ಲೋಕದರ್ಶನ ವರದಿ
ಗಜೇಂದ್ರಗಡ 05: ವಿದ್ಯಾರ್ಥಿಗಳ ಸರ್ವಾಭಿಮುಖ ಬೆಳವಣಿಗೆಗೆ ಪಠ್ಯದಂತೆ ಪಠ್ಯೇತರ ಚಟುವಟಿಕೆಗಳು ಅವಶ್ಯವಾಗಿವೆ.
ಪ್ರತಿಯೋಬ್ಬರು ಇಂದಿನ ಸ್ಪಧರ್ಾತ್ಮಕ ಜಗತ್ತಿಗೆ ಒಗ್ಗಿಸಿಕೋಳ್ಳಬೆಕೇಂದರೆ ಪರಿಶ್ರಮ ಅಗತ್ಯವಾಗಿದೆ. ಸಾಧನೆಗೆ ಯಾವುದೇ ವಾಮಾ ಮಾರ್ಗಗಳಿಲ್ಲ ಕಠಿಣ ಪರಿಶ್ರಮದಿಂದಲೇ ಮಾತ್ರ ಸಾಧನೆ ಸಾಧ್ಯ ಎಂದು ಸವರ್ೋದಯ ಮಹಿಳಾ ಪ.ಪೂ ಕಾಲೇಜಿನ ಪ್ರಾಚಾರ್ಯ ಬಿ.ಕೆ.ಮಾದಿ ಹೇಳಿದರು.
ಅವರು ಸಮೀಪದ ಇಟಗಿ ಗ್ರಾಮದ ಚಾಂಗದೇವ ಪದವಿ ಪೂರ್ವ ಮಹಾವಿದ್ಯಾಲಯದ ಸಾಂಘಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮೌಲ್ಯಯುತ ಜೀವನ ನಮ್ಮದಾಗಬೆರಕು ರಾಷ್ಟ್ರೀಯ ಲಾಂಛನಗಳನ್ನ ಗೌರವಿಸಬೇಕು ಅಂದಾಗಲೇ ಮುಂದಿನ ಸಮಾಜ ಸದೃಢ ಭಾರತ ನಿಮರ್ಿಸಲು ಸಾಧ್ಯವಾಗುತ್ತದೆ ಎಂದರು. ಆದರ್ಶ ಮಹಾವಿದ್ಯಾಲಯದ ಮುಖ್ಯೋಪಾಧ್ಯಯರಾದ ಕೆ.ಪಿ.ಹಿರೇಮಠ ಮಾತನಾಡಿ ವೇಳಾ ಪತ್ರಿಕೆಗೆ ಅನುಗುಣವಾಗಿ ವಿಷಯಗಳನ್ನು ಅಥರ್ೈಸಿಕೊಂಡು ನಿರಂತರ ಕಾಲೇಜಿಗೆ ಬರುವ ಮೂಲಕ ವಿಷಯಗಳನ್ನು ಮನನ ಮಾಡಿಕೊಂಡರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಯು.ಎಸ್. ಮಲಗಲಾಪುರ ಮಾತನಾಡಿ ಸಂಸ್ಥೆ ಬೆಳೆದು ಬಂದ ಹಾದಿಯನ್ನು ಮೆಲುಕುಹಾಕಿ ವಿದ್ಯಾಥರ್ಿಗಳೇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥಾಪಕರಾದ ಬೀಬಿಜಾನ್ ದರಗಾದ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮೈಲಾರಪ್ಪ ಜಡದೇಲಿ, ಬೀಮಪ್ಪ ತಳವಾರ, ಅಪ್ಪಯ್ಯ ಹಿರೇಮಠ, ಎಸ್ ಎಲ್ ಹಂಚಿನಾಳ, ನಿವೃತ್ತ ಯೋಧರು, ಉಪಸ್ಥಿತರಿದ್ದರು, ರಾಜ್ಯಶಾಸ್ತ್ರದ ಉಪನದಯಾಸಕರು ಸ್ವಾಗತಿಸಿದರೆ ಅರ್ಥಶಾಸ್ತ್ರದ ಉಪನ್ಯಾಸಕರು ವಂದಿಸಿದರು. ಪ್ರಾಚಾರ್ಯ ಬಿ ವಾಯ್ ಗಂಜಿಯವರು ಕಾರ್ಯಕ್ರಮ ನಿರೂಪಿಸಿದರು ನಂತರ ಪ್ರತಿಭಾನ್ವೇಷನೆ ಕಾರ್ಯಕ್ರಮ ಜರುಗಿದವು.