ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ಧರ್ಮಟ್ಟಿ

ಕಡಬಿ 04: ಸತತ ಪರಿಶ್ರಮ ಮತ್ತು ಶ್ರದ್ಧಾ ಮನೋಭಾವದಿಂದ ಸಾಗಿದರೆ ಯಾವ ಸಾಧನೆಯೂ ಕಷ್ಟಕರವಲ್ಲ. ಸಾಧನೆಗೆ ಎಷ್ಟೇ ಅಡೆತಡೆಗಳಾದರೂ ಸಾಧಕರು ಹಿಂಜರಿಯಬಾರದು. ಮುಗಳಿಹಾಳ ಗ್ರಾಮದ ಶಾಲಾ ವಿದ್ಯಾಥರ್ಿಗಳು ಉತ್ತಮ ಸಾಧನೆ ಮಾಡಿದ್ದು. ಅವರ ಸಾಧನೆಗೆ ಮಾರ್ಗದರ್ಶನ ಮಾಡಿದ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಗ್ರಾಪಂ ಉಸ್ತುವಾರಿ ಸದಸ್ಯ ರಾಮಸಿದ್ದಪ್ಪ ಧರ್ಮಟ್ಟಿ ಹೇಳಿದರು.

ಅವರು ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಶನಿವಾರ ದಿ.2 ರಂದು ನಡೆದ ಸನ್ಮಾನ ಕಾರ್ಯಕ್ರಮ ಹಾಗೂ 7ನೇ ವರ್ಗದ ವಿದ್ಯಾಥರ್ಿಗಳ ಬಿಳ್ಕೋಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಂತರ ಅವರು ಗ್ರಾಮದ ಶಾಲೆಗಳಲ್ಲಿ ಕಲಿತು ಸಕರ್ಾರಿ ನೌಕರಿ ಹೋದ 26 ವಿದ್ಯಾಥರ್ಿಗಳ ಪಾಲಕರಿಗೆ ಸನ್ಮಾನಿಸಲಾಯಿತು.

ಅಧ್ಯಕ್ಷತೆ ಆರ್.ಎಲ್.ಧರ್ಮಟ್ಟಿ ವಹಿಸಿದರು. ತಾಪಂ ಸದಸ್ಯೆ ಮಂಜುಳಾ ಬೆಲ್ಲದ. ಗ್ರಾಪಂ ಸದಸ್ಯರಾದ ವಿಠ್ಠಲ ದಳವಾಯಿ, ಲಕ್ಷ್ಮಣ ಕತ್ತಿ, ಹನಮಂತ ದಳವಾಯಿ, ಮುತ್ತೆಪ್ಪ ಗಾಣಗಿ, ಕಲ್ಲಪ್ಪ ನಾವಿ, ವಿಠ್ಠಲ ಮಾಲದಿನ್ನಿ, ಮುಂತಾದವರು ಉಪಸ್ಥಿತರಿದ್ದರು.