ಈಗಾಗಲೇ 52 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಟ್ಟಿದ್ದು ಇದ್ದು 70 ಸಾವಿರ ಕ್ಯೂಸೆಕ್ಟ್ ಗೆ ಹೆಚ್ಚಳವಾಗಲಿದ್ದು ಮಲಪ್ರಭಾ ನದಿ ಪಾತ್ರದ ಇಷ್ಟೊಂದು ನೀರಿನ ಪ್ರಮಾಣ ಹಿಂದೆಂದೂ ಇರಲಿಲ್ಲ. ಇದಲ್ಲದೇ ಸತತ ಮಳೆಯಿಂದ ಬೆಣ್ಣೆ ಹಳ್ಳವು ತುಂಬಿ ಹರಿಯುವ ಸ್ಥಿತಿಯಲ್ಲಿದ್ದು ನೆರೆ ಪರಿಸ್ತಿತಿ ಉಲ್ಭಣಗೊಳ್ಳುವು ಸಾಧ್ಯತೆ ಹೆಚ್ಚಿದೆ. ಇದರಿಂದ ನರಗುಂದ ಲಕಮಾಪುರದಿಂದ ರೋಣ ಕುರುಗೋವಿನಕೊಪ್ಪವರೆಗೆ 13 ಗ್ರಾಮಗಳು ನೆರೆಯ ಸ್ಥಿತಿ ಎದುರಿಸಲಿವೆ. ಈ ಗ್ರಾಮಸ್ಥರು ತಮ್ಮ ಹಾಗೂ ಜಾನುವಾರುಗಳ ರಕ್ಷಣೆಗಾಗಿ ತಕ್ಷಣವೇ ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತಿರುವ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಮನವಿ ಮಾಡಿದರು. ಸ್ಥಳಾಂತರಿತ ಜನರ ತಾತ್ಕಾಲಿಕ ವಸತಿ, ಗಂಜಿ ಕೇಂದ್ರ , ವೈದ್ಯಕೀಯ ಸೌಲಭ್ಯ ಹಾಗೂ ಜಾನುವಾರುಗಳಿಗೆ ರಕ್ಷಣೆ ಕುರಿತು ಜಿಲ್ಲಾಡಳಿತವು ಎಲ್ಲ ಕ್ರಮ ಜರುಗಿಸಿದೆ. ಹೆಚ್ಚುವರಿ ಅಗತ್ಯಕ್ಕೆ ತಕ್ಕಂತೆ ಗಂಜಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದ ಶಾಸಕ ಸಿ.ಸಿ.ಪಾಟೀಲರು ತಾವು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ನರಗುಂದ, ರೋಣ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ್ದು ರಾಷ್ಟ್ರೀಯ, ರಾಜ್ಯ ವಿಪತ್ತು ನಿರ್ವಹಣೆ ತಂಡವೊಂದನ್ನು ಕಳಿಸಲು ಮನವಿ ಮಾಡಿರುವುದಾಗಿ ತಿಳಿಸಿದರು. ನರಗುಂದ ಹಾಗೂ ರೋಣದ ನೆರೆ ಬಾಧಿತಗೊಳ್ಳುವ ಗ್ರಾಮಸ್ಥರಿಗೆ ರಾಜ್ಯ ಸಕರ್ಾರದಿಂದ ದೊರಕಬೇಕಾದ ಎಲ್ಲ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಲು ಕ್ರಮ ವಹಿಸುತ್ತಿದ್ದು ಯಾವುದೇ ಕಾರಣಕ್ಕೆ ಜನರು ಆತಂಕಗೊಳ್ಳಬಾರದು ಎಂದು ಶಾಸಕ ಸಿ.ಸಿ.ಪಾಟೀಲ ತಿಳಿಸಿದರು.
ಜಿಲ್ಲಾ ಪೊಲೀಸ ವರಿಷ್ಟಾದಿಕಾರಿ ಶ್ರೀನಾಥ ಜೋಶಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಉಪಕಾರ್ಯದಶರ್ಿ ಪ್ರಾಣೇಶ ರಾವ್, ನರಗುಂದ ತಹಶೀಲ್ದಾರ ಕೋರಿಶೆಟ್ಟರ್, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಕನಕರೆಡ್ಡಿ ಉಪಸ್ಥಿತರಿದ್ದರು.